ETV Bharat / bharat

ರಕ್ತ ಪರೀಕ್ಷೆಯಿಂದ ಮಾರಣಾಂತಿಕ ಮೆದುಳು ಕ್ಯಾನ್ಸರ್​ ಮುನ್ಸೂಚನೆ ಪಡೆಯಬಹುದು!

ರಕ್ತ ಪರೀಕ್ಷೆಯಿಂದ ಮಾರಣಾಂತಿಕ ಮೆದುಳಿನ ಕ್ಯಾನ್ಸರ್​ ಬಗ್ಗೆ ಮುನ್ಸೂಚನೆ ಸಿಗುತ್ತದೆ ಎಂದು ಹೊಸ ಅಧ್ಯಯನದಿಂದ ತಿಳಿದು ಬಂದಿದೆ.

ಸಾಂದರ್ಭಿಕ ಚಿತ್ರ
author img

By

Published : Nov 2, 2019, 11:52 AM IST

Updated : Nov 2, 2019, 12:56 PM IST

ಫಿಲಡೆಲ್ಫಿಯಾ: ಸ್ತನ, ಶ್ವಾಸಕೋಶ, ಕರುಳು, ಮೆದುಳಿನ ಕ್ಯಾನ್ಸರ್‌ ಎಂಬ ನಾನಾ ಬಗೆಯ ಗಂಡಾಂತರಕಾರಿ ಮಾರಕ ಕಾಯಿಲೆಗೆ ಔಷಧ ಹುಡುಕುವುದು ಬಹುದೊಡ್ಡ ಸವಾಲು. ಆದರೆ, ಇವುಗಳನ್ನು ಆರಂಭಿಕ ಹಂತದಲ್ಲಿ ಮುನ್ಸೂಚನೆ ಸಿಕ್ಕರೆ ಕಾಯಿಲೆಯ ಉಲ್ಬಣವನ್ನು ನಿಯಂತ್ರಕ್ಕೆ ತರಬಹದು. ಇಂತಹ ಒಂದು ವೈದ್ಯಕೀಯ ಶೋಧನೆಯು ಕ್ಯಾನ್ಸರ್​ ಕಾಯಿಲೆಗೆ ಸಂಬಂಧಿಸಿದಂತೆ ನಡೆಯುತ್ತಿದೆ.

ನರ ಮಂಡಲದಲ್ಲಿನ ವಂಶವಾಹಿಗಳಲ್ಲದ ಡಿಎನ್ಎ (cfDNA) ಪ್ರಮಾಣ ಅಳೆಯುವ ರಕ್ತ ಪರೀಕ್ಷೆ ವಿಧಾನವನ್ನು ಲಿಕ್ವಿಡ್​ ಬಯಾಪ್ಸಿ ಎನ್ನುತ್ತಾರೆ. ರೋಗಿಗಳನ್ನು ಗ್ಲಿಯೊಬ್ಲಾಸ್ಟೊಮಾ (ಜಿಬಿಎಂ) ಎಂದು ಗುರುತಿಸಿದ ಬಳಿಕ ಕಾಯಿಲೆ ಪೀಡಿತರು ಚಿಕಿತ್ಸೆಗೆ ಹೇಗೆ ಸ್ಪಂದಿಸುತ್ತಿದ್ದಾರೆ ಎಂಬುದು ತಿಳಿಯಬಹುದು. ಇದು ಬ್ರೈನ್ ಟ್ಯೂಮರ್ (ಮಿದುಳಿನಲ್ಲಿ ಗಡ್ಡೆ) ಜೀವಕ್ಕೆ ಅಪಾಯ ತರುವಂತಹ ಕಾಯಿಲೆ.

