ನಾಗ್ಪುರ/ಮಹಾರಾಷ್ಟ್ರ: ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ಮಹಾರಾಷ್ಟ್ರದ ನಾಗ್ಪುರದಲ್ಲಿ ವಕೀಲರು ಹಾಗೂ ನ್ಯಾಯಾಧೀಶರೊಂದಿಗೆ ಸೇರಿ ಮೈದಾನದಲ್ಲಿ ಕ್ರಿಕೆಟ್ ಆಡಿದರು.
ನಾಗ್ಪುರಕ್ಕೆ ಭೇಟಿ ನೀಡಿದ್ದ ವೇಳೆ ಇಲ್ಲಿನ ವಿದರ್ಭ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಂನಲ್ಲಿ ಜಸ್ಟೀಸ್ ಇಲೆವೆನ್ ವರ್ಸಸ್ ಅಡ್ವೋಕೇಟ್ ಇಲೆವೆನ್ ಎಂಬ ಎರಡು ತಂಡಗಳ ನಡುವೆ ಮ್ಯಾಚ್ ಆಯೋಜಿಸಲಾಗಿತ್ತು.
![Chief Justice of India, Sharad Arvind Bobde played cricket](https://etvbharatimages.akamaized.net/etvbharat/prod-images/5768883_juuuuuuuu.jpg)
ಟೀಮ್ ಜಸ್ಟೀಸ್ ಇಲೆವೆನ್ ಮೊದಲು ಬ್ಯಾಟಿಂಗ್ ಮಾಡಿ 15 ಓವರ್ಗಳಲ್ಲಿ 54 ರನ್ ಕಲೆ ಹಾಕಿತು. ಜಸ್ಟೀಸ್ ಇಲೆವೆನ್ ಪರ ಆರಂಭಿಕ ಬ್ಯಾಟ್ಸ್ಮನ್ ಆಗಿ ಫೀಲ್ಡಿಗಿಳಿದ ಸಿಜೆಐ ಎಸ್.ಎ. ಬೊಬ್ಡೆ 30 ಎಸೆತಗಳಲ್ಲಿ 3 ಬೌಂಡರಿ ಸಿಡಿಸಿ 18 ರನ್ ಕಲೆಹಾಕಿ, ಅಡ್ವೊಕೇಟ್ ಅಶು ಜೋಷಿಗೆ ವಿಕೆಟ್ ಒಪ್ಪಿಸಿದ್ರು. 54 ರ ಮೊತ್ತದ ಬೆನ್ನತ್ತಿದ್ದ ಅಡ್ವೊಕೇಟ್ ಇಲೆವೆನ್ ತಂಡ ಕೇವಲ 11 ಓವರ್ಗಳಲ್ಲಿ ಗುರಿ ಮುಟ್ಟಿ ಪಂದ್ಯ ತನ್ನದಾಗಿಸಿಕೊಂಡಿತು.