ನವದೆಹಲಿ: ಬಿಹಾರದಲ್ಲಿ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ಚುನಾವಣೆಯಲ್ಲಿ ಗೆಲ್ಲಲು ಕಾಂಗ್ರೆಸ್ ನಾನಾ ಕಸರತ್ತುಗಳನ್ನು ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ತಮ್ಮ ನಿವಾಸದಲ್ಲಿ ಪಕ್ಷದ ಸಿಇಸಿ ಸಭೆ ಕರೆದು ಚರ್ಚೆ ನಡೆಸಿದ್ದಾರೆ.
ಮೊದಲ ಹಂತದ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ವಿಚಾರವಾಗಿ ಚರ್ಚೆ ನಡೆದಿದ್ದು, ಮುಂದಿನ ದಿನಗಳಲ್ಲಿ ಎರಡು ಹಾಗೂ ಮೂರನೇ ಹಂತದ ಚುನಾವಣೆಗಳ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಇದಕ್ಕೂ ಮೊದಲು ಸಿಇಸಿ ಸಭೆ ಅಕ್ಟೋಬರ್ 5ರಂದು ನಡೆದಿದ್ದು, ಇದಾದ ನಂತರ ಅಕ್ಟೋಬರ್ 7ರಂದು 21 ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿತ್ತು. ಇದು ಪಕ್ಷದೊಳಗೆ ಸ್ವಲ್ಪ ಮಟ್ಟದ ಅಸಮಾಧಾನ ಕೂಡಾ ವ್ಯಕ್ತವಾಗಿತ್ತು.
ಹೈಕಮಾಂಡ್ ನಿರ್ಣಯವನ್ನು ವಿರೋಧಿಸಿದ್ದವರಿಗೆ, ಅಭ್ಯರ್ಥಿಯ ಆಯ್ಕೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿದ್ದವರಿಗೆ ಎಚ್ಚರಿಕೆಯನ್ನು ನೀಡಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಬಿಹಾರದಲ್ಲಿ ಆರ್ಜೆಡಿಯೊಂದಿಗೆ ಒಪ್ಪಂದ ಮಾಡಿಕೊಂಡಿರುವುದೂ ಕೂಡಾ ಮತ್ತೊಂದು ಸಮಸ್ಯೆಯಾಗಿದ್ದು, ಆ ಪಕ್ಷದೊಂದಿಗೆ ಕ್ಷೇತ್ರಗಳ ಹಂಚಿಕೆ ಕೂಡಾ ಇನ್ನು ನಿರ್ಣಯವಾಗದೇ ಇರುವುದು ಅಭ್ಯರ್ಥಿಗಳಿಗೆ ಟಿಕೆಟ್ ನೀಡುವುದರ ಮೇಲೆ ಪರಿಣಾಮ ಬೀರಿದೆ.
ಈಗ ಸುಮಾರು 49 ಕ್ಷೇತ್ರಗಳ ಟಿಕೆಟ್ ಹಂಚಿಕೆ ಬಗ್ಗೆ ಸಿಇಸಿ ಸಭೆಯಲ್ಲಿ ಚರ್ಚೆ ನಡೆಲಾಗಿದ್ದು, ಇನ್ನೂ ಕೆಲವೇ ದಿನಗಳಲ್ಲಿ ಪಟ್ಟಿ ಬಹಿರಂಗವಾಗಲಿದೆ.