ಹೊಸ ಅಧ್ಯಯನವೊಂದರಲ್ಲಿ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಅಬ್ರಾಮ್ಸನ್ ಕ್ಯಾನ್ಸರ್ ಕೇಂದ್ರದ ಸಂಶೋಧಕರು ಹೆಚ್ಚಿನ cfDNA ಸಾಂದ್ರತೆ ಹೊಂದಿರುವ ರೋಗಿಗಳಲ್ಲಿ ಕ್ಯಾನ್ಸರ್ ಮತ್ತು ಇತರ ಜೀವಕೋಶಗಳು ರಕ್ತದಲ್ಲಿ ಬೇಗನೆ ಹರಡುತ್ತವೆ ಎಂದು ಡಿಎನ್‌ಎ ಪರಿಚಲನೆಯಲ್ಲಿ ಕಂಡುಕೊಂಡಿದ್ದಾರೆ. ಕಡಿಮೆ cfDNA ಹೊಂದಿರುವ ರೋಗಿಗಳಲ್ಲಿ ಕಡಿಮೆ ಪ್ರಗತಿ ಹೊಂದಿಲಿವೆ. ಬೆಳವಣಿಗೆ ಆರಂಭಿಕ ಹಂತದಲ್ಲಿ ಅಥವಾ ಸ್ವಲ್ಪ ಸಮಯದ ಮೊದಲು ಕಾಣಿಸಿಕೊಳ್ಳುತ್ತದೆ ಎಂದಿದ್ದಾರೆ.

ಜಿಬಿಎಂನಲ್ಲಿನ ಗಟ್ಟಿ ಅಂಗಾಂಶವನ್ನು (ಘನ ಅಂಗಾಂಶ) ಬಯಾಪ್ಸಿಗಳ ಅನುವಂಶಿಕ ಲಿಕ್ವಿಡ್​ ಬಯಾಪ್ಸಿಗಳೊಂದಿಗೆ ಅಧ್ಯಯನ ತಂಡ ಹೋಲಿಸಿ ಪ್ರಯೋಗ ನಡೆಸಿದೆ. ಎರಡೂ ಬಯಾಪ್ಸಿಗಳು ಅರ್ಧಕ್ಕಿಂತ ಹೆಚ್ಚು ರೋಗಿಗಳಲ್ಲಿ ಆನುವಂಶಿಕ ರೂಪಾಂತರಗಳನ್ನು ಪತ್ತೆಹಚ್ಚಿದ್ದಾರೆ. ಈ ರೂಪಾಂತರಗಳಲ್ಲಿ ಯಾವುದೂ ಅತಿಕ್ರಮಿಸಲ್ಪಟ್ಟಿಲ್ಲ. ಅಂದರೆ, ಲಿಕ್ಚಿಡ್​ ಬಯಾಪ್ಸಿ ಪೂರಕವಾದ ಮಾಹಿತಿಯನ್ನು ಒದಗಿಸುತ್ತದೆ. ಪ್ರತಿ ಗೆಡ್ಡೆಯ ಆಣ್ವಿಕ ಅಥವಾ ಆನುವಂಶಿಕ ರೂಪಾಂತರವೆಂದಿದ್ದಾರೆ. ಇದನ್ನು ಅಮೆರಿಕನ್ ಅಸೋಸಿಯೇಷನ್ ​​ಫಾರ್ ಕ್ಯಾನ್ಸರ್ ರಿಸರ್ಚ್‌ನ ಜರ್ನಲ್ ಕ್ಲಿನಿಕಲ್ ಕ್ಯಾನ್ಸರ್ ರಿಸರ್ಚ್ ಈ ಸಂಶೋಧನಾ ಅಧ್ಯಯನ ಪ್ರಕಟಿಸಿದೆ.

