ನವದೆಹಲಿ: ಸಿಬಿಐನ ಮಾಜಿ ವಿಶೇಷ ನಿರ್ದೇಶಕ ರಾಕೇಶ್ ಆಸ್ತಾನ ಅವರ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಸಿಬಿಐ ಡಿಐಜಿ ತರುಣ್ ಗೌಬಾ ಅವರನ್ನು ಅವರ ಮೂಲ ಸ್ಟೇಟ್ ಕೇಡರ್ಗೆ ವಾಪಸ್ ಕಳುಹಿಸಿ ಕ್ಯಾಬಿನೆಟ್ (ಎಸಿಸಿ) ನೇಮಕಾತಿ ಸಮಿತಿಯು ಆದೇಶ ನೀಡಿದೆ.
2019 ರ ಅಕ್ಟೋಬರ್ನಲ್ಲಿ ಗೌಬಾ ಅವರ ಸೇವಾವಧಿ ಕೊನೆಗೊಳ್ಳಲಿದ್ದು, ಆಗಸ್ಟ್ನಲ್ಲಿ ಅಮೆರಿಕದಲ್ಲಿ ಪ್ರಾರಂಭವಾಗುವ ಪ್ರತಿಷ್ಠಿತ ಫುಲ್ಬ್ರೈಟ್ ವಿದ್ಯಾರ್ಥಿ ವೇತನಕ್ಕೆ ಅವರನ್ನು ಆಯ್ಕೆ ಮಾಡಲಾಗಿದೆ. ಹೀಗಾಗಿ ತರುಣ್ ಗೌಬಾ ಅವರು ಅಧಿಕಾರಾವಧಿಯ ನಂತರ ಸಿಬಿಐನಲ್ಲಿ ಉಳಿಯಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಅವರನ್ನ ಈಗಲೇ ಮಾತೃ ಸ್ಟೇಟ್ ಕೇಡರ್ ಗೆ ವಾಪಸ್ ಕಳುಹಿಸಿ ಆದೇಶ ಹೊರಡಿಸಿದೆ.
ಅವರ ಕೋರಿಕೆಯ ಮೇರೆಗೆ, ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವಾಲಯ ಇದೇ ವೇಳೆ ಸ್ಪಷ್ಟನೆ ನೀಡಿದೆ. ಅಲ್ಲಿಂದಲೇ ಅವರು ತಮ್ಮ ವಿದ್ಯಾರ್ಥಿ ವೇತನವನ್ನು ಪಡೆಯಬಹುದು ಎಂದು, ಸಿಬಿಐನ ಮುಖ್ಯ ಮಾಹಿತಿ ಅಧಿಕಾರಿ ನಿತಿನ್ ವಾಕಂಕರ್ ತಿಳಿಸಿದರು.