ETV Bharat / bharat

ಅಕ್ರಮ ವಲಸೆಯಲ್ಲಿ ವಿಚಿತ್ರ ರಾಜಕೀಯ: ಪೂರ್ವ ಭಾರತದಲ್ಲಿ ಭುಗಿಲೆದ್ದ 'ಪೌರತ್ವ ಹಿಂಸಾಚಾರ'

author img

By

Published : Dec 16, 2019, 11:48 PM IST

ನಿಮ್ಮ ಆತಂಕಕ್ಕೆ ಕಾರಣವಾಗಿರುವ ಸಮಸ್ಯೆಗಳನ್ನು ನಾವು ಪರಿಹರಿಸಲು ಬದ್ಧವಾಗಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಸ್ವತಃ ಹೇಳಿದರೂ ಅಸ್ಸಾಮಿಗಳ ಸಿಟ್ಟು ತಣಿಯುತ್ತಿಲ್ಲ. ಈ ಪ್ರತಿಭಟನೆಗಳನ್ನು ಅವರು ಬಿಜೆಪಿ ವಿರುದ್ಧವೇ ಮಾಡುತ್ತಿದ್ದಾರೆ ಎಂದೇನಲ್ಲ. ಅಸ್ಸಾಮಿನ ಜನರಿಗೆ ಯಾವ ರಾಜಕೀಯ ಪಕ್ಷದ ಮೇಲೂ ಒಳ್ಳೆಯ ಅಭಿಪ್ರಾಯವೇ ಇಲ್ಲ. ಎಲ್ಲ ರಾಜಕೀಯ ಪಕ್ಷಗಳೂ ಒಂದೇ, ಯಾವ ಪಕ್ಷಗಳೂ ನಮ್ಮ ಹಿತ ರಕ್ಷಣೆ ಮಾಡುವುದಿಲ್ಲ ಎಂದು ಅಸ್ಸಾಮಿಗಳು ಭಾವಿಸಿದ್ದಾರೆ. ಆದರೆ ನಿಮ್ಮ ಸಂಸ್ಕೃತಿ, ಭಾಷೆ ಹಾಗೂ ಅಸ್ತಿತ್ವಕ್ಕೆ ಯಾವ ಗಂಡಾಂತರವೂ ಇಲ್ಲ ಎಂಬುದನ್ನು ಮನವರಿಕೆ ಮಾಡಿಕೊಟ್ಟು, ಅವರನ್ನು ಮನವೊಲಿಸುವ ಮತ್ತು ಅವರ ವಿಶ್ವಾಸ ಗಳಿಸಿಕೊಳ್ಳುವ ತಕ್ಷಣದ ಕ್ರಮ ಈಗ ಆಗಲೇಬೇಕಿದೆ.

Citizenship  Amendment
ಪೌರತ್ವ ತಿದ್ದುಪಡಿ ಕಾಯ್ದೆ

ಪೌರತ್ವ ತಿದ್ದುಪಡಿ ಕಾಯ್ದೆ ಈಗ ಈಶಾನ್ಯ ಭಾರತದಲ್ಲಿ ಬೃಹತ್‌ ಗಲಭೆಗೆ ಕಾರಣವಾಗಿದೆ. ಅದರಲ್ಲೂ ಮುಖ್ಯವಾಗಿ ಅಸ್ಸೋಂ, ತ್ರಿಪುರಾ ಮತ್ತು ಶಿಲ್ಲಾಂಗ್‌ನಲ್ಲಿ ಯುದ್ಧದ ಪರಿಸ್ಥಿತಿ ಕಾಣಿಸುತ್ತಿದೆ. ಈ ಕಾಯ್ದೆ ಬಗ್ಗೆ ಒಂದಷ್ಟು ಜನ ಪರವಾಗಿ ಮಾತನಾಡಿದರೆ, ಅಷ್ಟೇ ಸಂಖ್ಯೆಯ ಜನರು ಕಾಯ್ದೆಯನ್ನು ವಿರೋಧಿಸುತ್ತಿದ್ದಾರೆ.

ದೇಶದ ವಿಭಜನೆಯ ನಂತರದಿಂದಲೂ ನಡೆಯುತ್ತಿದ್ದ ಅನ್ಯಾಯವು ಈ ಕಾಯ್ದೆಯ ಮೂಲಕ ಸರಿ ಆಗಿದೆ ಎಂದು ಪರವಾಗಿ ಮಾತನಾಡುವವರು ವಾದಿಸುತ್ತಿದ್ದಾರೆ. ಆದರೆ, ಇನ್ನೊಂದೆಡೆ ಇದು ಭಾರತದ ಸಂವಿಧಾನಕ್ಕೆ ವಿರುದ್ಧವಾದದ್ದು ಎಂದು ಇನ್ನೊಂದಷ್ಟು ಜನರು ವಿರೋಧಿಸುತ್ತಿದ್ದಾರೆ. ಧರ್ಮದ ಆಧಾರದಲ್ಲಿ ಈ ಕಾಯ್ದೆ ದೇಶವನ್ನೇ ವಿಭಜಿಸುತ್ತಿದೆ ಎಂಬುದು ಈ ಕಾಯ್ದೆಯನ್ನು ವಿರೋಧಿಸುವವರ ಆರೋಪ.

1995ರ ಪೌರತ್ವ ಕಾಯ್ದೆಯು ಹೇಳುವಂತೆ ಭಾರತಕ್ಕೆ ಯಾವ ದಾಖಲೆಯನ್ನೂ ಹೊಂದಿಲ್ಲದೇ ಪ್ರವೇಶಿಸುವ ಯಾವುದೇ ವ್ಯಕ್ತಿಯೂ ಅಕ್ರಮ ವಲಸಿಗ ಆಗಿರುತ್ತಾನೆ. ಹಾಗೆಯೇ ಆತನಿಗೆ ಭಾರತದ ಪೌರತ್ವ ಸಿಗುವುದಿಲ್ಲ ಎಂದು ಈ ಕಾಯ್ದೆ ಹೇಳುತ್ತದೆ. ಆದರೆ ಈ ಹೊಸ ತಿದ್ದುಪಡಿ ಕಾಯ್ದೆ ಈ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ಅವಿಭಜಿತ ಭಾರತ ಅಂದರೆ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಜೊತೆಗೆ ನೆರೆಯ ಅಫ್ಘಾನಿಸ್ತಾನದಿಂದ ಹಿಂಸೆಗೆ ಒಳಗಾಗಿ ಭಾರತದ ಗಡಿ ದಾಟಿ ಒಳಕ್ಕೆ ಆಗಮಿಸುವ ಧಾರ್ಮಿಕ ಅಲ್ಪಸಂಖ್ಯಾತರಿಗೆ ಆಶ್ರಯವನ್ನು ಈ ಕಾಯ್ದೆ ಒದಗಿಸುತ್ತದೆ.

ಇವರನ್ನು ಅಕ್ರಮ ವಲಸಿಗರು ಎಂದು ನೋಡಬಾರದು ಎಂದೇ ಈ ಹೊಸ ಕಾಯ್ದೆ ಹೇಳುತ್ತದೆ. ಅಷ್ಟೇ ಅಲ್ಲ, ಅವರಿಗೆ ಪೌರತ್ವವನ್ನೂ ಕೊಟ್ಟು ಭಾರತದ ನಾಗರಿಕರನ್ನಾಗಿ ಮಾಡುತ್ತದೆ. ತಮ್ಮನ್ನು ಇಸ್ಲಾಂ ರಾಷ್ಟ್ರಗಳು ಎಂದು ಘೋಷಿಸಿಕೊಂಡ ಈ ಮೂರು ದೇಶಗಳಿಂದ ಆಗಮಿಸುವ ಹಿಂದು, ಸಿಖ್, ಜೈನ, ಕ್ರಿಶ್ಚಿಯನ್‌, ಬೌದ್ಧ ಮತ್ತು ಪಾರ್ಸಿಗಳಿಗೆ ಭಾರತದಲ್ಲಿ ಈ ಕಾಯ್ದೆಯ ಪ್ರಕಾರ ಪೌರತ್ವ ಸಿಗುತ್ತದೆ.

ಇವೆಲ್ಲವುಗಳ ಮಧ್ಯೆ ಆಸಕ್ತಿಕರ ಸಂಗತಿಯೆಂದರೆ, ಈ ಮೂರೂ ದೇಶಗಳಿಂದ ಆಗಮಿಸುವ ಮುಸ್ಲಿಮರಿಗೆ ಈ ಅನುಕೂಲವಿಲ್ಲ. ಮುಸ್ಲಿಮ್‌ ಆಗಿರುವ ಅಕ್ರಮ ವಲಸಿಗರು ಭಾರತದ ಪೌರತ್ವವನ್ನು ಪಡೆಯುವುದಿಲ್ಲ. ಮುಸ್ಲಿಮರು ಧಾರ್ಮಿಕ ಹಿಂಸೆಯನ್ನು ಅನುಭವಿಸುವುದಿಲ್ಲ. ಅವರು ಕೇವಲ ಒಳ್ಳೆಯ ಉದ್ಯೋಗ ಹಾಗೂ ಜೀವನ ಮಟ್ಟವನ್ನು ಅರಸಿ ಭಾರತಕ್ಕೆ ವಲಸೆ ಬರುತ್ತಾರೆ. ಹೀಗಾಗಿ ಅವರಿಗೆ ಪೌರತ್ವವನ್ನು ನೀಡುವುದಿಲ್ಲ. ಇದು ಹೊಸ ಕಾಯ್ದೆಯಲ್ಲಿರುವ ಬದಲಾವಣೆಯ ಸಾರ.