ರಕ್ತ ಪರೀಕ್ಷಾ ವಿಧಾನದಲ್ಲಿನ ಲಿಕ್ವಿಡ್​ ಬಯಾಪ್ಸಿ, ನಮಗೆ ಮಾರಣಾಂತಿಕ ಮೆದುಳಿನ ಕ್ಯಾನ್ಸರ್​ ಬಗ್ಗೆ ಆರಂಭಿಕ ಮುನ್ಸೂಚನೆ ನೀಡಲಿದೆ ಎಂಬ ಮಾಹಿತಿ ಇದೀಗ ಹೊಸ ಅಧ್ಯಯನದಿಂದ ಹೊರಬಿದ್ದಿದೆ. ರಕ್ತ ತಪಾಸಣೆ ವೇಳೆ ರಕ್ತದಲ್ಲಿನ ಡಿಎನ್​​ಎ ಹಾಗೂ ಗ್ಲಿಯೊಬ್ಲಾಸ್ಟೊಮಾ ಎಂದು ಕರೆಯಿಸಿಕೊಳ್ಳುವ ಜಿಬಿಎಂ ಎಷ್ಟೊಂದು ಪ್ರಗತಿ ಹೊಂದಿದೆ ಎಂಬುದು ಇದರಿಂದ ಗೊತ್ತಾಗುತ್ತದೆ.

ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಅಬ್ರಾಮ್ಸನ್ ಕ್ಯಾನ್ಸರ್ ಕೇಂದ್ರದ ಸಂಶೋಧಕರು ಸಿಎಫ್‌ಡಿಎನ್‌ಎ ಹೆಚ್ಚಿನ ಸಾಂದ್ರತೆ ಹೊಂದಿರುವ ರೋಗಿಗಳು - ಕ್ಯಾನ್ಸರ್ ಮತ್ತು ಇತರ ಜೀವಕೋಶಗಳು ರಕ್ತದಲ್ಲಿನ ಡಿಎನ್‌ಎ ಪರಿಚಲನೆಗೆ ಸಹಕಾರಿಯಾಗುತ್ತವೆ ಎಂದು ತಿಳಿಸಿದೆ. ರಕ್ತದ ಮೇಲೆ ಆಕ್ರಮಣ ನಡೆಸುವ ಕ್ಯಾನ್ಸರ್‌ನ ಒಂದು ವಿಧ ದೀರ್ಘ‌ಕಾಲಿಕ ಕ್ಯಾನ್ಸರ್‌ಪೀಡಿತ ಕೋಶಗಳು ಕಾಲಾಂತರದಲ್ಲಿ ದೇಹದಲ್ಲಿ ಪ್ರಗತಿಹೊಂದುತ್ತವೆ, ಆದರೆ ಅನೇಕ ಮಂದಿಯಲ್ಲಿ ಕನಿಷ್ಟ ಕೆಲವು ವರ್ಷಗಳ ಕಾಲ ಯಾವುದೇ ಲಕ್ಷಣಗಳು ಪ್ರಕಟವಾಗುವುದಿಲ್ಲ.

ರಕ್ತಕೋಶದಲ್ಲಿನ ಘನ ಅಂಗಾಂಶ ಅನುವಂಶಿಕವಾಗಿ ಬಂದಿರುವ ಕಾರಣ, ಅರ್ಧಕ್ಕಿಂತ ಹೆಚ್ಚಿನ ಕ್ಯಾನ್ಸರ್​​ ಇದೇ ರೀತಿಯಾಗಿ ಬರುತ್ತದೆ. ಸಿಎಂಎಲ್‌ನ ಬಹುತೇಕ ಪ್ರಕರಣಗಳು ಪ್ರೌಢರಲ್ಲಿ ಕಾಣಿಸಿಕೊಳ್ಳುತ್ತವೆ. ಆದರೆ ಅಪರೂಪವಾಗಿ ಮಕ್ಕಳಲ್ಲಿಯೂ ಉಂಟಾಗುತ್ತದೆ. ಸಾಮಾನ್ಯವಾಗಿ ರಕ್ತದಲ್ಲಿರುವ ಆರೋಗ್ಯವಂತ ಬಿಳಿ ರಕ್ತಕಣಗಳು ಡಿಎನ್‌ಎಗೆ ಉಂಟಾಗುವ ಹಾನಿಯಿಂದಾಗಿ ಕ್ಯಾನ್ಸರ್‌ ಕೋಶಗಳಾಗುತ್ತವೆ.

