ETV Bharat / bharat

ಪೊಲೀಸ್ ಚೆಕ್​ಪೋಸ್ಟ್​ ಮೇಲೆ ಉಗ್ರರಿಂದ ಗ್ರೆನೇಡ್ ದಾಳಿ: ಓರ್ವ ನಾಗರಿಕ ಸಾವು - ಜಮ್ಮು ಮತ್ತು ಕಾಶ್ಮೀರ ಲೇಟೆಸ್ಟ್ ನ್ಯೂಸ್

ಶ್ರೀನಗರದ ಪೊಲೀಸ್ ಚೆಕ್​ಪೋಸ್ಟ್​ವೊಂದರ ಮೇಲೆ ಉಗ್ರರು ನಡೆಸಿದ ಗ್ರೆನೇಡ್ ದಾಳಿಗೆ ಓರ್ವ ವ್ಯಕ್ತಿ ಬಲಿಯಾಗಿದ್ದು, ಮತ್ತೋರ್ವ ಗಾಯಗೊಂಡಿದ್ದಾನೆ.

Civilian killed in grenade attack in J&Kಪೊಲೀಸ್ ಚೆಕ್​ಪೋಸ್ಟ್​ ಮೇಲೆ ಉಗ್ರರಿಂದ ಗ್ರೆನೇಡ್ ದಾಳಿ
ಪೊಲೀಸ್ ಚೆಕ್​ಪೋಸ್ಟ್​ ಮೇಲೆ ಉಗ್ರರಿಂದ ಗ್ರೆನೇಡ್ ದಾಳಿ
author img

By

Published : Mar 6, 2020, 11:43 PM IST

ಶ್ರೀನಗರ: ಶ್ರೀನಗರದ ಮಹಾರಾಜ್ ಗುಂಜ್ ಜೈನಾ ಕಡಲ್ ಪೊಲೀಸ್ ಠಾಣೆ ಬಳಿ ಇರುವ ಪೊಲೀಸ್ ಚೆಕ್ ಪಾಯಿಂಟ್ ಮೇಲೆ ಉಗ್ರರು ಗ್ರೆನೇಡ್ ದಾಳಿ ನಡೆಸಿದ ಪರಿಣಾಮ ಓರ್ವ ನಾಗರಿಕ ಸಾವಿಗೀಡಾಗಿದ್ದಾನೆ.

ಶ್ರೀನಗರದ ಜೈನಾ ಕಡಲ್​ನ ಗುಲಾಮ್ ನಬಿ ಹ್ಯಾಂಗರ್ ಎಂಬ ವ್ಯಕ್ತಿ ಉಗ್ರರು ಎಸೆದ ಗ್ರೆನೇಡ್​ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದಾನೆ. ಕೂಡಲೇ ಆತನನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾನೆ.

ಮುಹಮ್ಮದ್ ರಫೀಕ್ ಶಲ್ಲಾ ಎಂಬ ಮತ್ತೋರ್ವ ವ್ಯಕ್ತಿ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ. ಸ್ಥಳದಲ್ಲಿ ಬೀಡು ಬಿಟ್ಟಿರುವ ಭದ್ರತಾ ಪಡೆ ಪರಿಶೀಲನೆ ನಡೆಸುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.