ಚಮೋಲಿ: ಕಳೆದ ಕೆಲ ದಿನಗಳ ಹಿಂದೆ ಉತ್ತರಾಖಂಡ್ನ ಚಮೋಲಿ ಜಿಲ್ಲೆಯ ಬೌಲಿ ಎಂಬಲ್ಲಿ ಗುಪ್ತಾ ಫ್ಯಾಮಿಲಿ ಬರೋಬ್ಬರಿ 200ಕೋಟಿ ವೆಚ್ಚದಲ್ಲಿ ತನ್ನ ಮಗನ ಮದುವೆ ಕಾರ್ಯಕ್ರಮ ಆಯೋಜಿಸಿದ್ದರು. ಇದೀಗ ಸ್ಥಳದಲ್ಲಿನ ತ್ಯಾಜ್ಯ ಕ್ಲೀನ್ ಮಾಡಲು ಕಾರ್ಪೋರೇಷನ್ ಹರಸಾಹಸ ಪಡ್ತಿದೆ.
ಬೌಲಿ ಪ್ರದೇಶದಲ್ಲಿ ಜೂನ್ 20ರಿಂದ 22ರವರೆಗೆ ಗುಪ್ತಾ ಫ್ಯಾಮಿಲಿ ಅಜಯ್ ಗುಪ್ತಾ ತಮ್ಮ ಮಗನ ಮದುವೆ ಕಾರ್ಯಕ್ರಮವನ್ನ ಅದ್ಧೂರಿಯಾಗಿ ಆಯೋಜನೆ ಮಾಡಿತ್ತು. ಈ ವೇಳೆ ಸ್ಥಳದಲ್ಲಿ ಸಾವಿರಾರು ಜಮಾಯಿಸಿದ್ದರು. ಕಾರ್ಯಕ್ರಮ ಮುಗಿದು ಹೋದ ಬಳಿಕ ಸ್ಥಳದಲ್ಲಿ ಅಪಾರ ಪ್ರಮಾಣದ ತ್ಯಾಜ್ಯ ಬಿದ್ದಿದೆ. ಅದನ್ನ ಗುಪ್ತಾ ಫ್ಯಾಮಿಲಿ ತೆಗೆದು ಹಾಕಿಲ್ಲ. ಹೀಗಾಗಿ ಕಾರ್ಪೋರೇಷನ್ ಈ ಕೆಲಸಕ್ಕೆ ಇದೀಗ ಕೈ ಹಾಕಿದೆ. ಇನ್ನು ಗುಪ್ತಾ ಫ್ಯಾಮಿಲಿ ಮಗನ ಮದುವೆ ಕಾರ್ಯಕ್ರಮಕ್ಕಾಗಿ ಬರೋಬ್ಬರಿ 80 ಲಕ್ಷ ರೂಪಾಯಿ ವೆಚ್ಚದಲ್ಲಿ ಮದುವೆ ಕಾರ್ಡ್ ಸಿದ್ಧ ಮಾಡಿತ್ತು.
ವಿವಿಧ ರಾಜ್ಯದ ಮುಖ್ಯಮಂತ್ರಿ,ಬಾಲಿವುಡ್ ಆ್ಯಕ್ಟರ್ಸ್ಗಳಾದ ಕತ್ರಿನಾ ಕೈಪ್, ಯೋಗಾ ಗುರು ಬಾಬಾ ರಾಮದೇವ್ ಸಹ ಈ ಸ್ಥಳಕ್ಕೆ ಬಂದು ಹೋಗಿದ್ದರು. ಇದೀಗ ಸ್ಥಳದಲ್ಲಿ ಪ್ಲಾಸ್ಟಿಕ್ ಬಾಟಲಿ, ಆಹಾರದ ಪ್ಯಾಕೆಟ್, ಹೂವಿನ ಮಾಲೆಗಳು ಸೇರಿ ಅನೇಕ ತ್ಯಾಜ್ಯಗಳು ಬಿದ್ದಿವೆ. ಅದನ್ನ ತೆರವುಗೊಳಿಸುವ ಕಾರ್ಯದಲ್ಲಿ ಕಾರ್ಪೋರೇಷನ್ ಮುಂದಾಗಿದೆ.