ದಶಕಗಳಷ್ಟು ಹಳೆಯ ಸಮಸ್ಯೆ

ತಮ್ಮ ದೇಶದಲ್ಲಿ ಮನೆ ಮಠಗಳನ್ನು ಕಳೆದುಕೊಂಡು ಸರ್ವಸ್ವವೂ ನಾಶವಾದ ಮೇಲೆ ತಮ್ಮ ಜೀವವನ್ನಾದರೂ ಉಳಿಸಿಕೊಳ್ಳೋಣ ಎಂದು ಬೇರೆ ದೇಶಕ್ಕೆ ಓಡಿ ಹೋಗಿ ನೆಲೆಸುವವರು ಆ ದೇಶದಲ್ಲಿ ಅಕ್ರಮ ವಲಸಿಗರಾಗುತ್ತಾರೆ. ಇವರ ಉದ್ದೇಶ ತಮ್ಮಜೀವನ ಮಟ್ಟ ಸುಧಾರಿಸಿಕೊಳ್ಳುವುದೇ ಆಗಿರುತ್ತದೆಯೇ ಹೊರತು ಮತ್ತೇನೂ ಅಲ್ಲ. 1947ರಲ್ಲಿ ದೇಶ ವಿಭಜನೆಯಾದಾಗ ಒಂದು ಅಂದಾಜಿನ ಪ್ರಕಾರ 1.5 ಕೋಟಿ ಜನರು ಭಾರತದಿಂದ ಪಾಕಿಸ್ತಾನಕ್ಕೂ ಪಾಕಿಸ್ತಾನದಿಂದ ಭಾರತಕ್ಕೂ ಬಂದಿದ್ದಾರೆ. ಈ ಪೈಕಿ 1.5 ಕೋಟಿ ಜನರು ಭಾರತದ ಮತ್ತು ಪಾಕಿಸ್ತಾನದ ಪಶ್ಚಿಮ ಭಾಗಕ್ಕೂ, ಸುಮಾರು 42 ಲಕ್ಷ ಜನರು ಪೂರ್ವ ಭಾಗಕ್ಕೂ ವಲಸೆ ಹೋಗಿದ್ದಾರೆ. ಇನ್ನೊಂದೆಡೆ ಇನ್ನೊಂದು ಅಂದಾಜಿನ ಪ್ರಕಾರ, 1959ರಲ್ಲಿ ಟಿಬೆಟ್‌ನಲ್ಲಿ ನಡೆದ ಸ್ಥಿತ್ಯಂತರದಲ್ಲಿ ಸುಮಾರು 80 ಸಾವಿರ ಜನರು ಭಾರತಕ್ಕೆ ಓಡಿಬಂದಿದ್ದಾರೆ. ಮತ್ತೂ ವಿಶೇಷವೆಂದರೆ ಬೌದ್ಧ ಗುರು ಹಾಗೂ ಧಾರ್ಮಿಕ ನಾಯಕ 14ನೇ ದಲಾಯಿ ಲಾಮಾ ಕೂಡ ಭಾರತಕ್ಕೆ ಓಡಿಬಂದು, ಇಲ್ಲಿ ಆಶ್ರಯ ಪಡೆದಿದ್ದಾರೆ.

1972ರಲ್ಲಿ ಉಗಾಂಡದಲ್ಲಿದ್ದ ಭಾರತೀಯರು ತೊಂದರೆಗೆ ಒಳಗಾಗಿದ್ದರು. ಅವರನ್ನೂ ಭಾರತಕ್ಕೆ ನಿರಾಶ್ರಿತರ ರೂಪದಲ್ಲಿ ಕರೆತಂದು ಆಶ್ರಯ ನೀಡಲಾಗಿದೆ. ಇನ್ನು ಶ್ರೀಲಂಕಾದಲ್ಲಿ ನಡೆದ ಹಿಂಸಾಚಾರದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ತಮಿಳರು ನಿರಾಶ್ರಿತರಾಗಿದ್ದರು. ಇವರೂ ಕೂಡ ಭಾರತಕ್ಕೆ ವಲಸೆ ಬಂದು ನೆಲೆ ಕಂಡುಕೊಂಡಿದ್ದಾರೆ. ಈ ವಲಸಿಗರು ಭಾರತಕ್ಕೆ ಆಗಮಿಸಿದಾಗ ಯಾವ ಸಮಸ್ಯೆಯೂ ಕಂಡುಬರಲಿಲ್ಲ. ಆದರೆ ಭಾರತದಲ್ಲಿ ಅಕ್ರಮವಾಗಿ ವಲಸಿಗರು ಬರುತ್ತಿರುವುದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಇದು ದೊಡ್ಡ ಗಲಭೆಗೂ ಕಾರಣವಾಗುತ್ತಿದೆ.

ಭಾರತ ವಿಭಜನೆಯ ವೇಳೆ ಪಶ್ಚಿಮ ಭಾಗದಲ್ಲಿರುವ ಭಾರತೀಯರು ತುಂಬಾ ಸಮಸ್ಯೆಗಳನ್ನು ಎದುರಿಸಿದ್ದರು. ಬಹುತೇಕವಾಗಿ ಈ ಸಮಯದಲ್ಲಿ ನಡೆದ ವಲಸೆಗೆ ಧಾರ್ಮಿಕ ಹಿಂಸಾಚಾರವೇ ಕಾರಣವಾಗಿತ್ತು. ಹಿಂದು ಮತ್ತು ಸಿಖ್ಖರು ಭಾರತಕ್ಕೆ ಬಂದಿದ್ದರೆ, ಮುಸ್ಲಿಮರು ಭಾರತದಿಂದ ಪಾಕಿಸ್ತಾನಕ್ಕೆ ತೆರಳಿದ್ದರು. ಆದರೆ, ಭಾರತದ ಪೂರ್ವ ಭಾಗದಲ್ಲಿನ ಸಮಸ್ಯೆಯೇ ಬೇರೆ ರೀತಿಯದ್ದು. ಕಾಲ ಸರಿದಂತೆ ರಾಜಕೀಯ ಚಿತ್ರಣ ಪೂರ್ವ ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಬದಲಾಗುತ್ತ ಸಾಗಿತು. ಈ ಪರಿಸ್ಥಿತಿಗೆ ಬಲಿಯಾದದ್ದು ಮಾತ್ರ ಭಾರತ. ಈ ಭಾಗದಲ್ಲಿ ರಾಜಕೀಯ ಅಸ್ಥಿರತೆ ಹೆಚ್ಚಿದಷ್ಟೂ ಅಲ್ಲಿನ ಜನರು ಬಾಂಗ್ಲಾದೇಶದಿಂದ ಭಾರತಕ್ಕೆ ವಲಸೆ ಬರಲು ಆರಂಭಿಸಿದರು. ಲಕ್ಷಾಂತರ ಜನರು ಈ ರೀತಿ ಭಾರತಕ್ಕೆ ವಲಸೆ ಬಂದಿದ್ದಾರೆ. ಈ ಅವಧಿಯೇ ಬಾಂಗ್ಲಾದೇಶದಿಂದ ಭಾರತಕ್ಕೆ ವಲಸೆ ಪ್ರವಾಹ ಆರಂಭವಾಗಲು ನಾಂದಿ ಹಾಡಿತು.

ಬಾಂಗ್ಲಾದೇಶದಿಂದ ಸುಮಾರು 2.40 ಕೋಟಿ ಅಕ್ರಮ ವಲಸಿಗರು ಭಾರತಕ್ಕೆ ಬಂದಿದ್ದಾರೆ ಎಂದು ಈ ಹಿಂದೆ ಸಂಸತ್ತಿನಲ್ಲಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಕಿರಣ್‌ ರಿಜಿಜು ಹೇಳಿದ್ದಾರೆ. ಈ ಪೈಕಿ ಹೆಚ್ಚಿನ ಜನರು ಪಶ್ಚಿಮ ಬಂಗಾಳಕ್ಕೆ ಬಂದಿದ್ದಾರೆ. ಜನಸಾಮಾನ್ಯರು ಭಾವಿಸಿರುವ ಹಾಗೆ ಇವರೆಲ್ಲರೂ ಅಸ್ಸಾಮ್‌ಗೆ ತೆರಳಿಲ್ಲ. 75 ಲಕ್ಷಕ್ಕೂ ಹೆಚ್ಚು ಅಕ್ರಮ ವಲಸಿಗರು ಸದ್ಯ ಪಶ್ಚಿಮ ಬಂಗಾಳದಲ್ಲಿ ನೆಲೆ ಕಂಡುಕೊಂಡಿದ್ದಾರೆ. ಪಶ್ಚಿಮ ಬಂಗಾಳ ಬಿಟ್ಟರೆ, ಅಕ್ರಮ ವಲಸಿಗರು ನೆಲೆ ಕಂಡುಕೊಂಡಿರುವ ರಾಜ್ಯಗಳೆಂದರೆ ಅಸ್ಸಾಂ ಮತ್ತು ತ್ರಿಪುರಾ. ಇವು ಎರಡನೇ ಮತ್ತು ಮೂರನೇ ಸ್ಥಾನದಲ್ಲಿವೆ.

