ನವದೆಹಲಿ: ಇಡೀ ವಿಶ್ವದ ಗಮನ ಸೆಳೆದು ಚಂದ್ರನತ್ತ ಸಾಗಿರುವ ಭಾರತದ ಉಪಗ್ರಹ ಲ್ಯಾಂಡ್ ಆಗುವುದನ್ನು ಪ್ರಧಾನಿ ಮೋದಿ ಜತೆ ಕುಳಿತು ವೀಕ್ಷಿಸಲು ಜನರಿಗೆ ಸುವರ್ಣಾವಕಾಶವೊಂದು ಸಿಕ್ಕಿದೆ.
ಹೌದು, ಭಾರತದ ಚಂದ್ರಯಾನ 2 ಯಶಸ್ವಿ ಲ್ಯಾಂಡಿಂಗ್ಅನ್ನು ಪ್ರಧಾನಿ ನರೇಂದ್ರ ಮೋದಿ ಜತೆ ವೀಕ್ಷಿಸುವ ಅವಕಾಶವನ್ನು ಭಾರತ ಸರ್ಕಾರ ನೀಡಿದೆ. ಇದಕ್ಕಾಗಿ ಬಾಹ್ಯಾಕಾಶ ತಂತ್ರಜ್ಞಾನದ ಬಗ್ಗೆ ರಸಪ್ರಶ್ನೆ ಸ್ಪರ್ಧೆ ಆಯೋಜಿಸಿದೆ. ಈ ಸ್ಪರ್ಧೆಯಲ್ಲಿ ಗೆದ್ದವರಿಗೆ ಇಂತಹುದೊಂದು ಸುವರ್ಣಾವಕಾಶ ಸಿಗಲಿದೆ.
ಭಾರತದ ಎಲ್ಲ ನಾಗರಿಕರಿಗೂ ಈ ಅವಕಾಶವಿದ್ದು, mygov.in ಜಾಲತಾಣದಲ್ಲಿ ಆನ್ಲೈನ್ ಮೂಲಕ ಸ್ಪರ್ಧೆಯಲ್ಲಿ ಭಾಗವಹಿಸಬೇಕಿದೆ. 300 ಸೆಕೆಂಡ್ಗಳಲ್ಲಿ 20 ಪ್ರಶ್ನೆಗಳಿಗೆ ಉತ್ತರಿಸಬೇಕಿದೆ. ಇನ್ನು, ಆಗಸ್ಟ್ 10ರಿಂದ ಸ್ಪರ್ಧೆ ಆರಂಭಗೊಳ್ಳಲಿದ್ದು, 10 ದಿನಗಳ ಕಾಲ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ.
ಸೆಪ್ಟೆಂಬರ್ 6 ಹಾಗೂ 7ರ ಮಧ್ಯರಾತ್ರಿ ಭಾರತದ ಇಸ್ರೋ ರವಾನಿಸಿದ ಚಂದ್ರಯಾನ 2 ಗಗನನೌಕೆ ಬಾಹುಬಲಿಯು ಚಂದ್ರನ ಮೇಲೆ ಲ್ಯಾಂಡ್ ಆಗಲಿದೆ.