ನವದೆಹಲಿ: ಬ್ಯಾಂಕ್ ವಂಚನೆಗೆ ಸಂಬಂಧಿಸಿದಂತೆ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಸಿಬಿಐ ಬುಧವಾರ ಅನೇಕ ಸ್ಥಳಗಳಲ್ಲಿ ಶೋಧ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2013-15ರ ಅವಧಿಯಲ್ಲಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾಗೆ 42.30 ಕೋಟಿ ರೂಪಾಯಿ ವಂಚನೆ ಮಾಡಿದ ಆರೋಪದ ಮೇಲೆ ಸೂರತ್ ಮಾಂಡ್ವಿ ವಿಭಾಗ್ ಸಹಕಾರಿ ಕೃಷಿ ಉದ್ಯೋಗ್ ಮಾಂಡ್ಲಿ ಲಿಮಿಟೆಡ್ ಸಹಕಾರಿ ಸಂಘ ಮತ್ತು ಅದರ ಅಂದಿನ 17 ಪದಾಧಿಕಾರಿಗಳು/ನಿರ್ದೇಶಕರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ.
ಸೂರತ್ ನ ಮ್ಯಾಂಗ್ರೋಲ್ ತಾಲೂಕಿನ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಪಾಲೋಡ್ ಶಾಖೆಯು 'ಸೂರತ್ ಮಾಂಡ್ವಿ ವಿಭಾಗ್ ಸಹಕಾರಿ ಕೃಷಿ ಉದ್ಯೋಗ್ ಮಾಂಡ್ಲಿ ಲಿಮಿಟೆಡ್ ಸಹಕಾರಿ ಸಂಘ' ದ 1728 ರೈತ ಸದಸ್ಯರ ಹೆಸರಿನಲ್ಲಿ ಯೂನಿಯನ್ ಗ್ರೀನ್ ಕಾರ್ಡ್ ಯೋಜನೆಯಡಿ 40 ಕೋಟಿ ರೂಪಾಯಿಗಳ ಸಾಲವನ್ನು ಮಂಜೂರು ಮಾಡಿದೆ ಎಂದು ಹೇಳಲಾಗ್ತಿದೆ. ಆದರೆ, ಹೀಗೆ ಸಾಲ ಮಾಡಿದ ಸಂಘವು ಮೊತ್ತವನ್ನು ವಿತರಿಸಿಲ್ಲ ಎಂದು ಸಿಬಿಐ ವಕ್ತಾರರು ತಿಳಿಸಿದ್ದಾರೆ.
ಸಿಬಿಐ ತಂಡವು ಸೂರತ್, ಹೈದರಾಬಾದ್, ಏಲೂರು, ರಾಜಮ್ ಮತ್ತು ಬೆಂಗಳೂರು ಸೇರಿದಂತೆ ಐದು ಸ್ಥಳಗಳಲ್ಲಿರುವ ಆರೋಪಿಗಳ ಕಚೇರಿಗಳು ಮತ್ತು ನಿವಾಸಗಳಲ್ಲಿ ಶೋಧ ನಡೆಸಿದೆ.