ಈ ವಲಸಿಗರ ಸಮಸ್ಯೆಯ ಬಿಸಿ ರಾಷ್ಟ್ರ ರಾಜಧಾನಿಗೂ ತಟ್ಟದೇ ಬಿಟ್ಟಿಲ್ಲ. ಅಂದಾಜಿನ ಪ್ರಕಾರ 7 ರಿಂದ 8 ಲಕ್ಷ ಅಕ್ರಮ ವಲಸಿಗರು ದೆಹಲಿಯಲ್ಲಿದ್ದಾರೆ. ಇದೇ ರೀತಿ ಭಾರಿ ಸಂಖ್ಯೆಯಲ್ಲಿ ಇವರು ಉತ್ತರ ಪ್ರದೇಶ, ಕೇರಳ ಮತ್ತು ಹೈದರಾಬಾದ್‌ಗೂ ಬಂದು ನೆಲೆಸಿದ್ದಾರೆ. ತುಂಬ ಹಿಂದಿನಿಂದಲೂ ಅಸ್ಸಾಮ್‌ನಲ್ಲಿ ಅಕ್ರಮ ವಲಸಿಗರ ಬಗ್ಗೆ ಪ್ರತಿಭಟನೆ ವಿರೋಧ ನಡೆಯುತ್ತಲೇ ಇದೆ ಎಂಬುದು ತಿಳಿಯದ ಸಂಗತಿಯೇನಲ್ಲ. ಈ ವಲಸೆಯಿಂದಲೇ ಹಿಂದುಗಳು ಮತ್ತು ಮುಸ್ಲಿಮರ ಮಧ್ಯೆ ಪ್ರಕ್ಷುಬ್ಧ ಪರಿಸ್ಥಿತಿಗೆ ಕಾರಣವಾಗಿದೆ. ಇದರಿಂದಾಗಿಯೇ ಜನಸಂಖ್ಯೆಯಲ್ಲಿ ಅಪಾರ ಏರಿಕೆಯೂ ಆಗಿದೆ. 25 ಲಕ್ಷದಿಂದ 35 ಲಕ್ಷಕ್ಕೆ ಜನಸಂಖ್ಯೆ ವಲಸೆಯಿಂದಲೇ ಏರಿಕೆಯಾಗಿದೆ.

ಅಸ್ಸಾಮಿನ ಜನರಿಗೆ ಇದು ಅಸ್ತಿತ್ವದ ಪ್ರಶ್ನೆ, ತಮ್ಮ ಮಾತೃಭಾಷೆ, ತಮ್ಮ ಸಂಸ್ಕೃತಿಯನ್ನು ವಲಸಿಗರಿಂದ ಉಳಿಸಿಕೊಳ್ಳುವ ಅನಿವಾರ್ಯ ಅವರಿಗೆ ಇದೆ. ವಲಸಿಗರಿಗೆ ಹೋಲಿಸಿದರೆ ಅಸ್ಸಾಮ್‌ನಲ್ಲಿ ಮೂಲನಿವಾಸಿಗಳ ಸಂಖ್ಯೆ ಶೇಕಡಾ 50 ಕ್ಕೂ ಕಡಿಮೆಯಾಗುತ್ತಿದೆ. ಇದೇ ಕಾರಣಕ್ಕೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಕಾರಣದಿಂದಾಗಿಯೇ ಕೇಂದ್ರ ಸರ್ಕಾರ ಒಪ್ಪಂದ ಮಾಡಿಕೊಂಡು, ರಾಷ್ಟ್ರೀಯ ಪೌರತ್ವ ನೋಂದಣಿಯನ್ನೂ ಆರಂಭಿಸಿತು. ಇದರಲ್ಲಿ ಸುಮಾರು 19 ಲಕ್ಷ ಅಕ್ರಮ ವಲಸಿಗರು ಕಂಡುಬಂದಿದ್ದಾರೆ. ಈ ಗದ್ದಲ ಇಂದಿಗೂ ನಡೆಯುತ್ತಲೇ ಇದೆ.

ಎನ್‌ಆರ್‌ಸಿ ಸಿದ್ಧಪಡಿಸುವ ಪ್ರಕ್ರಿಯೆಯಲ್ಲೇ ಅವ್ಯವಹಾರ ನಡೆದಿದೆ ಎಂದು ಅಸ್ಸಾಮಿನ ಜನರು ಆರೋಪ ಮಾಡುತ್ತಿದ್ದಾರೆ. ಆದರೆ ಪಶ್ಚಿಮ ಬಂಗಾಳದಲ್ಲಿ ಈ ಪರಿಸ್ಥಿತಿ ಸಂಪೂರ್ಣ ಬೇರೆಯೇ ಆಗಿದೆ. ಪಶ್ಚಿಮ ಬಂಗಾಳದಲ್ಲಿ ಭಾರಿ ಪ್ರಮಾಣದಲ್ಲಿ ವಲಸಿಗರು ಆಗಮಿಸಿ ನೆಲೆ ಕಂಡುಕೊಂಡಿದ್ದರೂ ಇಲ್ಲಿ ಈ ವಿಚಾರ ಪ್ರಾಮುಖ್ಯತೆ ಪಡೆದೇ ಇರಲಿಲ್ಲ. ತೀರಾ ಇತ್ತೀಚೆಗೆ ಇಲ್ಲಿ ಬಿಜೆಪಿ ತನ್ನ ರಾಜಕೀಯ ಬೇರುಗಳನ್ನು ಗಟ್ಟಿಗೊಳಿಸುತ್ತಿದ್ದಂತೆಯೇ ಈ ವಿಚಾರ ಪ್ರಸ್ತಾಪವಾಗಿದೆ.

ಅಕ್ರಮ ವಲಸೆಯೇ ಧಾರ್ಮಿಕ ಜನಸಂಖ್ಯೆಯ ಅನುಪಾತದಲ್ಲಿ ಮಹತ್ವದ ವ್ಯತ್ಯಾಸವಾಗುವುದಕ್ಕೆ ಕಾರಣವಾಗಿದೆ ಎಂದು ಬಿಜೆಪಿ ಹೇಳುತ್ತಿದೆ. ಪಶ್ಚಿಮ ಬಂಗಾಳದಲ್ಲಿ 1950 ರಲ್ಲಿ ಮುಸ್ಲಿಂ ಜನಸಂಖ್ಯೆ ಶೇ. 20 ರಷ್ಟು ಏರಿಕೆಯಾದರೆ, 2011ರಲ್ಲಿ ಇದು ಶೇ. 27 ರಷ್ಟು ಏರಿಕೆಯಾಗಿದೆ. ಸಿಪಿಎಂ ಮತ್ತು ತೃಣಮೂಲ ಕಾಂಗ್ರೆಸ್‌ ಈ ಸಮಸ್ಯೆಯನ್ನು ಮುಚ್ಚಿ ಹಾಕಿವೆ. ಇದರ ಹಿಂದೆ ಷಡ್ಯಂತ್ರ ನಡೆಯುತ್ತಿದೆ. ಅಸ್ಸಾಂನಲ್ಲಿ ನಡೆಯುವ ಹಾಗೆ ಪ್ರತಿಭಟನೆಗಳು ಮತ್ತು ಪ್ರಚಾರ ಈ ವಿಚಾರಕ್ಕೆ ಇಲ್ಲಿ ಸಿಗುತ್ತಿಲ್ಲ ಎಂದು ಬಿಜೆಪಿ ಹಿಂದಿನಿಂದಲೂ ಆರೋಪಿಸುತ್ತಿದೆ. ಅಸ್ಸಾಮಿನ ಜನರು ತಮ್ಮ ಜನಸಂಖ್ಯೆ ಕಡಿಮೆಯಾಗುತ್ತಿರುವುದರಿಂದ ಅಸ್ತಿತ್ವಕ್ಕಾಗಿ ಹೋರಾಡುತ್ತಿದ್ದರೆ, ಪಶ್ಚಿಮ ಬಂಗಾಳದಲ್ಲಿ ವಲಸಿಗರ ಸಂಖ್ಯೆ ಹೆಚ್ಚೇ ಇದ್ದರೂ ಪರಿಸ್ಥಿತಿ ಶಾಂತವಾಗಿಯೇ ಇತ್ತು.

ಬಾಂಗ್ಲಾದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ಭಾಷೆಯ ವ್ಯತ್ಯಾಸ ಕಡಿಮೆ. ಬಾಂಗ್ಲಾದಲ್ಲಿನ ಜನರು ಮಾತನಾಡುವ ಭಾಷೆಗೆ ತೀರಾ ಹೋಲುವ ಭಾಷೆಯನ್ನೇ ಪಶ್ಚಿಮ ಬಂಗಾಳದಲ್ಲೂ ಮಾತನಾಡುತ್ತಾರೆ. ಅಲ್ಲಿನ ಸಂಸ್ಕೃತಿಗೆ ತೀರಾ ಹತ್ತಿರದ ಸಂಸ್ಕೃತಿಯೇ ಪ. ಬಂಗಾಳದಲ್ಲೂ ಇದೆ. ಹೀಗಾಗಿ ಇಲ್ಲಿ ಅಕ್ರಮ ವಲಸಿಗರನ್ನು ಬೇರ್ಪಡಿಸುವುದು ಸುಲಭವಲ್ಲ.

ತ್ರಿಪುರಾದಲ್ಲಿ ಇದೇ ಅಕ್ರಮ ವಲಸೆ ಸಮಸ್ಯೆಯಿಂದ ಆದಿವಾಸಿಗಳ ಜನಸಂಖ್ಯೆ ಪ್ರಮಾಣ ಕುಸಿದಿದೆ. 1951ರಲ್ಲಿ ತ್ರಿಪುರಾದಲ್ಲಿ ಆದಿವಾಸಿಗಳ ಜನಸಂಖ್ಯೆ ಶೇ. 60 ರಷ್ಟು ಇದ್ದರೆ, 2011ರಲ್ಲಿ ಇದು ಶೇ. 31 ಕ್ಕೆ ಕುಸಿದಿದೆ. ಹೀಗಾಗಿ ಆದಿವಾಸಿಗಳಲ್ಲಿ ಅಕ್ರಮ ವಲಸೆ ಬಗ್ಗೆ ತೀವ್ರ ವಿರೋಧವಿದೆ.

