ETV Bharat / bharat

ವಿಮಾನಕ್ಕೆ ಬಾಂಬ್​ ಬೆದರಿಕೆ.. ಎಫ್​-16 ವಿಮಾನಗಳ ಬೆಂಗಾವಲು

263 ಪ್ರಯಾಣಿಕರು ಎಸ್​ಕ್ಯೂ - 423 ವಿಮಾನದಲ್ಲಿ ಪ್ರಯಾಣಿಸುತ್ತಿದರು. ಈ ವೇಳೆಗೆ ಕರೆ ಮಾಡಿದ್ದ ವ್ಯಕ್ತಿಯೊಬ್ಬ ವಿಮಾನದಲ್ಲಿ ಬಾಂಬ್ ಇದೆ ಎಂದು ಹೇಳಿದ. ತಕ್ಷಣವೇ ಜಾಗೃತರಾದ ಸಿಂಗಾಪುರದ ವಾಯುಪಡೆ ಅಧಿಕಾರಿಗಳು ಎರಡು ಎಫ್​- 16 ವಿಮಾನಗಳನ್ನು ಬೆಂಗಾವಲಿಗೆ ಕಳುಹಿಸಿದರು.

ಸಿಂಗಾಪುರ ಏರ್​ಲೈನ್ಸ್​
author img

By

Published : Mar 27, 2019, 1:10 PM IST

ಮುಂಬೈ: ಮುಂಬೈನಿಂದ ಸಿಂಗಾಪುರ​ಕ್ಕೆ ಹೊರಟಿದ್ದ ಸಿಂಗಾಪುರ್​ ಏರ್​ಲೈನ್ಸ್​ ಸಂಸ್ಥೆಗೆ ಸೇರಿದ್ದ ವಿಮಾನದಲ್ಲಿ ಮೊನ್ನೆ ಬಾಂಬ್​ ಇರಿಸಲಾಗಿದೆ ಎಂಬ ಬೆದರಿಕೆ ಕರೆ ಬಂದಿತ್ತು. ಈ ಸುದ್ದಿ ನಿಮಗೆಲ್ಲ ಗೊತ್ತೇ ಇದೆ. ವಿಶೇಷ ಎಂದರೆ, ಸಿಂಗಾಪುರ ಸರ್ಕಾರ ಎಫ್​- 16 ವಿಮಾನಗಳನ್ನು ಬೆಂಗಾವಲಿನಲ್ಲಿ ಸಿಂಗಾಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಸಲಾಗಿತ್ತು.

ವಿಮಾನವನ್ನು ಸಿಂಗಾಪುರದ ಚಾಂಗಿ ನಿಲ್ದಾಣದಲ್ಲಿ ಭೂಸ್ಪರ್ಶ ಮಾಡಿಸಿದ ತಕ್ಷಣವೇ ಸಿಬ್ಬಂದಿ ವಿಮಾನವನ್ನು ವಶಕ್ಕೆ ಪಡೆದು ತೀವ್ರ ತಪಾಸಣೆ ನಡೆಸಿದ್ದರು. ಈ ವೇಳೆ ಯಾವುದೇ ಸ್ಫೋಟಕ ಸಾಮಗ್ರಿಗಳು ದೊರೆತಿಲ್ಲ. ಇದೊಂದು ಹುಸಿ ಬಾಂಬ್ ಕರೆ ಎಂದು ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.

ವಿಮಾನದಲ್ಲಿ ಒಟ್ಟು 263 ಪ್ರಯಾಣಿಕರು ಪಯಾಣಿಸುತ್ತಿದ್ದರು. ಇದನ್ನು ಗಂಭೀರವಾಗಿ ತೆಗೆದುಕೊಂಡ ವಿಮಾನಯಾನ ಸಂಸ್ಥೆಯು, ಹುಸಿ ಕರೆ ಮಾಡಿದವರ ವಿರುದ್ಧ ದೂರು ನೀಡಲಾಗಿದೆ. ಆರೋಪಿಗಳ ಪತ್ತೆಗೆ ತೀವ್ರ ಶೋಧ ನಡೆಸಲಾಗುತ್ತಿದೆ. ಹೆಚ್ಚಿನ ಮಾಹಿತಿ ಬರಬೇಕಿದೆ ಎಂದು ಸಿಂಗಾಪುರ್ ಏರ್​ಲೈನ್ಸ್ ವಕ್ತಾರ ತಿಳಿಸಿದ್ದಾರೆ.

