ಚಂಡೀಗಢ: ದೇಶವ್ಯಾಪಿ ಹರಡುತ್ತಿರುವ ಕೊರೊನಾ ವೈರಸ್ (ಕೊವಿಡ್-19) ಹಾವಳಿಗೆ ಕೊಕ್ಕೆ ಹಾಕಲು ಸರ್ಕಾರ ರಾಷ್ಟ್ರವ್ಯಾಪಿ ಬಂದ್(ಲಾಕ್ ಡೌನ್) ಆದೇಶ ಹೊರಡಿಸಿದೆ. ಇದರ ಮೂಲ ಉದ್ದೇಶ ಜನರು ಸಾಮಾಜಿಕ ಅಂತರ ಕಾಪಡಿಕೊಳ್ಳುವುದಾಗಿದೆ. ಜನರೂ ಕೂಡಾ ಇದಕ್ಕೆ ಉತ್ತಮ ರೀತಿಯಲ್ಲಿ ಬೆಂಬಲ ಸೂಚಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಚಂಡೀಗಢದಲ್ಲಿ ಜನರು ತಾವು ವಿಭಿನ್ನ ಎಂದು ತೋರಿಸಿ ಮಾದರಿಯಾಗಿದ್ದಾರೆ.
-
I just received these photographs. Wonderful discipline by the Punjabis. Stay at home and keep yourself safe. Administration & Police are working to ensure you all have access to essentials. #COVID2019 pic.twitter.com/x4mtUV0KSr
— Capt.Amarinder Singh (@capt_amarinder) March 25, 2020 " class="align-text-top noRightClick twitterSection" data="
">I just received these photographs. Wonderful discipline by the Punjabis. Stay at home and keep yourself safe. Administration & Police are working to ensure you all have access to essentials. #COVID2019 pic.twitter.com/x4mtUV0KSr
— Capt.Amarinder Singh (@capt_amarinder) March 25, 2020I just received these photographs. Wonderful discipline by the Punjabis. Stay at home and keep yourself safe. Administration & Police are working to ensure you all have access to essentials. #COVID2019 pic.twitter.com/x4mtUV0KSr
— Capt.Amarinder Singh (@capt_amarinder) March 25, 2020
ಪಂಜಾಬ್ ಮುಖ್ಯಮಂತ್ರಿ ಕ್ಯಾ.ಅಮರಿಂದರ್ ಸಿಂಗ್ ಬುಧವಾರ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಕೆಲವು ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಈ ಫೊಟೋಗಳಲ್ಲಿ ಜನರು ಒಂದು ಮೀಟರ್ ದೂರದ ಅಂತರದಲ್ಲಿ ನೆಲದ ಮೇಲೆ ಸುಣ್ಣದಿಂದ ಬಾಕ್ಸ್ಗಳನ್ನು ಹಾಕಿಕೊಂಡು ಪ್ರತ್ಯೇಕವಾಗಿ ಅಂಗಡಿ ಮುಂದೆ ನಿಂತಿರುವುದು ಕಾಣುತ್ತಿದೆ. ಮೂಲಕ ತಾಳ್ಮೆಯಿಂದ ಅಗತ್ಯ ಸಾಮಾಗ್ರಿಗಳನ್ನು ಖರೀದಿಸುತ್ತಿದ್ದಾರೆ.
ನಾನು ಈ ಛಾಯಾಚಿತ್ರಗಳನ್ನು ಸ್ವೀಕರಿಸಿದ್ದೇನೆ. ಪಂಜಾಬಿಗಳಿಂದ ಅದ್ಭುತವಾದ ಶಿಸ್ತು ಕಂಡುಬಂದಿದೆ. ನೀವು ಮನೆಯಲ್ಲಿಯೇ ಇರಿ ಮತ್ತು ನಿಮ್ಮನ್ನು ಸುರಕ್ಷಿತವಾಗಿರಿಸಿಕೊಳ್ಳಿ. ನೀವೆಲ್ಲರೂ ಅಗತ್ಯ ವಸ್ತುಗಳನ್ನು ಪೂರೈಸಲು ಸರ್ಕಾರ ಮತ್ತು ಪೊಲೀಸರು ಕೆಲಸ ಮಾಡುತ್ತಿದ್ದಾರೆ ಎಂದು ಅವರು ಟ್ವೀಟ್ ಮಾಡಿದ್ದಾರೆ.