ಈ ಹಿನ್ನೆಲೆಯಲ್ಲಿ ಹಲವು ಸುತ್ತಿನಲ್ಲಿ ಚರ್ಚೆ, ಮಾತುಕತೆಗಳನ್ನು ನಡೆಸಿ ಗೃಹ ಸಚಿವ ಅಮಿತ್‌ ಶಾ ಮಸೂದೆಯನ್ನು ತಯಾರಿಸಿದ್ದಾರೆ. ಹೀಗಾಗಿಯೇ ಲೋಕಸಭೆ ಮತ್ತು ರಾಜ್ಯಸಭೆಯ ಬಹುಮತದ ಸದಸ್ಯರು ಈ ಮಸೂದೆಗೆ ಬೆಂಬಲ ನೀಡಿದ್ದಾರೆ. ಆದರೆ ಇನ್ನರ್ ಲೈನ್‌ ಪರ್ಮಿಟ್‌ ಮತ್ತು ಸ್ವಯಂ ಆಡಳಿತ ಹೊಂದಿರುವ ಪ್ರದೇಶಗಳಿಗೆ ಈ ಕಾಯ್ದೆ ಅನ್ವಯವಾಗುವುದಿಲ್ಲ. ಅಸ್ಸಾಮ್‌ನಲ್ಲಿ 3 ಸ್ವಯಂ ಆಡಳಿತ ಪ್ರದೇಶಗಳನ್ನು ಹೊರತುಪಡಿಸಿ ಇತರ ಪ್ರದೇಶಗಳಿಗೆ ಕಾಯ್ದೆ ಅನ್ವಯಿಸುತ್ತದೆ. ಆದಿವಾಸಿಗಳು ಸ್ವಯಂ ಆಡಳಿತ ನಡೆಸುವ ಪ್ರದೇಶಗಳನ್ನು ಹೊರತುಪಡಿಸಿ ತ್ರಿಪುರಾದ ಇತರ ಭಾಗಗಳು ಹಾಗೂ ಮೇಘಾಲಯದ ರಾಜಧಾನಿ ಶಿಲ್ಲಾಂಗ್‌ಗೆ ಈ ಕಾಯ್ದೆ ಅನ್ವಯಿಸುತ್ತದೆ. ಹೀಗಾಗಿ ಈ ಭಾಗದಲ್ಲಿ ಮಾತ್ರ ಪ್ರತಿಭಟನೆಗಳು ನಡೆಯುತ್ತಿವೆ.

ಬದ್ಧತೆಯೇ ಕೊರತೆ

ಭಾರತದ ಪೂರ್ವ ಭಾಗವಾದ ಅಸ್ಸಾಂ ಮತ್ತು ತ್ರಿಪುರಾದಲ್ಲಿ ವಲಸೆ ಸಮಸ್ಯೆ ವಿಪರೀತ ಮಟ್ಟದಲ್ಲಿದೆ. ತ್ರಿಪುರಾದಲ್ಲೂ ಈ ಸಮಸ್ಯೆ ಇಷ್ಟೇ ಪ್ರಮಾಣದಲ್ಲಿದೆ. ಆದರೆ ಆದಿವಾಸಿಗಳು ನಡೆಸುತ್ತಿರುವ ಪ್ರತಿಭಟನೆ ಯಾರ ಗಮನಕ್ಕೂ ಬರುತ್ತಿಲ್ಲ. ಇದೊಂದು ಸಮಸ್ಯೆ ಎಂದೇ ಪರಿಗಣಿಸಲ್ಪಟ್ಟಿಲ್ಲ.

ಅಸ್ಸಾಮ್‌ನಲ್ಲಿ ವಲಸೆ ವಿರುದ್ಧ ನಡೆಯುತ್ತಿರುವ ವಿರೋಧ ಹಾಗೂ ಪ್ರತಿಭಟನೆಗೆ ಇತಿಹಾಸವೇ ಇದೆ. ಇದೇ ರೀತಿಯ ಪ್ರತಿಭಟನೆ ತಾರಕಕ್ಕೆ ಹೋಗಿ 1985ರಲ್ಲಿ ಒಪ್ಪಂದವೂ ನಡೆದಿದೆ. ಆದರೆ ಈ ಒಪ್ಪಂದ ಮಾಡಿಕೊಂಡು 35 ವರ್ಷಗಳೇ ಕಳೆದರೂ, ಒಪ್ಪಂದದಲ್ಲಿನ ಅಂಶಗಳನ್ನು ಸರಿಯಾಗಿ ಸರ್ಕಾರಗಳು ಅನುಷ್ಠಾನಕ್ಕೆ ತಂದಿಲ್ಲ ಎಂಬ ಸಿಟ್ಟೂ ಅಸ್ಸಾಮ್‌ ಜನರಲ್ಲಿ ಈಗಲೂ ಇದೆ.

ಸುಪ್ರೀಂಕೋರ್ಟ್‌ ಮಧ್ಯಪ್ರವೇಶದಲ್ಲಿ ಕೊನೆಗೂ ಎನ್‌ಆರ್‌ಸಿ ಆರಂಭವಾಯಿತು. ಇದರಲ್ಲಿ ಸುಮಾರು 19 ಲಕ್ಷ ವಲಸಿಗರು ಇದ್ದಾರೆ ಎಂಬುದು ಕಂಡುಬಂತು. ಈ ಪೈಕಿ ಐದರಿಂದ ಆರು ಲಕ್ಷ ಹಿಂದುಗಳು ಭಾರತದಲ್ಲೇ ವಾಸಿಸಬಹುದು. ಇವರಿಗೆ ಹೊಸ ಕಾಯ್ದೆಯಿಂದ ಅರ್ಹತೆ ಸಿಕ್ಕಂತಾಗಿದೆ. ಇದೇ ಅಸ್ಸಾಮಿಗಳ ಸಿಟ್ಟಿಗೆ ಈಗ ಕಾರಣವಾಗಿದೆ. ತಮ್ಮ ಅಸ್ತಿತ್ವ, ಭಾಷೆ, ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಅವರು ಹೋರಾಟ ನಡೆಸುತ್ತಿದ್ದಾರೆ.

ನಿಮ್ಮ ಆತಂಕಕ್ಕೆ ಕಾರಣವಾಗಿರುವ ಸಮಸ್ಯೆಗಳನ್ನು ನಾವು ಪರಿಹರಿಸಲು ಬದ್ಧವಾಗಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಸ್ವತಃ ಹೇಳಿದರೂ ಅಸ್ಸಾಮಿಗಳ ಸಿಟ್ಟು ತಣಿಯುತ್ತಿಲ್ಲ. ಈ ಪ್ರತಿಭಟನೆಗಳನ್ನು ಅವರು ಬಿಜೆಪಿ ವಿರುದ್ಧವೇ ಮಾಡುತ್ತಿದ್ದಾರೆ ಎಂದೇನಲ್ಲ. ಅಸ್ಸಾಮಿನ ಜನರಿಗೆ ಯಾವ ರಾಜಕೀಯ ಪಕ್ಷದ ಮೇಲೂ ಒಳ್ಳೆಯ ಅಭಿಪ್ರಾಯವೇ ಇಲ್ಲ. ಎಲ್ಲ ರಾಜಕೀಯ ಪಕ್ಷಗಳೂ ಒಂದೇ, ಯಾವ ಪಕ್ಷಗಳೂ ನಮ್ಮ ಹಿತ ರಕ್ಷಣೆ ಮಾಡುವುದಿಲ್ಲ ಎಂದು ಅಸ್ಸಾಮಿಗಳು ಭಾವಿಸಿದ್ದಾರೆ. ಆದರೆ ನಿಮ್ಮ ಸಂಸ್ಕೃತಿ, ಭಾಷೆ ಹಾಗೂ ಅಸ್ತಿತ್ವಕ್ಕೆ ಯಾವ ಗಂಡಾಂತರವೂ ಇಲ್ಲ ಎಂಬುದನ್ನು ಮನವರಿಕೆ ಮಾಡಿಕೊಟ್ಟು, ಅವರನ್ನು ಮನವೊಲಿಸುವ ಮತ್ತು ಅವರ ವಿಶ್ವಾಸ ಗಳಿಸಿಕೊಳ್ಳುವ ತಕ್ಷಣದ ಕ್ರಮ ಈಗ ಆಗಲೇ ಬೇಕಿದೆ.

ಆದರೆ ಪಶ್ಚಿಮ ಬಂಗಾಳದಲ್ಲಿನ ಪರಿಸ್ಥಿತಿ ಸಂಪೂರ್ಣ ಭಿನ್ನ. ಅಲ್ಲಿ ಎಲ್ಲ ವಲಸಿಗರಿಗೂ ಪೌರತ್ವ ನೀಡಬೇಕು ಎಂಬ ಒಲವನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೊಂದಿದ್ದಾರೆ. ಇದೇ ಅಭಿಪ್ರಾಯವನ್ನು ಕೇರಳ, ಪಂಜಾಬ್‌ ಮತ್ತು ಮಧ್ಯಪ್ರದೇಶವೂ ಅನುಸರಿಸುತ್ತಿದೆ.

ಸಹಜವಾಗಿಯೇ ಪ್ರಾದೇಶಿಕ ಪಕ್ಷಗಳು ತಮ್ಮ ರಾಜ್ಯದ ಜನರ ಹಿತಾಸಕ್ತಿಗಳನ್ನು ಮಾತ್ರ ಗಮನದಲ್ಲಿಟ್ಟುಕೊಂಡು ನಿಲುವು ತಾಳುತ್ತವೆ. ಆದರೆ, ರಾಷ್ಟ್ರೀಯ ಪಕ್ಷಗಳ ನಿಲುವು ವಿಭಿನ್ನವಾಗಿರುತ್ತವೆ. ಇವು ರಾಷ್ಟ್ರೀಯ ದೃಷ್ಟಿಕೋನದಿಂದ ಸಮಸ್ಯೆಯನ್ನು ನೋಡುತ್ತವೆ. ಅಸ್ಸಾಮ್‌ ಮತ್ತು ಪಶ್ಚಿಮ ಬಂಗಾಳದ ಸಮಸ್ಯೆ ತುಂಬ ಭಿನ್ನವಾಗಿದೆ. ಒಟ್ಟಿನಲ್ಲಿ ಎರಡೂ ರಾಜ್ಯಗಳಲ್ಲಿನ ಪಕ್ಷಗಳು ಈ ಸನ್ನಿವೇಶವನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುತ್ತಿವೆ.

