ETV Bharat / bharat

ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ ಆಪರೇಷನ್​​ ಹಸ್ತ - ಕಮಲ!

ಮಧ್ಯಪ್ರದೇಶ ರಾಜ್ಯ ರಾಜಕೀಯದಲ್ಲಿ ಭಾರಿ ಹೈಡ್ರಾಮ ನಡೆಯುತ್ತಿದ್ದು, ಸರ್ಕಾರ ಉರುಳಿಸಲು ಬಿಜೆಪಿ ಪ್ರಯತ್ನಿಸುತ್ತಿದ್ದರೆ, ಸರ್ಕಾರ ಉಳಿಸಿಕೊಳ್ಳಲು ಕಾಂಗ್ರೆಸ್​ ಸರ್ಕಸ್​ ನಡೆಸುತ್ತಿದೆ.

BJP MLA Narayan Tripathi
BJP MLA Narayan Tripathi
author img

By

Published : Mar 7, 2020, 12:36 PM IST

ಭೋಪಾಲ್​: ಕರ್ನಾಟಕದಲ್ಲಿ ಹಲವು ಪ್ರಯತ್ನಗಳ ಬಳಿಕ ಆಪರೇಷನ್​ ಕಮಲ ಯಶಸ್ವಿಯಾಗಿ ಬಿಎಸ್​ವೈ ಸರ್ಕಾರ ರಚನೆ ಆಗಿದೆ. ಈಗ ಅಂತಹುದೇ ಯತ್ನ ಮಧ್ಯಪ್ರದೇಶದಲ್ಲಿ ಆರಂಭವಾಗಿದೆ. ಒಂದಿಷ್ಟು ಕಾಂಗ್ರೆಸ್​ ಶಾಸಕರು ಆಪರೇಷನ್​ ಕಮಲಕ್ಕೆ ಒಳಗಾಗಿದ್ದಾರೆ ಎಂಬ ಗುಸು ಗುಸು ಎದ್ದಿದೆ.

ಈ ನಡುವೆ ಓರ್ವ ಶಾಸಕ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೂಡಾ ಕೊಟ್ಟಿದ್ದಾರೆ. ಇದರ ಮಧ್ಯೆ ಸರ್ಕಾರ ಉಳಿಸಿಕೊಳ್ಳಲು ಕಾಂಗ್ರೆಸ್​ ಸಹ ರಿವರ್ಸ್​ ಆಪರೇಷನ್​ ಶುರು ಮಾಡಿದ್ದಾರೆ. ಬಿಜೆಪಿ ಎಂಎಲ್​ಎ ನಾರಾಯಣ ತ್ರಿಪಾಠಿ ಸಿಎಂ ಕಮಲನಾಥ್​ಗೆ ಬೆಂಬಲ ನೀಡುವ ಇರಾದೆ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ, ಇನ್ನಿಬ್ಬರು ಎಂಎಲ್ಎಗಳು ಸಹ ಕಮಲನಾಥ್​ಗೆ ಬೆಂಬಲ ನೀಡುವ ಮಾತನಾಡಿದ್ದಾರೆ. ಈ ಮಾತಿಗೆ ಇಂಬು ನೀಡುವಂತೆ ತ್ರಿಪಾಠಿ ಸಿಎಂ ಕಮಲನಾಥ್​ ಅವರೊಂದಿಗೆ ನಿನ್ನೆ ರಾತ್ರಿ ಮಹತ್ವದ ಸಭೆ ನಡೆಸಿದ್ದಾರೆ.

ಅಷ್ಟೇ ಅಲ್ಲ ಅವರು ಸ್ಪೀಕರ್​ ನಿವಾಸಕ್ಕೆ ಭೇಟಿ ನೀಡಿ ರಾಜೀನಾಮೆ ಸಲ್ಲಿಸಿದ್ದಾರೆ ಎಂದೂ ಹೇಳಲಾಗಿತ್ತು. ಆದರೆ, ಈ ಸುದ್ದಿಯನ್ನ ತ್ರಿಪಾಠಿ ತಳ್ಳಿ ಹಾಕಿದ್ದಾರೆ. ಇನ್ನೊಂದು ಕಡೆ ಇಬ್ಬರು ಸ್ವತಂತ್ರ( ಪಕ್ಷೇತರ)ಸದಸ್ಯರು ಸರ್ಕಾರಕ್ಕೆ ನೀಡಿರುವ ಬೆಂಬಲ ಮುಂದುವರೆಸುವುದಾಗಿ ಹೇಳಿದ್ದಾರೆ. ಇನ್ನು ಬೆಂಗಳೂರಿನಲ್ಲಿದ್ದಾರೆ ಎನ್ನಲಾದ ನಾಲ್ವರು ಕಾಂಗ್ರೆಸ್ ಎಂಎಲ್​​ಎಗಳ ಪೈಕಿ ಒಬ್ಬ ಎಂಎಲ್​ಎ ಶ್ರೇರಾ ತಾವು ಸಿಲಿಕಾನ್​ ಸಿಟಿಯಲ್ಲಿ ಇರುವುದಾಗಿ ಹೇಳಿಕೊಂಡಿದ್ದಾರೆ. ಅಲ್ಲದೇ ತಾವು ಸಿಎಂ ಕಮಲನಾಥ್​ಗೆ ಬೆಂಬಲ ಕೊಡುತ್ತೇನೆ ಎಂದೂ ಹೇಳಿಕೊಂಡಿದ್ದಾರೆ. ಆದರೆ ಮೂವರು ಶಾಸಕರ ಇರುವಿಕೆ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.