Intro:Body:

ವಿಮಾನಕ್ಕೆ ಬಾಂಬ್​ ಬೆದರಿಕೆ... ಎಫ್​-6 ವಿಮಾನಗಳ ಬೆಂಗಾವಲು

ಮುಂಬೈ: ಮುಂಬೈನಿಂದ ಸಿಂಗಾಪುರ​ಕ್ಕೆ ಹೊರಟಿದ್ದ ಸಿಂಗಾಪುರ್​ ಏರ್​ಲೈನ್ಸ್​ ಸಂಸ್ಥೆಗೆ ಸೇರಿದ್ದ ವಿಮಾನದಲ್ಲಿ ಬಾಂಬ್​ ಇರಿಸಲಾಗಿದೆ ಎಂಬ ಬೆದರಿಕೆ ಕರೆ ಬಂದ ಹಿನ್ನಲೆಯಲ್ಲಿ ಎರಡು ಎಫ್​- 16 ವಿಮಾನಗಳು ಬೆಂಗಾವಲಿನಲ್ಲಿ ಸಿಂಗಾಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಸಲಾಯಿತು.

263 ಪ್ರಯಾಣಿಕರು ಎಸ್​ಕ್ಯೂ- 423 ವಿಮಾನದಲ್ಲಿ ಪ್ರಯಾಣಿಸುತ್ತಿದರು. ಈ ವೇಳೆಗೆ ಕರೆ ಮಾಡಿದ್ದ ವ್ಯಕ್ತಿಯೊಬ್ಬ ವಿಮಾನದಲ್ಲಿ ಬಾಂಬ್ ಇದೆ ಎಂದು ಹೇಳಿದ. ತಕ್ಷಣವೇ ಜಾಗೃತರಾದ ಸಿಂಗಪುರದ ವಾಯುಪಡೆ ಅಧಿಕಾರಿಗಳು ಎರಡು ಎಫ್​- 16 ವಿಮಾನಗಳನ್ನು ಬೆಂಗಾವಲಿಗೆ ಕಳುಹಿಸಿದರು.

ವಿಮಾನವನ್ನು ಸಿಂಗಾಪುರದ ಚಾಂಗಿ ನಿಲ್ದಾಣದಲ್ಲಿ ಭೂಸ್ಪರ್ಶ ಮಾಡಿಸಿದ ತಕ್ಷಣವೇ ಸಿಬ್ಬಂದಿ  ವಿಮಾನವನ್ನು ವಶಕ್ಕೆ ಪಡೆದು ತೀವ್ರ ತಪಾಸಣೆ ನಡೆಸಿದರು. ಈ ವೇಳೆ ಯಾವುದೇ ಸ್ಪೋಟಕ ಸಾಮಗ್ರಿಗಳು ದೊರೆತಿಲ್ಲ. ಇದೊಂದು ಹುಸಿ ಬಾಂಬ್ ಕರೆ ಎಂದು ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.

ವಿಮಾನದಲ್ಲಿ ಒಟ್ಟು 263 ಪ್ರಯಾಣಿಕರು ಪಯಾಣಿಸುತ್ತಿದ್ದರು. ಇದನ್ನು ಗಂಭೀರವಾಗಿ ತೆಗೆದುಕೊಂಡ ವಿಮಾನಯಾನ ಸಂಸ್ಥೆಯು, ಹುಸಿ ಕರೆ ಮಾಡಿದವರ ವಿರುದ್ಧ ದೂರು ನೀಡಲಾಗಿದೆ. ಆರೋಪಿಗಳ ಪತ್ತೆಗೆ ತೀವ್ರ ಶೋಧ ನಡೆಸಲಾಗುತ್ತಿದೆ. ಹೆಚ್ಚಿನ ಮಾಹಿತಿ ಬರಬೇಕಿದೆ ಎಂದು ಸಿಂಗಾಪುರ್ ಏರ್​ಲೈನ್ಸ್ ವಕ್ತಾರ ತಿಳಿಸಿದ್ದಾರೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.