ಜೈಪುರ (ರಾಜಸ್ಥಾನ): ಸಚಿನ್ ಪೈಲಟ್ ಮತ್ತು ಇತರ 18 ಭಿನ್ನಮತೀಯ ಕಾಂಗ್ರೆಸ್ ಶಾಸಕರ ವಿರುದ್ಧ ಅನರ್ಹತೆ ಪ್ರಕರಣದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು ರಾಜಸ್ಥಾನ ಹೈಕೋರ್ಟ್ ಆದೇಶಿಸಿದೆ.
ಈ ಆದೇಶವನ್ನು ಬಿಜೆಪಿ ಸ್ವಾಗತಿಸಿದೆ. ಈಟಿವಿ ಭಾರತದೊಂದಿಗೆ ಮಾತನಾಡಿದ ಬಿಜೆಪಿಯ ರಾಷ್ಟ್ರೀಯ ವಕ್ತಾರ ಸುದೇಶ್ ವರ್ಮಾ, ಹೈಕೋರ್ಟ್ ತೀರ್ಪನ್ನು ಎಲ್ಲರೂ ಒಪ್ಪಿಕೊಳ್ಳಬೇಕು ಮತ್ತು ಇದು ಪ್ರಜಾಪ್ರಭುತ್ವಕ್ಕೆ ಒಳ್ಳೆಯದು ಎಂದು ಪ್ರತಿಕ್ರಿಯಿಸಿದ್ದಾರೆ. ಈ ನಿರ್ಧಾರಕ್ಕೆ ಕಾಂಗ್ರೆಸ್ ಯಾರನ್ನೂ ದೂಷಿಸಬಾರದು ಎಂದೂ ಟಾಂಗ್ ಕೊಟ್ಟಿದ್ದಾರೆ.
ಈ ಆದೇಶದೊಂದಿಗೆ ಹೈಕೋರ್ಟ್ ಅನರ್ಹತೆ ನೋಟಿಸ್‌ನಲ್ಲಿ ಸ್ಪೀಕರ್ ಸಿಪಿ ಜೋಶಿ ಅವರು ಕಾರ್ಯನಿರ್ವಹಿಸುವುದನ್ನು ನಿರ್ಬಂಧಿಸಿದೆ. ಹೈಕೋರ್ಟ್‌ನಲ್ಲಿ ಸ್ಪೀಕರ್ ನೀಡಿದ ಅನರ್ಹತೆ ನೋಟಿಸ್‌ಗೆ ಪೈಲಟ್ ಮತ್ತು ಇತರ 18 ಭಿನ್ನಮತೀಯ ಶಾಸಕರು ಸವಾಲು ಹಾಕಿದ್ದರು.
ಪೈಲಟ್ ಮತ್ತು ಅವರ ಬೆಂಬಲಿಗರು ಪಕ್ಷದ ಸಿಎಲ್‌ಪಿ ಸಭೆಗಳಿಗೆ ಹಾಜರಾಗಲಿಲ್ಲ ಎಂದು ಹೇಳಿದ ಕಾಂಗ್ರೆಸ್ ತನ್ನ ಶಾಸಕರಿಗೆ ಅನರ್ಹತೆ ನೋಟಿಸ್ ಜಾರಿಗೊಳಿಸಿತ್ತು.