ಅಮರಾವತಿ: ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ತೆಲುಗು ದೇಶಂ ಪಕ್ಷದ (ಟಿಡಿಪಿ) ಅಧ್ಯಕ್ಷ ಎನ್. ಚಂದ್ರಬಾಬು ನಾಯ್ಡು ಅವರು ಇಂದು 71ನೇ ವರ್ಷಕ್ಕೆ ಪದಾರ್ಪಣೆ ಮಾಡಿದ್ದಾರೆ.
ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ, ಕೇಂದ್ರ ಸಚಿವ ನಿತಿನ್ ಗಡ್ಕರಿ, ಸೂಪರ್ ಸ್ಟಾರ್ ಚಿರಂಜೀವಿ, ಟಿಡಿಪಿ ಪಕ್ಷದ ಮುಖಂಡರು, ರಾಜಕೀಯ ನಾಯಕರು, ಉದ್ಯಮಿಗಳು, ಅಭಿಮಾನಿಗಳು ಸೇರಿದಂತೆ ಲಕ್ಷಾಂತರ ಕಾರ್ಯಕರ್ತರು ನಾಯ್ಡು ಅವರಿಗೆ ಜನ್ಮ ದಿನದ ಶುಭಾಶಯ ಕೋರಿದ್ದಾರೆ.
ಚಂದ್ರಬಾಬು ನಾಯ್ಡು ಅವರಿಗೆ ಜನ್ಮ ದಿನದ ಶುಭಾಶಯಗಳು. ಸಂತೋಷ ಮತ್ತು ಆರೋಗ್ಯವಂತರಾಗಿ ಇರಿ ಎಂದು ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ಟ್ವೀಟ್ ಮಾಡಿದ್ದಾರೆ.
-
Best wishes to @ncbn garu on his birthday. May he be blessed with happiness and good health.
— YS Jagan Mohan Reddy (@ysjagan) April 20, 2020 " class="align-text-top noRightClick twitterSection" data="
">Best wishes to @ncbn garu on his birthday. May he be blessed with happiness and good health.
— YS Jagan Mohan Reddy (@ysjagan) April 20, 2020Best wishes to @ncbn garu on his birthday. May he be blessed with happiness and good health.
— YS Jagan Mohan Reddy (@ysjagan) April 20, 2020
ಅಖಂಡ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಸುಮಾರು ಒಂದು ದಶಕ (1995-2004) ಮತ್ತು ಹೊಸ ಆಂಧ್ರಪ್ರದೇಶದ ಮೊದಲ ಮುಖ್ಯಮಂತ್ರಿಯಾಗಿಯೂ (2014-2019) ಸೇವೆ ಸಲ್ಲಿಸಿದ್ದ ನಾಯ್ಡು, ಲಾಕ್ಡೌನ್ ಪ್ರಯುಕ್ತ ತಮ್ಮ ಜನ್ಮ ದಿನವನ್ನ ಹೈದರಾಬಾದ್ ನಿವಾಸದಲ್ಲಿ ಸರಳವಾಗಿ ಆಚರಿಸಿಕೊಂಡರು.
ನಾಯ್ಡು ಅವರಿಗೆ ದೇವರು ಉತ್ತಮ ಆರೋಗ್ಯ ಕರುಣಿಸಲಿ. ನಿಮ್ಮ ಆಲೋಚನಾ ಸಾಮರ್ಥ್ಯ, ಕಠಿಣ ಪರಿಶ್ರಮ, ಕಾರ್ಯ ನಿಷ್ಠೆ ಹೆಸರುವಾಸಿ ಎಂದು ಮೆಗಾಸ್ಟಾರ್ ಮತ್ತು ಕೇಂದ್ರದ ಮಾಜಿ ಸಚಿವ ಚಿರಂಜೀವಿ ಶುಭ ಹಾರೈಸಿದ್ದಾರೆ.
"ನಿಮ್ಮ ದೃಷ್ಟಿ, ನಿಮ್ಮ ಕಠಿಣ ಪರಿಶ್ರಮ ಮತ್ತು ನಿಮ್ಮ ಸಮರ್ಪಣೆ ಅನುಕರಣೀಯವಾಗಿದೆ" ಎಂದು ಹೇಳಿದರು.
"ಒಂದು ಸಣ್ಣ ಹಳ್ಳಿಯಿಂದ ಬಂದ ನಾಯ್ಡು ಅವರು, ಪ್ರಾದೇಶಿಕ ಪಕ್ಷವನ್ನು ಮುನ್ನೇಡಿಸಿ ಪ್ರಬಲ ಪಕ್ಷವಾಗಿ ಬೆಳೆಸಿದ್ದಾರೆ. ಆಂಧ್ರ ಮತ್ತು ತೆಲಂಗಾಣ ಜನರನ್ನು ಸಮೃದ್ಧರನ್ನಾಗಿ ಮಾಡಿದ್ದಾರೆ. ಅವರು 70 ವರ್ಷ ಪೂರೈಸಿದ್ದರೂ ಇನ್ನೂ ಯುವಕರಂತೆ ಇದ್ದಾರೆ. ಇಂದಿನ ಯುವ ಪೀಳಿಗೆಗೆ ಅವರು ಮಾದರಿ ಎಂದು ಟಿಡಿಪಿ ಸಂಸದ ರಾಮ್ ಮೊಹನ್ ನಾಯ್ಡು ಪ್ರಶಂಸಿಸಿದ್ದಾರೆ.