ಪ್ರಮುಖವಾಗಿ ಶ್ವಾಸಕೋಶದ ಕ್ಯಾನ್ಸರ್​ ಮೇಲ್ವಿಚಾರಣೆ ಮಾಡಲು ವೈದ್ಯರು ಹೆಚ್ಚಾಗಿ ದ್ರವ (ಲಿಕ್ವಿಡ್)​ ಬಯಾಪ್ಸಿ ಬಳಕೆ ಮಾಡುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಸಂಶೋಧನೆ ಇತರ ರೋಗ ತಾಣಗಳಲ್ಲಿ ಅವುಗಳ ಪರಿಣಾಮದ ಬಗ್ಗೆ ಹೇಳಿದೆ. ಹಿರಿಯ ತಜ್ಞರಾದ ಎರಿಕಾ, ಎಲ್​ ಕಾರ್ಪೆಂಟರ್​ ಸಹ ಇದೇ ಮಾತು ಹೇಳಿದ್ದಾರೆ.

ಈ ಸಂಶೋಧನೆಯಿಂದ ಪ್ರತಿ ವರ್ಷ ಸುಮಾರು 11,000 ಹೊಸ ಪ್ರಕರಣ ಕಂಡು ಬರುತ್ತಿದ್ದು, ಐದು ವರ್ಷದಲ್ಲಿ ಬದುಕಿ ಉಳಿಯುವ ಸಾಧ್ಯತೆ ಸಹ ಶೇ 10ರಷ್ಟು ಮಾತ್ರ ಇರುತ್ತದೆ. ಇದಲ್ಲದೆ, ಕ್ಯಾನ್ಸರ್​ ಗೆಡ್ಡೆ ಸಾಮಾನ್ಯವಾಗಿ ಭಿನ್ನವಾಗಿರುತ್ತವೆ. ವಿವಿಧ ಭಾಗ ವಿಭಿನ್ನ ಆನುವಂಶಿಕ ರೂಪಾಂತರವಾಗಿರುತ್ತವೆ. ಈ ರೂಪಾಂತರ ತದನಂತರ ಪತ್ತೆಹಚ್ಚುವುದು ಬಲು ಕಷ್ಟವಾಗುತ್ತದೆ.

ರಕ್ತ ಕ್ಯಾನ್ಸರ್‌ನ ಹೊಸ ಪ್ರಕರಣಗಳಲ್ಲಿ ಶೇ. 10ರಷ್ಟು ಕ್ರಾನಿಕ್‌ ಮೇಲಾಯ್ಡ ಲ್ಯುಕೇಮಿಯಾ ಆಗಿರುತ್ತವೆ. ಈ ಕಾಯಿಲೆಯು ಪುರುಷರಲ್ಲಿ ಮಹಿಳೆಯರಿಗಿಂತ ಸ್ವಲ್ಪ ಹೆಚ್ಚು ಪ್ರಮಾಣದಲ್ಲಿ ಕಂಡುಬರುತ್ತದೆ. ಇದಕ್ಕೆ ಮ್ಯುಟೇಶನ್‌ಗೆ ಚಿಕಿತ್ಸೆ ಒದಗಿಸಿ ಕ್ಯಾನ್ಸರ್‌ ಪೀಡಿತ ಕೋಶಗಳು ಸಹಜವಾಗಿ ನಾಶ ಹೊಂದುವಂತೆ ಮಾಡುತ್ತವೆ. ಈ ಔಷಧಗಳನ್ನು ರೋಗಿಗೆ ದಿನಕ್ಕೆ ಒಂದು ಬಾರಿ ಅಥವಾ ಎರಡು ಬಾರಿ ಸೇವಿಸುವಂತೆ ಮಾತ್ರೆ ಅಥವಾ ಕ್ಯಾಪ್ಸೂಲ್‌ಗ‌ಳ ರೂಪದಲ್ಲಿ ನೀಡಲಾಗುತ್ತದೆ. ಈ ಚಿಕಿತ್ಸಾ ವಿಧಾನದ ಮೂಲಕ ರೋಗಪತ್ತೆಯಾದ ಬಳಿಕವೂ ರೋಗಿ 10ರಿಂದ 15 ವರ್ಷಗಳ ಕಾಲ ಸಹಜ ಜೀವನವನ್ನು ನಡೆಸಬಹುದಾಗಿದೆ.