ದುರಾದೃಷ್ಟವಶಾತ್, ತಮ್ಮ ಪಕ್ಷದ ನಿಲುವನ್ನು ಸಮರ್ಥಿಸಿಕೊಳ್ಳುವುದನ್ನು ಬಿಟ್ಟು ಸಮಸ್ಯೆಯನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನಗಳನ್ನು ಅವರು ಮಾಡುತ್ತಲೇ ಇಲ್ಲ.

Intro:Body:

ಅಕ್ರಮ ವಲಸೆಯಲ್ಲಿ ವಿಚ್ಛಿದ್ರ ರಾಜಕೀಯ

- ಪೂರ್ವ ಭಾರತದಲ್ಲಿ ಹಿಂಸಾಚಾರ

- ಪೌರತ್ವ ತಿದ್ದುಪಡಿಯ ದಾಳ ಎಸೆದ ರಾಷ್ಟ್ರೀಯ ಪಕ್ಷಗಳು

____

ಪೌರತ್ವ ತಿದ್ದುಪಡಿ ಕಾಯ್ದೆ ಈಗ ಈಶಾನ್ಯ ಭಾರತದಲ್ಲಿ ಬೃಹತ್‌ ಗಲಭೆಗೆ ಕಾರಣವಾಗಿದೆ. ಅದರಲ್ಲೂ ಮುಖ್ಯವಾಗಿ ಅಸ್ಸಾಂ, ತ್ರಿಪುರಾ ಮತ್ತು ಶಿಲ್ಲಾಂಗ್‌ನಲ್ಲಿ ಯುದ್ಧದ ಪರಿಸ್ಥಿತಿ ಕಾಣಿಸುತ್ತಿದೆ. ಈ ಕಾಯ್ದೆ ಬಗ್ಗೆ ಒಂದಷ್ಟು ಜನ ಪರವಾಗಿ ಮಾತನಾಡಿದರೆ, ಅಷ್ಟೇ ಸಂಖ್ಯೆಯ ಜನರು ಕಾಯ್ದೆಯನ್ನು ವಿರೋಧಿಸುತ್ತಿದ್ದಾರೆ. ದೇಶದ ವಿಭಜನೆಯ ನಂತರದಿಂದಲೂ ನಡೆಯುತ್ತಿದ್ದ ಅನ್ಯಾಯವು ಈ ಕಾಯ್ದೆಯ ಮೂಲಕ ಸರಿ ಆಗಿದೆ ಎಂದು ಪರವಾಗಿ ಮಾತನಾಡುವವರು ವಾದಿಸುತ್ತಿದ್ದಾರೆ. ಆದರೆ, ಇನ್ನೊಂದೆಡೆ ಇದು ಭಾರತದ ಸಂವಿಧಾನಕ್ಕೆ ವಿರುದ್ಧವಾದದ್ದು ಎಂದು ಇನ್ನೊಂದಷ್ಟು ಜನರು ವಿರೋಧಿಸುತ್ತಿದ್ದಾರೆ. ಧರ್ಮದ ಆಧಾರದಲ್ಲಿ ಈ ಕಾಯ್ದೆ ದೇಶವನ್ನೇ ವಿಭಜಿಸುತ್ತಿದೆ ಎಂಬುದು ಈ ಕಾಯ್ದೆಯನ್ನು ವಿರೋಧಿಸುವವರ ಆರೋಪ.

1995ರ ಪೌರತ್ವ ಕಾಯ್ದೆಯು ಹೇಳುವಂತೆ ಭಾರತಕ್ಕೆ ಯಾವ ದಾಖಲೆಯನ್ನೂ ಹೊಂದಿಲ್ಲದೇ ಪ್ರವೇಶಿಸುವ ಯಾವುದೇ ವ್ಯಕ್ತಿಯೂ ಅಕ್ರಮ ವಲಸಿಗ ಆಗಿರುತ್ತಾನೆ. ಹಾಗೆಯೇ ಆತನಿಗೆ ಭಾರತದ ಪೌರತ್ವ ಸಿಗುವುದಿಲ್ಲ ಎಂದು ಈ ಕಾಯ್ದೆ ಹೇಳುತ್ತದೆ. ಆದರೆ ಈ ಹೊಸ ತಿದ್ದುಪಡಿ ಕಾಯ್ದೆ ಈ ಸಮಸ್ಯೆಯನ್ನು  ಹೋಗಲಾಡಿಸುತ್ತದೆ. ಅವಿಭಜಿತ ಭಾರತ ಅಂದರೆ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಜೊತೆಗೆ ನೆರೆಯ ಅಫ್ಘಾನಿಸ್ತಾನದಿಂದ ಹಿಂಸೆಗೆ ಒಳಗಾಗಿ ಭಾರತದ ಗಡಿ ದಾಟಿ ಒಳಕ್ಕೆ ಆಗಮಿಸುವ ಧಾರ್ಮಿಕ ಅಲ್ಪಸಂಖ್ಯಾತರಿಗೆ ಆಶ್ರಯವನ್ನು ಈ ಕಾಯ್ದೆ ಒದಗಿಸುತ್ತದೆ.

ಇವರನ್ನು ಅಕ್ರಮ ವಲಸಿಗರು ಎಂದು ನೋಡಬಾರದು ಎಂದೇ ಈ ಹೊಸ ಕಾಯ್ದೆ ಹೇಳುತ್ತದೆ. ಅಷ್ಟೇ ಅಲ್ಲ, ಅವರಿಗೆ ಪೌರತ್ವವನ್ನೂ ಕೊಟ್ಟು ಭಾರತದ ನಾಗರಿಕರನ್ನಾಗಿ ಮಾಡುತ್ತದೆ. ತಮ್ಮನ್ನು ಇಸ್ಲಾಮ್‌ ರಾಷ್ಟ್ರಗಳು ಎಂದು ಘೋಷಿಸಿಕೊಂಡ ಈ ಮೂರು ದೇಶಗಳಿಂದ ಆಗಮಿಸುವ ಹಿಂದು, ಸಿಖ್, ಜೈನ, ಕ್ರಿಶ್ಚಿಯನ್‌, ಬೌದ್ಧ ಮತ್ತು ಪಾರ್ಸಿಗಳಿಗೆ ಭಾರತದಲ್ಲಿ ಈ ಕಾಯ್ದೆಯ ಪ್ರಕಾರ ಪೌರತ್ವ ಸಿಗುತ್ತದೆ.

ಇವೆಲ್ಲವುಗಳ ಮಧ್ಯೆ ಆಸಕ್ತಿಕರ ಸಂಗತಿಯೆಂದರೆ, ಈ ಮೂರೂ ದೇಶಗಳಿಂದ ಆಗಮಿಸುವ ಮುಸ್ಲಿಮರಿಗೆ ಈ ಅನುಕೂಲವಿಲ್ಲ. ಮುಸ್ಲಿಮ್‌ ಆಗಿರುವ ಅಕ್ರಮ ವಲಸಿಗರು ಭಾರತದ ಪೌರತ್ವವನ್ನು ಪಡೆಯುವುದಿಲ್ಲ. ಮುಸ್ಲಿಮರು ಧಾರ್ಮಿಕ ಹಿಂಸೆಯನ್ನು ಅನುಭವಿಸುವುದಿಲ್ಲ. ಅವರು ಕೇವಲ ಒಳ್ಳೆಯ ಉದ್ಯೋಗ ಹಾಗೂ ಜೀವನ ಮಟ್ಟವನ್ನು ಅರಸಿ ಭಾರತಕ್ಕೆ ವಲಸೆ ಬರುತ್ತಾರೆ. ಹೀಗಾಗಿ ಅವರಿಗೆ ಪೌರತ್ವವನ್ನು ನೀಡುವುದಿಲ್ಲ. ಇದು ಹೊಸ ಕಾಯ್ದೆಯಲ್ಲಿರುವ ಬದಲಾವಣೆಯ ಸಾರ.

