ETV Bharat / bharat

ಹೊಸ ವರ್ಷಕ್ಕೆ ಅಯೋಧ್ಯಾ ಶ್ರೀರಾಮನಿಗೆ 56 ತಿನಿಸುಗಳ ಅರ್ಪಣೆ - ಆಚಾರ್ಯ ಸತ್ಯೇಂದ್ರದಾಸ್ ಅವರಿಂದ ತಿನಿಸುಗಳ ಅರ್ಪಣೆ

ಹೊಸ ವರ್ಷದ ಮೊದಲ ದಿನದಂದು ಅಯೋಧ್ಯೆಯ ಶ್ರೀರಾಮನಿಗೆ ಚಪ್ಪನ್ ಭೋಗ್ ಎಂಬ 56 ತಿನಿಸುಗಳನ್ನು ಅರ್ಪಣೆ ಮಾಡಲಾಗಿದೆ.

Chappan bhog offered to Ram
ಚಪ್ಪನ್ ಭೋಗ್ ಅರ್ಪಣೆ
author img

By

Published : Jan 2, 2021, 4:56 AM IST

ಅಯೋಧ್ಯೆ(ಉತ್ತರ ಪ್ರದೇಶ) : ಹೊಸ ವರ್ಷದ ಮೊದಲ ದಿನದಂದು ಅಯೋಧ್ಯೆಯಲ್ಲಿ 'ಚಪ್ಪನ್ ಭೋಗ್' ಅಥವಾ 56 ವಿಧದ ಆಹಾರ ಪದಾರ್ಥಗಳನ್ನು ಭಗವಾನ್ ಶ್ರೀರಾಮನಿಗೆ ಅರ್ಪಣೆ ಮಾಡಲಾಯಿತು.

ಶ್ರೀರಾಮ ಜನ್ಮಭೂಮಿಯ ಪ್ರಧಾನ ಅರ್ಚಕರಾದ ಆಚಾರ್ಯ ಸತ್ಯೇಂದ್ರದಾಸ್ ಅವರು 'ಚಪ್ಪನ್ ಭೋಗ್' ಅನ್ನು ಶ್ರೀರಾಮನಿಗೆ ಅರ್ಪಿಸಿದ್ದು, ಇದಕ್ಕಾಗಿಯೇ ಶುಕ್ರವಾರ ಬೆಳಗ್ಗೆಯಿಂದ ರಾಮ್‌ಲಲ್ಲಾ ದರ್ಶನಕ್ಕಾಗಿ ಹೆಚ್ಚಿನ ಸಂಖ್ಯೆಯ ಭಕ್ತರು ಆಗಮಿಸಿದ್ದರು.

ಇದನ್ನೂ ಓದಿ: ಮುಂಬೈ: ಹೊಸ ವರ್ಷಕ್ಕೆ ಸಿದ್ದಿ ವಿನಾಯಕನ ಮೊರೆ ಹೋದ ಭಕ್ತ ಸಮೂಹ

ಶ್ರೀರಾಮನಿಗೆ ಅರ್ಪಿಸುವ 'ಚಪ್ಪನ್ ಭೋಗ್' ಪ್ರಸಾದವು ರಸಗುಲ್ಲಾ, ಗುಲ್ಗುಲಾ, ಮಾಲ್ಪುವಾ, ರಾಸ್ಮಲೈ ಮುಂತಾದ ಸಿಹಿ ತಿಂಡಿಗಳನ್ನು ಹೊಂದಿದ್ದು, ರಾಮನಿಗೆ ತಿಂಡಿಗಳನ್ನು ಅರ್ಪಿಸುವ ಪರಂಪರೆ ತುಂಬಾ ಹಳೆಯದಾಗಿದೆ.

ಹೊಸ ವರ್ಷದಂದು ಎಲ್ಲರೂ ದೇವಾಲಯಗಳಿಗೆ ತೆರಳಿದಂತೆ, ಅಯೋಧ್ಯೆಗೂ ಕೂಡಾ ಅಧಿಕ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ದೇವಾಲಯದಲ್ಲಿ ಪ್ರಾರ್ಥನೆ ಕೂಡಾ ಮಾಡಲಾಯಿತು. ಉತ್ತರ ಪ್ರದೇಶ ಮಾತ್ರವಲ್ಲದೇ ವಿವಿಧ ರಾಜ್ಯಗಳಿಂದಲೂ ಕೂಡಾ ಭಕ್ತರು ಅಯೋಧ್ಯೆಗೆ ಆಗಮಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.