ಬಾಗಪತ್ (ಉತ್ತರ ಪ್ರದೇಶ): ಇತ್ತೀಚೆಗೆ ಕೆಲ ರೌಡಿಗಳು ಲಾಂಗ್ಗಳಿಂದ ಕೇಕ್ ಕತ್ತರಿಸಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿರುವುದನ್ನ ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ತನ್ನ ಬರ್ತ್ ಡೇ ಕೇಕ್ ಗೆ ನೇರವಾಗಿ ಶೂಟ್ ಮಾಡಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾನೆ.
ಉತ್ತರ ಪ್ರದೇಶದ ಬಾಗಪತ್ ಜಿಲ್ಲೆಯ ಸರೂರ್ಪುರ್ ಗ್ರಾಮದಲ್ಲಿ ಘಟನೆ ನಡೆದಿದ್ದು, ಈ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಬೆಳಕಿಗೆ ಬಂದಿದೆ.
-
लाइव बर्थडे।। बागपत में फायरिंग कर काट केक@bptpolice @igrangemeerut @Uppolice pic.twitter.com/j9QGVmXW62
— Shadab Rizvi (@ShadabNBT) July 31, 2019 " class="align-text-top noRightClick twitterSection" data="
">लाइव बर्थडे।। बागपत में फायरिंग कर काट केक@bptpolice @igrangemeerut @Uppolice pic.twitter.com/j9QGVmXW62
— Shadab Rizvi (@ShadabNBT) July 31, 2019लाइव बर्थडे।। बागपत में फायरिंग कर काट केक@bptpolice @igrangemeerut @Uppolice pic.twitter.com/j9QGVmXW62
— Shadab Rizvi (@ShadabNBT) July 31, 2019
ಇನ್ನು ಈ ವಿಡಿಯೋದಲ್ಲಿ ಯುವಕನೊಬ್ಬ ನೆಲದ ಮೇಲೆ ಕೇಕ್ ಇಡುತ್ತಾನೆ. ಬಳಿಕ ಬರ್ತ್ ಡೇ ಬಾಯ್ ಕೇಕ್ಗೆ ಗುಂಡಿಕ್ಕುವುದನ್ನು, ನಂತರ ಆತನ ಸ್ನೇಹಿತರು ಕೂಗಾಡುತ್ತಾ ಸಂಭ್ರಮಿಸುವುದನ್ನು ನೋಡಬಹುದಾಗಿದೆ.
ಇನ್ನು ಘಟನೆ ಸಂಬಂಧ ಮಾಹಿತಿ ಪಡೆದುಕೊಂಡ ಬಾಗಪತ್ ವೃತ್ತ ಅಧಿಕಾರಿ ಒಪಿ ಸಿಂಗ್ ಈ ಬಗ್ಗೆ ತನಿಖೆ ಆರಂಭಿಸಲಾಗುವುದು ಎಂದು ತಿಳಿಸಿದ್ದಾರೆ.