ನವದೆಹಲಿ: ಇಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನೂತವ ವರ್ಷದ ಕೇಂದ್ರ ಬಜೆಟ್ 2021-2022 ಮಂಡನೆ ಮಾಡುತ್ತಿದ್ದು, ಈ ಬಾರಿ ಜಲ್ ಜೀವನ್ ಮಿಷನ್ ಅರ್ಬನ್ ಯೋಜನೆಯನ್ನು ಘೋಷಿಸಿದರು.
ಈ ಬಾರಿಯ ಬಜೆಟ್ನಲ್ಲಿ ಜಲ್ ಜೀವನ್ ಮಿಷನ್ ಅರ್ಬನ್ ಅನ್ನು ಪ್ರಾರಂಭಿಸಲು ಸುಮಾರು 2.87 ಲಕ್ಷ ಕೋಟಿ ಹಣವನ್ನು ಮಿಸಲಿಡುವ ಭರವಸೆ ನೀಡಿದರು. ಸುಮಾರು 5 ವರ್ಷಗಳಲ್ಲಿ ಎಲ್ಲಾ 4,378 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸಾರ್ವತ್ರಿಕವಾಗಿ ನೀರು ಸರಬರಾಜು ಮಾಡುವ ಗುರಿಯನ್ನು ಹೊಂದಲಾಗಿದೆ ಎಂದರು.
ಅಮೃತ್ ಯೋಜನೆಯಡಿ ಬರುವ ಸುಮಾರು 500 ನಗರಗಳ 2.86 ಕೋಟಿ ಮನೆಗಳಿಗೆ ಟ್ಯಾಪ್ ಸಂಪರ್ಕ ಮತ್ತು ದ್ರವ ತ್ಯಾಜ್ಯ ನಿರ್ವಹಣೆ ಮಾಡಲಾಗುವುದು ಎಂದು ತಮ್ಮ ಬಜೆಟ್ ಭಾಷಣದಲ್ಲಿ ತಿಳಿಸಿದರು.