ETV Bharat / bharat

ಬಿಜೆಪಿ ಮುಖಂಡನಿಂದ ಮಹಿಳೆ ಮೇಲೆ ಹಲ್ಲೆ: ವಿಡಿಯೋ ಶೇರ್​ ಮಾಡಿದ ಕಮಲ್​ನಾಥ್​

ಮಹಿಳೆಯೋರ್ವಳ ಮೇಲೆ ಬಿಜೆಪಿ ಮುಖಂಡ ಹಲ್ಲೆ ಮಾಡಿದ್ದಾರೆ ಎನ್ನಲಾಗುತ್ತಿರುವ ವಿಡಿಯೋವೊಂದನ್ನ ಮಧ್ಯಪ್ರದೇಶ ಕಾಂಗ್ರೆಸ್​ ಮುಖಂಡ ಕಮಲ್​ನಾಥ್​ ಟ್ವಿಟರ್​ನಲ್ಲಿ ಶೇರ್​ ಮಾಡಿದ್ದಾರೆ.

BJP Leaders Thrashed Woman
BJP Leaders Thrashed Woman
author img

By

Published : Aug 21, 2020, 9:10 PM IST

ಭೋಪಾಲ್​: ಮಧ್ಯಪ್ರದೇಶದಲ್ಲಿ ಬಿಜೆಪಿ ಮುಖಂಡನೋರ್ವ ಮಹಿಳೆಯೋರ್ವಳ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿರುವ ವಿಡಿಯೋ ತುಣುಕೊಂದನ್ನು ಕಾಂಗ್ರೆಸ್​ ಮುಖಂಡ ಕಮಲ್​ನಾಥ್​​ ಟ್ವಿಟರ್​​ನಲ್ಲಿ ಶೇರ್​ ಮಾಡಿದ್ದಾರೆ.

  • बैतूल ज़िले के सारणी क्षेत्र के शोभापुर में एक दलित महिला व उसकी बेटियों से बदसलूकी का विरोध करने पर भाजपा नेताओ द्वारा सार्वजनिक रूप से बेरहमी से मारपीट की घटना सामने आयी है।
    1/3 pic.twitter.com/6XshqfCuKx

    — Office Of Kamal Nath (@OfficeOfKNath) August 21, 2020 " class="align-text-top noRightClick twitterSection" data=" ">

ಕಾಂಗ್ರೆಸ್​ ಮುಖಂಡ ಕಮಲ್​ನಾಥ್​ ಶೇರ್​ ಮಾಡಿರುವ ವಿಡಿಯೋದಲ್ಲಿ ಮಹಿಳೆಯ ಮೇಲೆ ವ್ಯಕ್ತಿಯೋರ್ವ ಅಮಾನವೀಯ ರೀತಿಯಲ್ಲಿ ಹಲ್ಲೆ ನಡೆಸುತ್ತಿದ್ದು, ಆಕೆಯನ್ನು ತಳ್ಳಾಡಿದ್ದಾನೆ. ಈ ವೇಳೆ ನಮ್ಮ ತಾಯಿಯನ್ನು ಬಿಡುವಂತೆ ಆಕೆಯ ಮಗಳು ಚೀರಾಡಿದ್ದಾಳೆ.

ಬಿತುಲ್​​​ ಜಿಲ್ಲೆಯ ಶೋಭಾಪುರ್​ದಲ್ಲಿ ದಲಿತ ಮಹಿಳೆ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಆಕೆಯ ಮೇಲೆ ಬಿಜೆಪಿ ಮುಖಂಡ ಹಲ್ಲೆ ಮಾಡಿದ್ದಾನೆಂದು ಕಮಲ್​ ನಾಥ್​ ತಮ್ಮ ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ.ಇಷ್ಟೊಂದು ಕ್ರೂರವಾಗಿ ನಡೆದುಕೊಂಡಿದ್ದರೂ ಪೊಲೀಸರು ಬಿಜೆಪಿ ಮುಖಂಡನ ಮೇಲೆ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.

ಇದೇ ವೇಳೆ ಮುಖ್ಯಮಂತ್ರಿ ಶಿವರಾಜ್​ ಸಿಂಗ್​​ ವಿರುದ್ಧ ವಾಗ್ದಾಳಿ ನಡೆಸಿದ್ದು, ನಿಮ್ಮ ಸರ್ಕಾರ ಆಡಳಿತ ನಡೆಸುತ್ತಿರುವಾಗ ನಮ್ಮ ಸಹೋದರಿಯರ ಮೇಲೆ ಈ ರೀತಿಯ ಕೃತ್ಯ ನಡೆಸಲಾಗುತ್ತಿದೆ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.