ಪ್ರಭಾಸ್ ಪಟಾನ್ (ಗುಜರಾತ್) : ಭಾರತದ ಪ್ರಮುಖ ಪವಿತ್ರ ದೇವಾಲಯಗಳಲ್ಲಿ ಒಂದಾದ ಸೋಮನಾಥ ದೇವಾಲಯದಲ್ಲಿ ಇನ್ಮುಂದೆ ಪ್ರಾಚೀನ ಸ್ಮಾರಕ ವಸ್ತುಸಂಗ್ರಹಾಲಯವನ್ನು ಪ್ರವಾಸಿಗರು ನೋಡಬಹುದಾಗಿದೆ.
ಹೌದು, ಭಾರತದ ಗುಜರಾತ್‌ನ ಪಶ್ಚಿಮ ಕರಾವಳಿಯಲ್ಲಿ ಸೌರಾಷ್ಟ್ರದ ವೆರಾವಲ್ ಬಳಿಯ ಪ್ರಭಾಸ್ ಪಟಾನ್‌ನಲ್ಲಿರುವ ಸೋಮನಾಥ ದೇವಾಲಯದಲ್ಲಿ ಶತಮಾನಗಳಷ್ಟು ಹಳೆಯ ಪೌರಾಣಿಕ ಇತಿಹಾಸದೊಂದಿಗೆ ಸಂಬಂಧಿಸಿದ ಪ್ರಾಚೀನ ಸ್ಮಾರಕ ವಸ್ತು ಸಂಗ್ರಹಾಲಯವನ್ನು ಸೋಮನಾಥ ಟ್ರಸ್ಟ್ ಪ್ರಾರಂಭಿಸಲಿದೆ.
ಮಾಹಿತಿಯ ಪ್ರಕಾರ, 800 ರಿಂದ 1100 ವರ್ಷಗಳಷ್ಟು ಹಳೆಯದಾದ ಅವಶೇಷಗಳನ್ನು ಇಲ್ಲಿ ಇಡಲಾಗುವ ಕಾರಣದಿಂದಾಗಿ, ಸೋಮನಾಥನ ಅದ್ಭುತ ಇತಿಹಾಸವನ್ನು ಭೇಟಿ ನೀಡುವ ಪ್ರವಾಸಿಗರು ಸವಿಯಬಹುದಾಗಿದೆ. ಸೋಮನಾಥ ದೇವಾಲಯದ ಬಗ್ಗೆ ಹಲವಾರು ನಂಬಿಕೆಗಳಿವೆ. ಈ ಹಿಂದೆ ಸೋಮನಾಥ ದೇವಾಲಯದ ಮೇಲೆ ಘಜ್ನಿ ಮೊಹಮ್ಮದ್ ಹಾಗೂ ಘಜ್ನಿ ಮೊಹಮ್ಮದ್ ಹಲವು ಬಾರಿ ದಾಳಿ ಮಾಡಿ ಲೂಟಿ ಮಾಡಿದ್ದರು ಎಂಬ ಇತಿಹಾಸವಿದೆ.
ಕೇಂದ್ರ ಸರ್ಕಾರದ ಪ್ರಸಾದ್ ಯೋಜನೆಯಡಿ 15 ಕೋಟಿ ರೂ.ಗಳೊಂದಿಗೆ ಪ್ರಾಚೀನ ದೇಗುಲದ ಹಳೆಯ ವಸ್ತುಗಳಿಗಾಗಿ ವಸ್ತು ಸಂಗ್ರಾಹಲಯ ನಿರ್ಮಿಸಲಾಗುತ್ತಿದೆ. ಈ ಮೂಲಕ ದೇವಾಲಯದಲ್ಲಿ ಪರಶಿವನ ದರ್ಶನದೊಂದಿಗೆ ಹಳೆಯ ಪೌರಾಣಿಕ ಇತಿಹಾಸವನ್ನು ತಿಳಿಯುವ ಭಾಗ್ಯ ಭಕ್ತನದ್ದಾಗಿದೆ.