ನವದೆಹಲಿ: ಆರೋಗ್ಯದ ಕಡೆಗೆ ಹೆಚ್ಚು ಗಮನ ಹರಿಸಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಇನ್ಮುಂದೆ ಅಧಿಕಾರಿಗಳ ಸಭೆಯಲ್ಲಿ ಬಿಸ್ಕೇಟ್, ಕುಕ್ಕೀಸ್ಗಳನ್ನು ನೀಡುವಂತಿಲ್ಲ ಎಂದು ಸುತ್ತೋಲೆ ಹೊರಡಿಸಿದೆ.
ಕೇಂದ್ರದ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಅವರು ಈ ಸುತ್ತೋಲೆ ಹೊರಡಿಸಿದ್ದು, ಇಲಾಖೆ ಹಾಗೂ ಕ್ಯಾಂಟೀನ್ಗಳಲ್ಲಿ ಬಿಸ್ಕೇಟ್ಗಳನ್ನು ಮಾರಾಟ ಮಾಡುವಂತಿಲ್ಲ. ಅಲ್ಲದೆ, ಇಲಾಖೆ ಸಭೆಗಳಲ್ಲಿ ಫಾಸ್ಟ್ಫುಡ್, ಕುಕ್ಕೀಸ್, ಬಿಸ್ಕೇಟ್ ಸೇರಿ ಆರೋಗ್ಯಕರವಲ್ಲದ ತಿನಿಸುಗಳನ್ನು ನೀಡುವಂತಿಲ್ಲ ಎಂದು ಸೂಚನೆ ನೀಡಿದ್ದಾರೆ. ಹುರಿಗಡಲೆ, ಬಾದಾಮಿ, ಕರ್ಜೂರದಂತಹ ಆರೋಗ್ಯಕರ ತಿನಿಸು ನೀಡುವಂತೆಯೂ ಸುತ್ತೋಲೆಯಲ್ಲಿ ಸೂಚನೆ ನೀಡಲಾಗಿದೆ. ಈ ಹಿಂದೆ ಇಲಾಖೆಯ ಅಧಿಕಾರಿಗಳಿಗೆ ಪ್ಲಾಸ್ಟಿಕ್ ವಾಟರ್ ಬಾಟಲ್ ಬಳಸದಂತೆ ಸಚಿವಾಲಯ ಆದೇಶ ನೀಡಿತ್ತು. ಈ ಹಿಂದಿನಿಂತೆಯೇ ಈ ಆದೇಶವನ್ನೂ ಅಧಿಕಾರಿಗಳು ಸ್ವಾಗತಿಸಿದ್ದಾರೆ.