ದಶಕಗಳಷ್ಟು ಹಳೆಯ ಸಮಸ್ಯೆ

ತಮ್ಮ ದೇಶದಲ್ಲಿ ಮನೆ ಮಠಗಳನ್ನು ಕಳೆದುಕೊಂಡು ಸರ್ವಸ್ವವೂ ನಾಶವಾದ ಮೇಲೆ ತಮ್ಮ ಜೀವವನ್ನಾದರೂ ಉಳಿಸಿಕೊಳ್ಳೋಣ ಎಂದು ಬೇರೆ ದೇಶಕ್ಕೆ ಓಡಿ ಹೋಗಿ ನೆಲೆಸುವವರು ಆ ದೇಶದಲ್ಲಿ ಅಕ್ರಮ ವಲಸಿಗರಾಗುತ್ತಾರೆ. ಇವರ ಉದ್ದೇಶ ತಮ್ಮಜೀವನ ಮಟ್ಟ ಸುಧಾರಿಸಿಕೊಳ್ಳುವುದೇ ಆಗಿರುತ್ತದೆಯೇ ಹೊರತು ಮತ್ತೇನೂ ಅಲ್ಲ. 1947ರಲ್ಲಿ ದೇಶ ವಿಭಜನೆಯಾದಾಗ ಒಂದು ಅಂದಾಜಿನ ಪ್ರಕಾರ 1.5 ಕೋಟಿ ಜನರು ಭಾರತದಿಂದ ಪಾಕಿಸ್ತಾನಕ್ಕೂ ಪಾಕಿಸ್ತಾನದಿಂದ ಭಾರತಕ್ಕೂ ಬಂದಿದ್ದಾರೆ. ಈ ಪೈಕಿ 1.5 ಕೋಟಿ ಜನರು ಭಾರತದ ಮತ್ತು ಪಾಕಿಸ್ತಾನದ ಪಶ್ಚಿಮ ಭಾಗಕ್ಕೂ, ಸುಮಾರು 42 ಲಕ್ಷ ಜನರು ಪೂರ್ವ ಭಾಗಕ್ಕೂ ವಲಸೆ ಹೋಗಿದ್ದಾರೆ. ಇನ್ನೊಂದೆಡೆ ಇನ್ನೊಂದು ಅಂದಾಜಿನ ಪ್ರಕಾರ, 1959ರಲ್ಲಿ ಟಿಬೆಟ್‌ನಲ್ಲಿ ನಡೆದ ಸ್ಥಿತ್ಯಂತರದಲ್ಲಿ ಸುಮಾರು 80 ಸಾವಿರ ಜನರು ಭಾರತಕ್ಕೆ ಓಡಿಬಂದಿದ್ದಾರೆ. ಮತ್ತೂ ವಿಶೇಷವೆಂದರೆ ಬೌದ್ಧ ಗುರು ಹಾಗೂ ಧಾರ್ಮಿಕ ನಾಯಕ 14ನೇ ದಲಾಯಿ ಲಾಮಾ ಕೂಡ ಭಾರತಕ್ಕೆ ಓಡಿಬಂದು, ಇಲ್ಲಿ ಆಶ್ರಯ ಪಡೆದಿದ್ದಾರೆ.

1972ರಲ್ಲಿ ಉಗಾಂಡದಲ್ಲಿದ್ದ ಭಾರತೀಯರು ತೊಂದರೆಗೆ ಒಳಗಾಗಿದ್ದರು. ಅವರನ್ನೂ ಭಾರತಕ್ಕೆ ನಿರಾಶ್ರಿತರ ರೂಪದಲ್ಲಿ ಕರೆತಂದು ಆಶ್ರಯ ನೀಡಲಾಗಿದೆ. ಇನ್ನು ಶ್ರೀಲಂಕಾದಲ್ಲಿ ನಡೆದ ಹಿಂಸಾಚಾರದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ತಮಿಳರು ನಿರಾಶ್ರಿತರಾಗಿದ್ದರು. ಇವರೂ ಕೂಡ ಭಾರತಕ್ಕೆ ವಲಸೆ ಬಂದು ನೆಲೆ ಕಂಡುಕೊಂಡಿದ್ದಾರೆ. ಈ ವಲಸಿಗರು ಭಾರತಕ್ಕೆ ಆಗಮಿಸಿದಾಗ ಯಾವ ಸಮಸ್ಯೆಯೂ ಕಂಡುಬರಲಿಲ್ಲ. ಆದರೆ ಭಾರತದಲ್ಲಿ ಅಕ್ರಮವಾಗಿ ವಲಸಿಗರು ಬರುತ್ತಿರುವುದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಇದು ದೊಡ್ಡ ಗಲಭೆಗೂ ಕಾರಣವಾಗುತ್ತಿದೆ.

ಭಾರತ ವಿಭಜನೆಯ ವೇಳೆ ಪಶ್ಚಿಮ ಭಾಗದಲ್ಲಿರುವ ಭಾರತೀಯರು ತುಂಬಾ ಸಮಸ್ಯೆಗಳನ್ನು ಎದುರಿಸಿದ್ದರು. ಬಹುತೇಕವಾಗಿ ಈ ಸಮಯದಲ್ಲಿ ನಡೆದ ವಲಸೆಗೆ ಧಾರ್ಮಿಕ ಹಿಂಸಾಚಾರವೇ ಕಾರಣವಾಗಿತ್ತು. ಹಿಂದು ಮತ್ತು ಸಿಖ್ಖರು ಭಾರತಕ್ಕೆ ಬಂದಿದ್ದರೆ, ಮುಸ್ಲಿಮರು ಭಾರತದಿಂದ ಪಾಕಿಸ್ತಾನಕ್ಕೆ ತೆರಳಿದ್ದರು. ಆದರೆ, ಭಾರತದ ಪೂರ್ವ ಭಾಗದಲ್ಲಿನ ಸಮಸ್ಯೆಯೇ ಬೇರೆ ರೀತಿಯದ್ದು. ಕಾಲ ಸರಿದಂತೆ ರಾಜಕೀಯ ಚಿತ್ರಣ ಪೂರ್ವ ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಬದಲಾಗುತ್ತ ಸಾಗಿತು. ಈ ಪರಿಸ್ಥಿತಿಗೆ ಬಲಿಯಾದದ್ದು ಮಾತ್ರ ಭಾರತ. ಈ ಭಾಗದಲ್ಲಿ ರಾಜಕೀಯ ಅಸ್ಥಿರತೆ ಹೆಚ್ಚಿದಷ್ಟೂ ಅಲ್ಲಿನ ಜನರು ಬಾಂಗ್ಲಾದೇಶದಿಂದ ಭಾರತಕ್ಕೆ ವಲಸೆ ಬರಲು ಆರಂಭಿಸಿದರು. ಲಕ್ಷಾಂತರ ಜನರು ಈ ರೀತಿ ಭಾರತಕ್ಕೆ ವಲಸೆ ಬಂದಿದ್ದಾರೆ. ಈ ಅವಧಿಯೇ ಬಾಂಗ್ಲಾದೇಶದಿಂದ ಭಾರತಕ್ಕೆ ವಲಸೆ ಪ್ರವಾಹ ಆರಂಭವಾಗಲು ನಾಂದಿ ಹಾಡಿತು.

ಬಾಂಗ್ಲಾದೇಶದಿಂದ ಸುಮಾರು 2.40 ಕೋಟಿ ಅಕ್ರಮ ವಲಸಿಗರು ಭಾರತಕ್ಕೆ ಬಂದಿದ್ದಾರೆ ಎಂದು ಈ ಹಿಂದೆ ಸಂಸತ್ತಿನಲ್ಲಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಕಿರಣ್‌ ರಿಜಿಜು ಹೇಳಿದ್ದಾರೆ. ಈ ಪೈಕಿ ಹೆಚ್ಚಿನ ಜನರು ಪಶ್ಚಿಮ ಬಂಗಾಳಕ್ಕೆ ಬಂದಿದ್ದಾರೆ. ಜನಸಾಮಾನ್ಯರು ಭಾವಿಸಿರುವ ಹಾಗೆ ಇವರೆಲ್ಲರೂ ಅಸ್ಸಾಮ್‌ಗೆ ತೆರಳಿಲ್ಲ.  75 ಲಕ್ಷಕ್ಕೂ ಹೆಚ್ಚು ಅಕ್ರಮ ವಲಸಿಗರು ಸದ್ಯ ಪಶ್ಚಿಮ ಬಂಗಾಳದಲ್ಲಿ ನೆಲೆ ಕಂಡುಕೊಂಡಿದ್ದಾರೆ. ಪಶ್ಚಿಮ ಬಂಗಾಳ ಬಿಟ್ಟರೆ, ಅಕ್ರಮ ವಲಸಿಗರು ನೆಲೆ ಕಂಡುಕೊಂಡಿರುವ ರಾಜ್ಯಗಳೆಂದರೆ ಅಸ್ಸಾಂ ಮತ್ತು ತ್ರಿಪುರಾ. ಇವು ಎರಡನೇ ಮತ್ತು ಮೂರನೇ ಸ್ಥಾನದಲ್ಲಿವೆ.

ಈ ವಲಸಿಗರ ಸಮಸ್ಯೆಯ ಬಿಸಿ ರಾಷ್ಟ್ರ ರಾಜಧಾನಿಗೂ ತಟ್ಟದೇ ಬಿಟ್ಟಿಲ್ಲ. ಅಂದಾಜಿನ ಪ್ರಕಾರ 7 ರಿಂದ 8 ಲಕ್ಷ ಅಕ್ರಮ ವಲಸಿಗರು ದೆಹಲಿಯಲ್ಲಿದ್ದಾರೆ. ಇದೇ ರೀತಿ ಭಾರಿ ಸಂಖ್ಯೆಯಲ್ಲಿ ಇವರು ಉತ್ತರ ಪ್ರದೇಶ, ಕೇರಳ ಮತ್ತು ಹೈದರಾಬಾದ್‌ಗೂ ಬಂದು ನೆಲೆಸಿದ್ದಾರೆ. ತುಂಬ ಹಿಂದಿನಿಂದಲೂ ಅಸ್ಸಾಮ್‌ನಲ್ಲಿ ಅಕ್ರಮ ವಲಸಿಗರ ಬಗ್ಗೆ ಪ್ರತಿಭಟನೆ ವಿರೋಧ ನಡೆಯುತ್ತಲೇ ಇದೆ ಎಂಬುದು ತಿಳಿಯದ ಸಂಗತಿಯೇನಲ್ಲ. ಈ ವಲಸೆಯಿಂದಲೇ ಹಿಂದುಗಳು ಮತ್ತು ಮುಸ್ಲಿಮರ ಮಧ್ಯೆ ಪ್ರಕ್ಷುಬ್ಧ ಪರಿಸ್ಥಿತಿಗೆ ಕಾರಣವಾಗಿದೆ. ಇದರಿಂದಾಗಿಯೇ ಜನಸಂಖ್ಯೆಯಲ್ಲಿ ಅಪಾರ ಏರಿಕೆಯೂ ಆಗಿದೆ. 25 ಲಕ್ಷದಿಂದ 35 ಲಕ್ಷಕ್ಕೆ ಜನಸಂಖ್ಯೆ ವಲಸೆಯಿಂದಲೇ ಏರಿಕೆಯಾಗಿದೆ.