ಹೊಸ ಅಧ್ಯಯನದ ಪ್ರಕಾರ ಜಿಬಿಎಂ ಹೊಂದಿರುವ 42 ರೋಗಿಗಳು ಶಸ್ತ್ರಚಿಕಿತ್ಸೆಗೆ ಮುನ್ನ ಕೀಮೋಥೆರಪಿ ಮತ್ತು ವಿಕಿರಣದ ರಕ್ತಪರೀಕ್ಷೆಗೆ ಒಳಗಾಗುತ್ತಾರೆ. ಇದರಲ್ಲಿ ಹೆಚ್ಚಿನ ಸಾಂದ್ರತೆ ಹೊಂದಿರುವ ವ್ಯಕ್ತಿಗಳ ಬದುಕಿ ಉಳಿಯುವ ಸಾಧ್ಯತೆ ಕಡಿಮೆಯಾಗಿರುತ್ತದೆ ಎಂದು ತಜ್ಞ ವೈದ್ಯರು ತಿಳಿಸಿದ್ದಾರೆ.

Intro:Body:

ರಕ್ತಪರೀಕ್ಷೆಯಿಂದ ಮಾರಣಾಂತಿಕ ಮೆದುಳಿನ ಕ್ಯಾನ್ಸರ್​ ಮುನ್ಸೂಚನೆ!

ಫಿಲಡೆಲ್ಫಿಯಾ: ಕ್ಯಾನ್ಸರ್ ಎಂಬುದು ಜೀವ ಕೋಶದಲ್ಲಿ ಪ್ರಾಂಭವಾಗುವ ಗಂಡಾಂತರಕಾರಿ ಸಮಸ್ಯೆಯಾಗಿದ್ದು, ಎಲ್ಲ ವಯೋಮಾನವದವರಿಗೆ ಕಾಣುವ ರೋಗ. ಇದರಲ್ಲಿ ಹತ್ತು ಹಲವು ಪ್ರಕಾರದ ಕ್ಯಾನ್ಸರ್​ಗಳಿವೆ. 

ಆದರೆ ರಕ್ತ ಪರೀಕ್ಷೆ ವೇಳೆ ನಮಗೆ ಮಾರಣಾಂತಿಕ ಮೆದುಳಿನ ಕ್ಯಾನ್ಸರ್​ ಬಗ್ಗೆ ಮುನ್ಸೂಚನೆ ಸಿಗಲಿದೆ ಎಂಬ ಮಾಹಿತಿ ಇದೀಗ ಹೊಸ ಅಧ್ಯಯನದಿಂದ ಹೊರಬಿದ್ದಿದೆ. ರಕ್ತ ತಪಾಸನೆ ವೇಳೆ ರಕ್ತದಲ್ಲಿನ ಡಿಎನ್​​ಎ ಹಾಗೂ ಗ್ಲಿಯೊಬ್ಲಾಸ್ಟೊಮಾ ಎಂದು ಕರೆಯಿಸಿಕೊಳ್ಳುವ ಜಿಬಿಎಂ ಎಷ್ಟೊಂದು ಪ್ರಗತಿ ಹೊಂದಿದೆ ಎಂಬುದು ಇದರಿಂದ ಗೊತ್ತಾಗುತ್ತದೆ. 

ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಅಬ್ರಾಮ್ಸನ್ ಕ್ಯಾನ್ಸರ್ ಕೇಂದ್ರದ ಸಂಶೋಧಕರು ಸಿಎಫ್‌ಡಿಎನ್‌ಎ ಹೆಚ್ಚಿನ ಸಾಂದ್ರತೆ ಹೊಂದಿರುವ ರೋಗಿಗಳು - ಕ್ಯಾನ್ಸರ್ ಮತ್ತು ಇತರ ಜೀವಕೋಶಗಳು ರಕ್ತದಲ್ಲಿನ ಡಿಎನ್‌ಎ ಪರಿಚಲನೆಗೆ ಸಹಕಾರಿಯಾಗುತ್ತವೆ ಎಂದು ತಿಳಿಸಿದೆ. ರಕ್ತದ ಮೇಲೆ ಆಕ್ರಮಣ ನಡೆಸುವ ಕ್ಯಾನ್ಸರ್‌ನ ಒಂದು ವಿಧ ದೀರ್ಘ‌ಕಾಲಿಕ ಕ್ಯಾನ್ಸರ್‌ಪೀಡಿತ ಕೋಶಗಳು ಕಾಲಾಂತರದಲ್ಲಿ ದೇಹದಲ್ಲಿ ಪ್ರಗತಿಹೊಂದುತ್ತವೆ, ಆದರೆ ಅನೇಕ ಮಂದಿಯಲ್ಲಿ ಕನಿಷ್ಟ ಕೆಲವು ವರ್ಷಗಳ ಕಾಲ ಯಾವುದೇ ಲಕ್ಷಣಗಳು ಪ್ರಕಟವಾಗುವುದಿಲ್ಲ. 

ರಕ್ತಕೋಶದಲ್ಲಿನ ಘನ ಅಂಗಾಂಶ ಅನುವಂಶಿಕವಾಗಿ ಬಂದಿರುವ ಕಾರಣ, ಅರ್ಧಕ್ಕಿಂತ ಹೆಚ್ಚಿನ ಕ್ಯಾನ್ಸರ್​​ ಇದೇ ರೀತಿಯಾಗಿ ಬರುತ್ತದೆ. ಸಿಎಂಎಲ್‌ನ ಬಹುತೇಕ ಪ್ರಕರಣಗಳು ಪ್ರೌಢರಲ್ಲಿ ಕಾಣಿಸಿಕೊಳ್ಳುತ್ತವೆ, ಆದರೆ ಅಪರೂಪವಾಗಿ ಮಕ್ಕಳಲ್ಲಿಯೂ ಉಂಟಾಗುತ್ತದೆ. ಸಾಮಾನ್ಯವಾಗಿ ರಕ್ತದಲ್ಲಿರುವ ಆರೋಗ್ಯವಂತ ಬಿಳಿ ರಕ್ತಕಣಗಳು ಡಿಎನ್‌ಎಗೆ ಉಂಟಾಗುವ ಹಾನಿಯಿಂದಾಗಿ ಕ್ಯಾನ್ಸರ್‌ ಕೋಶಗಳಾಗುತ್ತವೆ. 

ಪ್ರಮುಖವಾಗಿ ಶ್ವಾಸಕೋಶದ ಕ್ಯಾನ್ಸರ್​ ಮೇಲ್ವಿಚಾರಣೆ ಮಾಡಲು ವೈದ್ಯರು ಹೆಚ್ಚಾಗಿ ದ್ರವ ಬಯಾಪ್ಸಿ ಬಳಕೆ ಮಾಡುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಸಂಶೋಧನೆ ಇತರ ರೋಗ ತಾಣಗಳಲ್ಲಿ ಅವುಗಳ ಪರಿಣಾಮದ ಬಗ್ಗೆ ಹೇಳಿದೆ. ಹಿರಿಯ ತಜ್ಞರಾದ ಎರಿಕಾ, ಎಲ್​ ಕಾರ್ಪೆಂಟರ್​ ಸಹ ಇದೇ ಮಾತು ಹೇಳಿದ್ದಾರೆ. 

