ನವದೆಹಲಿ: ವಿಶ್ವದಾದ್ಯಂತ ಹಬ್ಬಿರುವ ಮಹಾಮಾರಿ ಕೊರೊನಾ ವೈರಸ್ನಿಂದಾಗಿ ಸರ್ವೋಚ್ಛ ನ್ಯಾಯಾಲಯವನ್ನು ಸಂಪೂರ್ಣವಾಗಿ ಬಾಗಿಲು ಮುಚ್ಚಲು ಸಾಧ್ಯವಿಲ್ಲ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಸ್ಪಷ್ಟಪಡಿಸಿದ್ದಾರೆ.
ಸುಪ್ರೀಂ ಕೋರ್ಟ್ನ ನಾಲ್ವರು ನ್ಯಾಯಮೂರ್ತಿಗಳು, ನವದೆಹಲಿಯ ಏಮ್ಸ್‌ನ ರಂದೀಪ್ ಗುಲೇರಿಯಾ ಸೇರಿದಂತೆ ಖ್ಯಾತ ವೈದ್ಯರೊಂದಿಗೆ ಸಿಜೆಐ ಎಸ್ ಎ ಬೊಬ್ಡೆ ಸಭೆ ನಡೆಸಿದರು. ದೇಶದಲ್ಲಿನ ಸದ್ಯದ ಪರಿಸ್ಥಿತಿ ಮತ್ತು ತಡೆಗಟ್ಟಲು ತೆಗೆದುಕೊಳ್ಳಬಹುದಾದ ಕ್ರಮಗಳ ಬಗ್ಗೆ ಬೊಬ್ಡೆ ಅವರೊಂದಿಗೆ ಮಾತುಕತೆ ನಡೆಸಿದರು. ಅಲ್ಲದೆ ಮಾರಕ ಕಾಯಿಲೆಯ ಹರಡುವಿಕೆ ತಡೆಗಟ್ಟುವ ಕ್ರಮಗಳ ಕುರಿತು ಚರ್ಚಿಸಿದರು.
ವೈರಸ್ ಭೀತಿಯಿಂದಾಗಿ ದೇಶದ ಉನ್ನತ ನ್ಯಾಯಾಲಯವನ್ನು ಸಂಪೂರ್ಣ ಬಂದ್ ಮಾಡುವ ವಿಚಾರವನ್ನು ಬಾಬ್ಡೆ ತಳ್ಳಿಹಾಕಿದ್ದಾರೆ.