ಅಸ್ಸಾಮಿನ ಜನರಿಗೆ ಇದು ಅಸ್ತಿತ್ವದ ಪ್ರಶ್ನೆ, ತಮ್ಮ ಮಾತೃಭಾಷೆ, ತಮ್ಮ ಸಂಸ್ಕೃತಿಯನ್ನು ವಲಸಿಗರಿಂದ ಉಳಿಸಿಕೊಳ್ಳುವ ಅನಿವಾರ್ಯ ಅವರಿಗೆ ಇದೆ. ವಲಸಿಗರಿಗೆ ಹೋಲಿಸಿದರೆ ಅಸ್ಸಾಮ್‌ನಲ್ಲಿ ಮೂಲನಿವಾಸಿಗಳ ಸಂಖ್ಯೆ ಶೇಕಡಾ 50 ಕ್ಕೂ ಕಡಿಮೆಯಾಗುತ್ತಿದೆ. ಇದೇ ಕಾರಣಕ್ಕೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಕಾರಣದಿಂದಾಗಿಯೇ ಕೇಂದ್ರ ಸರ್ಕಾರ ಒಪ್ಪಂದ ಮಾಡಿಕೊಂಡು, ರಾಷ್ಟ್ರೀಯ ಪೌರತ್ವ ನೋಂದಣಿಯನ್ನೂ ಆರಂಭಿಸಿತು. ಇದರಲ್ಲಿ ಸುಮಾರು 19 ಲಕ್ಷ ಅಕ್ರಮ ವಲಸಿಗರು ಕಂಡುಬಂದಿದ್ದಾರೆ. ಈ ಗದ್ದಲ ಇಂದಿಗೂ ನಡೆಯುತ್ತಲೇ ಇದೆ.

ಎನ್‌ಆರ್‌ಸಿ ಸಿದ್ಧಪಡಿಸುವ ಪ್ರಕ್ರಿಯೆಯಲ್ಲೇ ಅವ್ಯವಹಾರ ನಡೆದಿದೆ ಎಂದು ಅಸ್ಸಾಮಿನ ಜನರು ಆರೋಪ ಮಾಡುತ್ತಿದ್ದಾರೆ. ಆದರೆ ಪಶ್ಚಿಮ ಬಂಗಾಳದಲ್ಲಿ ಈ ಪರಿಸ್ಥಿತಿ ಸಂಪೂರ್ಣ ಬೇರೆಯೇ ಆಗಿದೆ. ಪಶ್ಚಿಮ ಬಂಗಾಳದಲ್ಲಿ ಭಾರಿ ಪ್ರಮಾಣದಲ್ಲಿ ವಲಸಿಗರು ಆಗಮಿಸಿ ನೆಲೆ ಕಂಡುಕೊಂಡಿದ್ದರೂ ಇಲ್ಲಿ ಈ ವಿಚಾರ ಪ್ರಾಮುಖ್ಯತೆ ಪಡೆದೇ ಇರಲಿಲ್ಲ. ತೀರಾ ಇತ್ತೀಚೆಗೆ ಇಲ್ಲಿ ಬಿಜೆಪಿ ತನ್ನ ರಾಜಕೀಯ ಬೇರುಗಳನ್ನು ಗಟ್ಟಿಗೊಳಿಸುತ್ತಿದ್ದಂತೆಯೇ ಈ ವಿಚಾರ ಪ್ರಸ್ತಾಪವಾಗಿದೆ.

ಅಕ್ರಮ ವಲಸೆಯೇ ಧಾರ್ಮಿಕ ಜನಸಂಖ್ಯೆಯ ಅನುಪಾತದಲ್ಲಿ ಮಹತ್ವದ ವ್ಯತ್ಯಾಸವಾಗುವುದಕ್ಕೆ ಕಾರಣವಾಗಿದೆ ಎಂದು ಬಿಜೆಪಿ ಹೇಳುತ್ತಿದೆ. ಪಶ್ಚಿಮ ಬಂಗಾಳದಲ್ಲಿ 1950 ರಲ್ಲಿ ಮುಸ್ಲಿಂ ಜನಸಂಖ್ಯೆ ಶೇ. 20 ರಷ್ಟು ಏರಿಕೆಯಾದರೆ,  2011ರಲ್ಲಿ ಇದು ಶೇ. 27 ರಷ್ಟು ಏರಿಕೆಯಾಗಿದೆ. ಸಿಪಿಎಂ ಮತ್ತು ತೃಣಮೂಲ ಕಾಂಗ್ರೆಸ್‌ ಈ ಸಮಸ್ಯೆಯನ್ನು ಮುಚ್ಚಿ ಹಾಕಿವೆ. ಇದರ ಹಿಂದೆ ಷಡ್ಯಂತ್ರ ನಡೆಯುತ್ತಿದೆ. ಅಸ್ಸಾಂನಲ್ಲಿ ನಡೆಯುವ ಹಾಗೆ ಪ್ರತಿಭಟನೆಗಳು ಮತ್ತು ಪ್ರಚಾರ ಈ ವಿಚಾರಕ್ಕೆ ಇಲ್ಲಿ ಸಿಗುತ್ತಿಲ್ಲ ಎಂದು ಬಿಜೆಪಿ ಹಿಂದಿನಿಂದಲೂ ಆರೋಪಿಸುತ್ತಿದೆ. ಅಸ್ಸಾಮಿನ ಜನರು ತಮ್ಮ ಜನಸಂಖ್ಯೆ ಕಡಿಮೆಯಾಗುತ್ತಿರುವುದರಿಂದ ಅಸ್ತಿತ್ವಕ್ಕಾಗಿ ಹೋರಾಡುತ್ತಿದ್ದರೆ, ಪಶ್ಚಿಮ ಬಂಗಾಳದಲ್ಲಿ ವಲಸಿಗರ ಸಂಖ್ಯೆ ಹೆಚ್ಚೇ ಇದ್ದರೂ ಪರಿಸ್ಥಿತಿ ಶಾಂತವಾಗಿಯೇ ಇತ್ತು.

ಬಾಂಗ್ಲಾದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ಭಾಷೆಯ ವ್ಯತ್ಯಾಸ ಕಡಿಮೆ. ಬಾಂಗ್ಲಾದಲ್ಲಿನ ಜನರು ಮಾತನಾಡುವ ಭಾಷೆಗೆ ತೀರಾ ಹೋಲುವ ಭಾಷೆಯನ್ನೇ ಪಶ್ಚಿಮ ಬಂಗಾಳದಲ್ಲೂ ಮಾತನಾಡುತ್ತಾರೆ. ಅಲ್ಲಿನ ಸಂಸ್ಕೃತಿಗೆ ತೀರಾ ಹತ್ತಿರದ ಸಂಸ್ಕೃತಿಯೇ ಪ. ಬಂಗಾಳದಲ್ಲೂ ಇದೆ. ಹೀಗಾಗಿ ಇಲ್ಲಿ ಅಕ್ರಮ ವಲಸಿಗರನ್ನು ಬೇರ್ಪಡಿಸುವುದು ಸುಲಭವಲ್ಲ.

ತ್ರಿಪುರಾದಲ್ಲಿ ಇದೇ ಅಕ್ರಮ ವಲಸೆ ಸಮಸ್ಯೆಯಿಂದ ಆದಿವಾಸಿಗಳ ಜನಸಂಖ್ಯೆ ಪ್ರಮಾಣ ಕುಸಿದಿದೆ. 1951ರಲ್ಲಿ ತ್ರಿಪುರಾದಲ್ಲಿ ಆದಿವಾಸಿಗಳ ಜನಸಂಖ್ಯೆ ಶೇ. 60 ರಷ್ಟು ಇದ್ದರೆ, 2011ರಲ್ಲಿ ಇದು ಶೇ. 31 ಕ್ಕೆ ಕುಸಿದಿದೆ. ಹೀಗಾಗಿ ಆದಿವಾಸಿಗಳಲ್ಲಿ ಅಕ್ರಮ ವಲಸೆ ಬಗ್ಗೆ ತೀವ್ರ ವಿರೋಧವಿದೆ.

ಈ ಹಿನ್ನೆಲೆಯಲ್ಲಿ ಹಲವು ಸುತ್ತಿನಲ್ಲಿ ಚರ್ಚೆ, ಮಾತುಕತೆಗಳನ್ನು ನಡೆಸಿ ಗೃಹ ಸಚಿವ ಅಮಿತ್‌ ಶಾ ಮಸೂದೆಯನ್ನು ತಯಾರಿಸಿದ್ದಾರೆ. ಹೀಗಾಗಿಯೇ ಲೋಕಸಭೆ ಮತ್ತು ರಾಜ್ಯಸಭೆಯ ಬಹುಮತದ ಸದಸ್ಯರು ಈ ಮಸೂದೆಗೆ ಬೆಂಬಲ ನೀಡಿದ್ದಾರೆ. ಆದರೆ ಇನ್ನರ್ ಲೈನ್‌ ಪರ್ಮಿಟ್‌ ಮತ್ತು ಸ್ವಯಂ ಆಡಳಿತ ಹೊಂದಿರುವ ಪ್ರದೇಶಗಳಿಗೆ ಈ ಕಾಯ್ದೆ ಅನ್ವಯವಾಗುವುದಿಲ್ಲ. ಅಸ್ಸಾಮ್‌ನಲ್ಲಿ 3 ಸ್ವಯಂ ಆಡಳಿತ ಪ್ರದೇಶಗಳನ್ನು ಹೊರತುಪಡಿಸಿ ಇತರ ಪ್ರದೇಶಗಳಿಗೆ ಕಾಯ್ದೆ ಅನ್ವಯಿಸುತ್ತದೆ. ಆದಿವಾಸಿಗಳು ಸ್ವಯಂ ಆಡಳಿತ ನಡೆಸುವ ಪ್ರದೇಶಗಳನ್ನು ಹೊರತುಪಡಿಸಿ ತ್ರಿಪುರಾದ ಇತರ ಭಾಗಗಳು ಹಾಗೂ ಮೇಘಾಲಯದ ರಾಜಧಾನಿ ಶಿಲ್ಲಾಂಗ್‌ಗೆ ಈ ಕಾಯ್ದೆ ಅನ್ವಯಿಸುತ್ತದೆ. ಹೀಗಾಗಿ ಈ ಭಾಗದಲ್ಲಿ ಮಾತ್ರ ಪ್ರತಿಭಟನೆಗಳು ನಡೆಯುತ್ತಿವೆ.

