ETV Bharat / bharat

ಉಗ್ರರಿಂದ ಕಾಂಗ್ರೆಸ್​ ಸರಪಂಚ್ ಕೊಲೆ: ಬಿಜೆವೈಎಂನಿಂದ ಮೊಂಬತ್ತಿ ಹಚ್ಚಿ ಜಾಥಾ

ಕಾಂಗ್ರೆಸ್ ಸರಪಂಚ್​ನನ್ನು ಭಯೋತ್ಪಾದಕರು ಕೊಂದಿದ್ದು, ಭಾರತೀಯ ಜನತಾ ಯುವ ಮೋರ್ಚಾದ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Candlelight maarfc
ಮೊಂಬತ್ತಿ ಹಚ್ಚಿ ಜಾಥಾ
author img

By

Published : Jun 10, 2020, 10:38 AM IST

ಶ್ರೀನಗರ (ಜಮ್ಮು ಕಾಶ್ಮೀರ): ಕಾಂಗ್ರೆಸ್​ ಸರಪಂಚ್​ನನ್ನು ಭಯೋತ್ಪಾದಕರು ಕೊಂದ ಹಿನ್ನೆಲೆಯಲ್ಲಿ ಮೊಂಬತ್ತಿ ಹಚ್ಚಿ ಭಾರತೀಯ ಜನತಾ ಯುವ ಮೋರ್ಚಾದ ಕಾರ್ಯಕರ್ತರು ಜಾಥಾ ನಡೆಸಿದ ಘಟನೆ ಜಮ್ಮು ಕಾಶ್ಮೀರದ ಅನಂತ್​ನಾಗ್​ ಜಿಲ್ಲೆಯಲ್ಲಿ ನಡೆದಿದೆ.

ಜೂನ್​ 8ರಂದು ಅಜಯ್​ ಪಂಡಿತ ಎಂಬ ಸರಪಂಚ್​ನನ್ನು ಭಯೋತ್ಪಾದಕರು ಹತ್ಯೆ ಮಾಡಿದ್ದರು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ ಪ್ರತಿಕೃತಿಯನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಾಕ್​ ಭಯೋತ್ಪಾದಕರು ಸರಪಂಚ್​​ನನ್ನು ಕೊಂದಿದ್ದು, ನಾವು ಪಾಕ್​​ ಪ್ರಧಾನಿ ಹಾಗೂ ಭಯೋತ್ಪಾದಕರ ವಿರುದ್ಧ ಪ್ರತಿಭಟನೆಯನ್ನು ಮುಂದುವರೆಸುತ್ತೇವೆ ಎಂದು ಭಾರತೀಯ ಜನತಾ ಯುವ ಮೋರ್ಚಾ ಅಧ್ಯಕ್ಷ ಅರುಣ್​ ದೇವ್​ ಸಿಂಗ್​ ಕಿಡಿಕಾರಿದ್ದಾರೆ.

ಭಾನುವಾರ ಅಪರಿಚಿತ ಭಯೋತ್ಪಾದಕರು ಅನಂತ್​ನಾಗ್​ ಜಿಲ್ಲೆಯ ಲೋಕ್​ಭವನ್​ ಬಳಿ ಗುಂಡಿನ ದಾಳಿ ನಡೆಸಿದ್ದರು. ಈ ವೇಳೆ ಗಾಯಗೊಂಡಿದ್ದ ಸರಪಂಚ್​ ಅಜಯ್​ ಪಂಡಿತ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದು, ಭಾರತೀಯ ಜನತಾ ಯುವ ಮೋರ್ಚಾದಿಂದ ಪ್ರತಿಭಟನೆಗಳು ನಡೆಯುತ್ತಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.