ಚೆನ್ನೈ: ವೃದ್ಧ ಮಹಿಳೆಯ ಶವ ಸಂಸ್ಕಾರ ಮಾಡಿ ಪೊಲೀಸ್ ಇನ್ಸ್‌ಪೆಕ್ಟರ್ ಮಾನವೀಯತೆ ಮೆರೆದಿದ್ದಾರೆ.
ಮೂವರು ವೃದ್ಧ ಅನಾಥ ಸಹೋದರಿಯರು ಚೆನ್ನೈನ ಒಟ್ಟೇರಿಯ ಎಸ್‌ವಿಎಂ ನಗರದ ರಸ್ತೆಬದಿಯಲ್ಲಿಯೇ ಜೀವನ ಸಾಗಿಸುತ್ತಿದ್ದರು. ಲಾಕ್ಡೌನ್ ಆರಂಭವಾದಾಗಿನಿಂದ ಸ್ಥಳೀಯರಯ ಹಾಗೂ ಪೊಲೀಸರು ಇವರಿಗೆ ಆಹಾರ ಹಾಗೂ ಇನ್ನಿತರೆ ವಸ್ತುಗಳನ್ನು ನೀಡುತ್ತಿದ್ದರು.
ಕೆಲವು ದಿನಗಳ ಹಿಂದೆ ಪ್ರಭಾವತಿ (57) ಎಂಬ ಮಹಿಳೆಗೆ ಕಾಲಿಗೆ ಗಾಯವಾಗಿತ್ತು. ಈ ನೋವಿನಿಂದ ಬಳಲಿ ಸಾವಿಗೀಡಾಗಿದ್ದಳು .ನಂತರ ಈಕೆಯ ಸಹೋದರಿಯರು ಸ್ಥಳೀಯರ ಸಹಾಯವನ್ನು ಆಶಿಸಿದರು. ಆದರೆ, ಕೊರೊನಾ ಭಯದಿಂದ ಯಾರೋಬ್ಬರು ಈಕೆಯ ಸಹಾಯಕ್ಕೆ ಮುಂದೆ ಬರಲಿಲ್ಲ.
ನಂತರ, ಈ ವಿಷಯವನ್ನು ಪೊಲೀಸರಿಗೆ ಸ್ಥಳೀಯರು ಮುಟ್ಟಿಸಿದ್ದಾರೆ. ಕೂಡಲೇ ಪೊಲೀಸ್ ಇನ್ಸ್‌ಪೆಕ್ಟರ್ ರಾಜೇಶ್ವರಿ ಮತ್ತು ಸಹೋದ್ಯೋಗಿಗಳು ಸ್ಥಳಕ್ಕೆ ಧಾವಿಸಿ ಪಾಲಿಕೆ ಅಧಿಕಾರಿಗಳ ಜೊತೆ ಈಕೆಯ ಶವಸಂಸ್ಕಾರದ ಬಗ್ಗೆ ಸಮಾಲೋಚಿಸಿದ್ದಾರೆ. ಇದಾದ ನಂತರ ಇನ್ಸ್‌ಪೆಕ್ಟರ್ ರಾಜೇಶ್ವರಿ ಮತ್ತು ಅವರ ಸಹೋದ್ಯೋಗಿಗಳು ಪ್ರಭಾವತಿಯವರ ಶವಕ್ಕೆ ಅಂತಿಮ ವಿಧಿವಿದಾನ ನಡೆಸಿ ಮಾನವೀಯತೆ ಮೆರೆದಿದ್ದಾರೆ. ಈ ಘಟನೆಯಿಂದ ರಾಜೇಶ್ವರಿ ಅವರಿಗೆ ಸಾರ್ವಜನಿಕ ವಲಯದಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.