ಸಂಭಾಲ್ (ಉತ್ತರಪ್ರದೇಶ): ಸ್ವಾತಂತ್ರ್ಯೋತ್ಸವ ದಿನದಂದೇ ಇಲ್ಲಿನ 16 ವರ್ಷದ ಬಾಲಕಿ ಪ್ರಧಾನಿಗೆ 18 ಪುಟಗಳ ಪತ್ರ ಬರೆದು ಆತ್ಮಹತ್ಯೆಗೆ ಶರಣಾಗಿದ್ದ ಘಟನೆ ನಡೆದಿತ್ತು. ಪತ್ರದಲ್ಲಿ ದೇಶದ ಸಮಸ್ಯೆಗಳಾದ ಭ್ರಷ್ಟಾಚಾರ, ಅರಣ್ಯ ನಾಶ, ಹೆಚ್ಚುತ್ತಿರುವ ಮಾಲಿನ್ಯ ಸೇರಿದಂತೆ ಹಲವು ಸಮಸ್ಯೆಗಳ ಕುರಿತಂತೆ ಪತ್ರದಲ್ಲಿ ವಿವರಿಸಲಾಗಿದ್ದು, ಈ ಎಲ್ಲ ವಿಚಾರಗಳು ನನ್ನ ಸಾವಿಗೆ ಕಾರಣವಾಗಿದೆ ಎಂದೂ ಬರೆಯಲಾಗಿತ್ತು.
ಇದೀಗ 10ನೇ ತರಗತಿ ಬಾಲಕಿ ಬರೆದಿರುವ ಈ ಪತ್ರವನ್ನು ಉತ್ತರಪ್ರದೇಶ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಪ್ರಧಾನಿ ಮೋದಿಗೆ ಕಳುಹಿಸಿದ್ದು, ಈ ಕುರಿತಂತೆ ಮನ್ - ಕಿ- ಬಾತ್ನಲ್ಲಿ ಚರ್ಚೆ ಮಾಡುವಂತೆ ಮನವಿ ಮಾಡಿದ್ದಾರೆ.
ಇನ್ನು ಈ ಕುರಿತು ಮಾತನಾಡಿರುವ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ.ವಿಶೇಷ್ ಗುಪ್ತಾ, ‘ಬಾಲಕಿ ಬರೆದಿರುವ ಪತ್ರವನ್ನು ಪ್ರಧಾನಮಂತ್ರಿಯ ಕಚೇರಿಗೆ ಕಳುಹಿಸಲಾಗಿದೆ. ಈ ಕುರಿತು ಪ್ರಸ್ತಾಪಿಸುವಂತೆ ಪತ್ರದಲ್ಲಿಯೂ ತಿಳಿಸಲಾಗಿದೆ. ಅಲ್ಲದೇ ಬಾಲಕಿಯ ಪತ್ರದ ಪ್ರತಿಯನ್ನೂ ಅವರಿಗೆ ಕಳುಹಿಸಲಾಗಿದೆ’ ಎಂದಿದ್ದಾರೆ.