ಚಂಡೀಗಢ್: 80 ವಿಧಾನಸಭೆ ಕ್ಷೇತ್ರಗಳನ್ನೊಳಗೊಂಡಿರುವ ಹರಿಯಾಣ ವಿಧಾನಸಭೆ ಚುನಾವಣೆಗಾಗಿ ಈಗಾಗಲೇ ದಿನಾಂಕ ಘೋಷಣೆಯಾಗಿದ್ದು, ಭಾರತೀಯ ಜನತಾ ಪಾರ್ಟಿ 78 ಅಭ್ಯರ್ಥಿಗಳ ಮೊದಲ ಲಿಸ್ಟ್ ರಿಲೀಸ್ ಮಾಡಿದೆ.
ಮೊದಲ ಪಟ್ಟಿಯಲ್ಲಿ ಕಳೆದ ಕೆಲ ದಿನಗಳ ಕೆಳಗೆ ಬಿಜೆಪಿ ಸೇರಿರುವ ಕುಸ್ತಿಪಟು ಯೋಗೇಶ್ವರ್ ದತ್, ಬಬಿತಾ ಪೋಗಟ್ ಹಾಗೂ ಟೀಂ ಇಂಡಿಯಾ ಹಾಕಿ ಮಾಜಿ ಕ್ಯಾಪ್ಟನ್ ಸಂದೀಪ್ ಸಿಂಗ್ಗೆ ಟಿಕೆಟ್ ನೀಡಿದೆ.
ಅಕ್ಟೋಬರ್ 21ರಂದು ಎಲ್ಲ 80 ಕ್ಷೇತ್ರಗಳಿಗೂ ಚುನಾವಣೆ ನಡೆಯಲಿದ್ದು, ಅಕ್ಟೋಬರ್ 24ರಂದು ಫಲಿತಾಂಶ ಸಹ ಹೊರಬೀಳಲಿದೆ. ಇನ್ನೊಂದು ಅವಧಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲು ಮುಂದಾಗಿರುವ ಬಿಜೆಪಿ ಅಳಿದು ನೋಡಿ ಅಭ್ಯರ್ಥಿಗಳಿಗೆ ಮಣೆ ಹಾಕಿದೆ. ಹರಿಯಾಣ ಸಿಎಂ ಮನೋಹರ್ ಲಾಲ್ ಕಟ್ಟರ್ ಕರ್ನಾಲ್ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ. ಯೋಗೇಶ್ವರ್ ಬರೋಡಾ, ಸಂದೀಪ್ ಸಿಂಗ್ ಪೆಹೋವಾ ಕ್ಷೇತ್ರ ಹಾಗೂ ಬಬಿತಾ ದಾದ್ರಿ ಕ್ಷೇತ್ರದಿಂದ ತಮ್ಮ ರಾಜಕೀಯ ಭವಿಷ್ಯ ನಿರ್ಧರಿಸಿಕೊಳ್ಳಲಿದ್ದಾರೆ.
ಸದ್ಯದ ಲಿಸ್ಟ್ನಲ್ಲಿ 40 ಅಭ್ಯರ್ಥಿಗಳು ಹೊಸಬರಾಗಿದ್ದಾರೆ. ಈಗಾಗಲೇ ಶಾಸಕರಾಗಿರುವ 38 ಎಂಎಲ್ಎಗಳಿಗೆ ಬಿಜೆಪಿ ಗೇಟ್ಪಾಸ್ ನೀಡಿರುವುದು ಗಮನಾರ್ಹವಾಗಿದೆ.