ETV Bharat / bharat

ಚೀನಾ ಸರ್ಕಾರದಿಂದಲೇ ಗಾಲ್ವಾನ್​ ಸಂಘರ್ಷಕ್ಕೆ ಕುಮ್ಮಕ್ಕು.. ಅಮೆರಿಕನ್​ ಇಂಟೆಲಿಜೆನ್ಸ್​​

ಭಾರತ ಮತ್ತು ಚೀನಾದ ನಡುವೆ ಸಂಘರ್ಷ ನಡೆಯಲು ಚೀನಾ ಸರ್ಕಾರ ಅಲ್ಲಿನ ಸೈನಿಕರಿಗೆ ಆದೇಶಿಸಿದ್ದೇ ಕಾರಣ ಎಂದು ಅಮೆರಿಕ ಗುಪ್ತಚರ ಇಲಾಖೆ ಆಘಾತಕಾರಿ ಮಾಹಿತಿ ಹೊರಹಾಕಿದೆ.

galwan valley
ಗಾಲ್ವಾನ್ ಕಣಿವೆ
author img

By

Published : Jun 23, 2020, 4:08 PM IST

ವಾಷಿಂಗ್ಟನ್ (ಅಮೆರಿಕ) : ಭಾರತ- ಚೀನಾ ಮಧ್ಯದ ಲೈನ್​ ಆಫ್​ ಆಕ್ಚುವಲ್​ ಕಂಟ್ರೋಲ್​ ಗಡಿಯಲ್ಲಿ ನಡೆದ ಸಂಘರ್ಷಕ್ಕೆ ಚೀನಾದ ಹಿರಿಯ ಸೇನಾ ಮುಖಂಡರ ಕುಮ್ಮಕ್ಕು ಕಾರಣ ಎಂದು ಅಮೆರಿಕದ ಗುಪ್ತಚರ ಇಲಾಖೆ ಅಘಾತಕಾರಿ ಮಾಹಿತಿ ಬಿಡುಗಡೆ ಮಾಡಿದೆ.

ಪೂರ್ವ ಲಡಾಖ್​ನ ಸಂಘರ್ಷಕ್ಕೆ ತಾನು ಕುಮ್ಮಕ್ಕು ನೀಡಿಲ್ಲ ಎಂದು ಚೀನಾ ರಕ್ಷಣಾ ಮುಖ್ಯಸ್ಥರು ಹೇಳಿದ ಬೆನ್ನಲ್ಲೇ ಅಮೆರಿಕದ ಗುಪ್ತಚರ ಇಲಾಖೆ ಈ ಮಾಹಿತಿ ಹೊರ ಹಾಕಿದೆ. ನಂಬಲಾರ್ಹ ಮೂಲಗಳಿಂದ ಚೀನಾದ ಪಶ್ಚಿಮ ಭಾಗದ ಕಮಾಂಡರ್​ ಜನರಲ್​ ಝಾವೋ ಝೋಂಕಿ ಸೇನಾ ಸಂಘರ್ಷಕ್ಕೆ ಕುಮ್ಮಕ್ಕು ನೀಡಿದ್ದು, ಚೀನಾ ಸರ್ಕಾರದ ಆದೇಶದಂತೆ ತನ್ನ ''ಭಾರತಕ್ಕೆ ಪಾಠ ಕಲಿಸುವ ನೀತಿ''ಯ ಅಂಗವಾಗಿ ಸಂಘರ್ಷಕ್ಕೆ ಆದೇಶ ಕಮಾಂಡರ್​ ನೀಡಿದ್ದ ಎಂಬ ಮಾಹಿತಿಯನ್ನು ಅಮೆರಿಕ ಗುಪ್ತಚರ ಇಲಾಖೆ ಬಹಿರಂಗಪಡಿಸಿದೆ.

ಸಂಘರ್ಷ ಹಿಮಾಲಯದ ಗಾಲ್ವಾನ್​ ಕಣಿವೆಯಲ್ಲಿ ನಡೆದಿದ್ದು, ಭಾರತದ 20 ಮಂದಿ ಯೋಧರು ಹುತಾತ್ಮರಾಗಿ, ಚೀನಾದ 35 ಮಂದಿ ಯೋಧರು ಸಾವನ್ನಪ್ಪಿದ್ದರು ಎಂಬ ಮಾಹಿತಿ ಬಹಿರಂಗವಾಗಿದೆ. 1962 ಇಂಡೋ- ಚೀನಾ ಯುದ್ಧದ ನಂತರ ಅತ್ಯಂತ ಭೀಕರ ಸಂಘರ್ಷ ಇದಾಗಿತ್ತು.

ಇದರ ಕುರಿತು ಶುಕ್ರವಾರ ಮಾತನಾಡಿದ್ದ ಚೀನಾದ ವಿದೇಶಾಂಗ ಇಲಾಖೆಯ ವಕ್ತಾರ ಝಾವೋ ಲೈಜಿನ್ ಗಾಲ್ವಾನ್​ ಕಣಿವೆ ಲೈನ್​ ಆಫ್​ ಕಂಟ್ರೋಲ್​ನ ಒಳಗೆ ಅಂದರೆ ಚೀನಾದ ಭೂಪ್ರದೇಶಕ್ಕೆ ಸೇರುತ್ತದೆ. ಭಾರತೀಯ ಸೈನಿಕರು ಗಾಲ್ವಾನ್​ ಕಣಿವೆಗೆ ಅತಿಕ್ರಮ ಪ್ರವೇಶ ಮಾಡಿದಾಗ ಸಂಘರ್ಷವಾಗಿದೆ ಎಂದು ಹೇಳಿದ್ದರು. ಈಗ ಅಮೆರಿಕದ ಗುಪ್ತಚರ ಇಲಾಖೆಯ ವರದಿ ಘರ್ಷಣೆ ಸರ್ಕಾರ ಆದೇಶ ಎಂಬ ಮಾಹಿತಿ ಚೀನಾದ ವಿದೇಶಾಂಗ ನೀತಿಯ ಮೇಲೆ ಮತ್ತಷ್ಟು ಅನುಮಾನಗಳನ್ನು ಮೂಡಿಸುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.