ಬದ್ಧತೆಯೇ ಕೊರತೆ

ಭಾರತದ ಪೂರ್ವ ಭಾಗವಾದ ಅಸ್ಸಾಂ ಮತ್ತು ತ್ರಿಪುರಾದಲ್ಲಿ ವಲಸೆ ಸಮಸ್ಯೆ ವಿಪರೀತ ಮಟ್ಟದಲ್ಲಿದೆ. ತ್ರಿಪುರಾದಲ್ಲೂ ಈ ಸಮಸ್ಯೆ ಇಷ್ಟೇ ಪ್ರಮಾಣದಲ್ಲಿದೆ. ಆದರೆ ಆದಿವಾಸಿಗಳು ನಡೆಸುತ್ತಿರುವ ಪ್ರತಿಭಟನೆ ಯಾರ ಗಮನಕ್ಕೂ ಬರುತ್ತಿಲ್ಲ. ಇದೊಂದು ಸಮಸ್ಯೆ ಎಂದೇ ಪರಿಗಣಿಸಲ್ಪಟ್ಟಿಲ್ಲ.

ಅಸ್ಸಾಮ್‌ನಲ್ಲಿ ವಲಸೆ ವಿರುದ್ಧ ನಡೆಯುತ್ತಿರುವ ವಿರೋಧ ಹಾಗೂ ಪ್ರತಿಭಟನೆಗೆ ಇತಿಹಾಸವೇ ಇದೆ. ಇದೇ ರೀತಿಯ ಪ್ರತಿಭಟನೆ ತಾರಕಕ್ಕೆ ಹೋಗಿ 1985ರಲ್ಲಿ ಒಪ್ಪಂದವೂ ನಡೆದಿದೆ. ಆದರೆ ಈ ಒಪ್ಪಂದ ಮಾಡಿಕೊಂಡು 35 ವರ್ಷಗಳೇ ಕಳೆದರೂ, ಒಪ್ಪಂದದಲ್ಲಿನ ಅಂಶಗಳನ್ನು ಸರಿಯಾಗಿ ಸರ್ಕಾರಗಳು ಅನುಷ್ಠಾನಕ್ಕೆ ತಂದಿಲ್ಲ ಎಂಬ ಸಿಟ್ಟೂ ಅಸ್ಸಾಮ್‌ ಜನರಲ್ಲಿ ಈಗಲೂ ಇದೆ.

ಸುಪ್ರೀಂಕೋರ್ಟ್‌ ಮಧ್ಯಪ್ರವೇಶದಲ್ಲಿ ಕೊನೆಗೂ ಎನ್‌ಆರ್‌ಸಿ ಆರಂಭವಾಯಿತು. ಇದರಲ್ಲಿ ಸುಮಾರು 19 ಲಕ್ಷ ವಲಸಿಗರು ಇದ್ದಾರೆ ಎಂಬುದು ಕಂಡುಬಂತು. ಈ ಪೈಕಿ ಐದರಿಂದ ಆರು ಲಕ್ಷ ಹಿಂದುಗಳು ಭಾರತದಲ್ಲೇ ವಾಸಿಸಬಹುದು. ಇವರಿಗೆ ಹೊಸ ಕಾಯ್ದೆಯಿಂದ  ಅರ್ಹತೆ ಸಿಕ್ಕಂತಾಗಿದೆ. ಇದೇ ಅಸ್ಸಾಮಿಗಳ ಸಿಟ್ಟಿಗೆ ಈಗ ಕಾರಣವಾಗಿದೆ. ತಮ್ಮ ಅಸ್ತಿತ್ವ, ಭಾಷೆ, ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಅವರು ಹೋರಾಟ ನಡೆಸುತ್ತಿದ್ದಾರೆ.

ನಿಮ್ಮ ಆತಂಕಕ್ಕೆ ಕಾರಣವಾಗಿರುವ ಸಮಸ್ಯೆಗಳನ್ನು ನಾವು ಪರಿಹರಿಸಲು ಬದ್ಧವಾಗಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಸ್ವತಃ ಹೇಳಿದರೂ ಅಸ್ಸಾಮಿಗಳ ಸಿಟ್ಟು ತಣಿಯುತ್ತಿಲ್ಲ. ಈ ಪ್ರತಿಭಟನೆಗಳನ್ನು ಅವರು ಬಿಜೆಪಿ ವಿರುದ್ಧವೇ ಮಾಡುತ್ತಿದ್ದಾರೆ ಎಂದೇನಲ್ಲ. ಅಸ್ಸಾಮಿನ ಜನರಿಗೆ ಯಾವ ರಾಜಕೀಯ ಪಕ್ಷದ ಮೇಲೂ ಒಳ್ಳೆಯ ಅಭಿಪ್ರಾಯವೇ ಇಲ್ಲ. ಎಲ್ಲ ರಾಜಕೀಯ ಪಕ್ಷಗಳೂ ಒಂದೇ, ಯಾವ ಪಕ್ಷಗಳೂ ನಮ್ಮ ಹಿತ ರಕ್ಷಣೆ ಮಾಡುವುದಿಲ್ಲ ಎಂದು ಅಸ್ಸಾಮಿಗಳು ಭಾವಿಸಿದ್ದಾರೆ. ಆದರೆ ನಿಮ್ಮ ಸಂಸ್ಕೃತಿ, ಭಾಷೆ ಹಾಗೂ ಅಸ್ತಿತ್ವಕ್ಕೆ ಯಾವ ಗಂಡಾಂತರವೂ ಇಲ್ಲ ಎಂಬುದನ್ನು ಮನವರಿಕೆ ಮಾಡಿಕೊಟ್ಟು, ಅವರನ್ನು ಮನವೊಲಿಸುವ ಮತ್ತು ಅವರ ವಿಶ್ವಾಸ ಗಳಿಸಿಕೊಳ್ಳುವ ತಕ್ಷಣದ ಕ್ರಮ ಈಗ ಆಗಲೇ ಬೇಕಿದೆ.

ಆದರೆ ಪಶ್ಚಿಮ ಬಂಗಾಳದಲ್ಲಿನ ಪರಿಸ್ಥಿತಿ ಸಂಪೂರ್ಣ ಭಿನ್ನ. ಅಲ್ಲಿ ಎಲ್ಲ ವಲಸಿಗರಿಗೂ ಪೌರತ್ವ ನೀಡಬೇಕು ಎಂಬ ಒಲವನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೊಂದಿದ್ದಾರೆ. ಇದೇ ಅಭಿಪ್ರಾಯವನ್ನು ಕೇರಳ, ಪಂಜಾಬ್‌ ಮತ್ತು ಮಧ್ಯಪ್ರದೇಶವೂ ಅನುಸರಿಸುತ್ತಿದೆ.

ಸಹಜವಾಗಿಯೇ ಪ್ರಾದೇಶಿಕ ಪಕ್ಷಗಳು ತಮ್ಮ ರಾಜ್ಯದ ಜನರ ಹಿತಾಸಕ್ತಿಗಳನ್ನು ಮಾತ್ರ ಗಮನದಲ್ಲಿಟ್ಟುಕೊಂಡು ನಿಲುವು ತಾಳುತ್ತವೆ. ಆದರೆ, ರಾಷ್ಟ್ರೀಯ ಪಕ್ಷಗಳ ನಿಲುವು ವಿಭಿನ್ನವಾಗಿರುತ್ತವೆ. ಇವು ರಾಷ್ಟ್ರೀಯ ದೃಷ್ಟಿಕೋನದಿಂದ ಸಮಸ್ಯೆಯನ್ನು ನೋಡುತ್ತವೆ. ಅಸ್ಸಾಮ್‌ ಮತ್ತು ಪಶ್ಚಿಮ ಬಂಗಾಳದ ಸಮಸ್ಯೆ ತುಂಬ ಭಿನ್ನವಾಗಿದೆ. ಒಟ್ಟಿನಲ್ಲಿ ಎರಡೂ ರಾಜ್ಯಗಳಲ್ಲಿನ ಪಕ್ಷಗಳು ಈ ಸನ್ನಿವೇಶವನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುತ್ತಿವೆ.

ದುರಾದೃಷ್ಟವಶಾತ್, ತಮ್ಮ ಪಕ್ಷದ ನಿಲುವನ್ನು ಸಮರ್ಥಿಸಿಕೊಳ್ಳುವುದನ್ನು ಬಿಟ್ಟು ಸಮಸ್ಯೆಯನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನಗಳನ್ನು ಅವರು ಮಾಡುತ್ತಲೇ ಇಲ್ಲ.

Conclusion:

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.