ಬೆಂಗಳೂರು: ನವದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೆರೆಹಾನಿ ಪರಿಹಾರಕ್ಕೆ ಹೆಚ್ಚಿನ ಅನುದಾನ ಮಂಜೂರು ಮಾಡುವಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ಗೆ ಮನವಿ ಮಾಡಿದ್ದಾರೆ.
![Chief Minister BS Yeddyurappa met Nirmala Sitharaman, Rajanath Singh](https://etvbharatimages.akamaized.net/etvbharat/prod-images/kn-bng-11-cm-central-ministermeeting-script-7208080_17092020201424_1709f_1600353864_495.jpg)
ರಾಜ್ಯಕ್ಕೆ ಹೆಚ್ಚಿನ ಅನುದಾನ ಹಾಗೂ ಸಂಪುಟ ವಿಸ್ತರಣೆಗೆ ಹೈಕಮಾಂಡ್ ಸಮ್ಮತಿ ಪಡೆಯಲು ನವದೆಹಲಿಗೆ ತೆರಳಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಇಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿದರು. ರಾಜ್ಯದಲ್ಲಿ ಅನುಷ್ಠಾನಗೊಳ್ಳುತ್ತಿರುವ ಯೋಜನೆಗಳು, ಯೋಜನೆಗಳ ಅನುಷ್ಠಾನಕ್ಕೆ ಅನುದಾನ ಲಭ್ಯತೆ, ಪ್ರವಾಹದಿಂದ ಆಗಿರುವ ಹಾನಿ, ಪರಿಹಾರ ಕಾಮಗಾರಿಗಳ ವಿವರವನ್ನು ವಿವರಿಸಿ ರಾಜ್ಯಕ್ಕೆ ಅನುದಾನ ನೀಡುವಂತೆ ಪ್ರಸ್ತಾವನೆ ಸಲ್ಲಿಸಿದರು.
![Chief Minister BS Yeddyurappa met Nirmala Sitharaman, Rajanath Singh](https://etvbharatimages.akamaized.net/etvbharat/prod-images/kn-bng-11-cm-central-ministermeeting-script-7208080_17092020201424_1709f_1600353864_383.jpg)
ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ವಿಜಯಬಾಸ್ಕರ್ ಉಪಸ್ಥಿತರಿದ್ದರು.
![Chief Minister BS Yeddyurappa met Nirmala Sitharaman, Rajanath Singh](https://etvbharatimages.akamaized.net/etvbharat/prod-images/kn-bng-11-cm-central-ministermeeting-script-7208080_17092020201424_1709f_1600353864_1106.jpg)