ಈ ಸಂಶೋಧನೆಯಿಂದ ಪ್ರತಿ ವರ್ಷ ಸುಮಾರು 11,000 ಹೊಸ ಪ್ರಕರಣ ಕಂಡು ಬರುತ್ತಿದ್ದು, ಐದು ವರ್ಷದಲ್ಲಿ ಬದುಕಿ ಉಳಿಯುವ ಸಾಧ್ಯತೆ ಸಹ ಶೇ 10ರಷ್ಟು ಮಾತ್ರ ಇರುತ್ತದೆ. ಇದಲ್ಲದೆ, ಕ್ಯಾನ್ಸರ್​ ಗೆಡ್ಡೆ ಸಾಮಾನ್ಯವಾಗಿ ಭಿನ್ನವಾಗಿರುತ್ತವೆ. ವಿವಿಧ ಭಾಗ ವಿಭಿನ್ನ ಆನುವಂಶಿಕ ರೂಪಾಂತರವಾಗಿರುತ್ತವೆ. ಈ ರೂಪಾಂತರ ತದನಂತರ ಪತ್ತೆಹಚ್ಚುವುದು ಬಲು ಕಷ್ಟವಾಗುತ್ತದೆ.

ರಕ್ತ ಕ್ಯಾನ್ಸರ್‌ನ ಹೊಸ ಪ್ರಕರಣಗಳಲ್ಲಿ ಶೇ. 10ರಷ್ಟು ಕ್ರಾನಿಕ್‌ ಮೇಲಾಯ್ಡ ಲ್ಯುಕೇಮಿಯಾ ಆಗಿರುತ್ತವೆ. ಈ ಕಾಯಿಲೆಯು ಪುರುಷರಲ್ಲಿ ಮಹಿಳೆಯರಿಗಿಂತ ಸ್ವಲ್ಪ ಹೆಚ್ಚು ಪ್ರಮಾಣದಲ್ಲಿ ಕಂಡುಬರುತ್ತದೆ. ಇದಕ್ಕೆ ಮ್ಯುಟೇಶನ್‌ಗೆ ಚಿಕಿತ್ಸೆ ಒದಗಿಸಿ ಕ್ಯಾನ್ಸರ್‌ ಪೀಡಿತ ಕೋಶಗಳು ಸಹಜವಾಗಿ ನಾಶ ಹೊಂದುವಂತೆ ಮಾಡುತ್ತವೆ. ಈ ಔಷಧಗಳನ್ನು ರೋಗಿಗೆ ದಿನಕ್ಕೆ ಒಂದು ಬಾರಿ ಅಥವಾ ಎರಡು ಬಾರಿ ಸೇವಿಸುವಂತೆ ಮಾತ್ರೆ ಅಥವಾ ಕ್ಯಾಪ್ಸೂಲ್‌ಗ‌ಳ ರೂಪದಲ್ಲಿ ನೀಡಲಾಗುತ್ತದೆ. ಈ ಚಿಕಿತ್ಸಾ ವಿಧಾನದ ಮೂಲಕ ರೋಗಪತ್ತೆಯಾದ ಬಳಿಕವೂ ರೋಗಿ 10ರಿಂದ 15 ವರ್ಷಗಳ ಕಾಲ ಸಹಜ ಜೀವನವನ್ನು ನಡೆಸಬಹುದಾಗಿದೆ. 

ಹೊಸ ಅಧ್ಯಯನದ ಪ್ರಕಾರ ಜಿಬಿಎಂ ಹೊಂದಿರುವ 42 ರೋಗಿಗಳು ಶಸ್ತ್ರಚಿಕಿತ್ಸೆಗೆ ಮುನ್ನ ಕೀಮೋಥೆರಪಿ ಮತ್ತು ವಿಕಿರಣದ ರಕ್ತಪರೀಕ್ಷೆಗೆ ಒಳಗಾಗುತ್ತಾರೆ. ಇದರಲ್ಲಿ ಹೆಚ್ಚಿನ ಸಾಂದ್ರತೆ ಹೊಂದಿರುವ ವ್ಯಕ್ತಿಗಳ ಬದುಕಿ ಉಳಿಯುವ ಸಾಧ್ಯತೆ ಕಡಿಮೆಯಾಗಿರುತ್ತದೆ ಎಂದು ತಜ್ಞ ವೈದ್ಯರು ತಿಳಿಸಿದ್ದಾರೆ. 

Conclusion:
Last Updated : Nov 2, 2019, 12:56 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.