ETV Bharat / bharat

ದೆಹಲಿ ಮೃಗಾಲಯದಿಂದ ಹಕ್ಕಿಜ್ವರ ಮಾದರಿಗಳ ಸಂಗ್ರಹ: ಎಲ್ಲ ವರದಿಗಳು ನೆಗೆಟಿವ್ - ಹಕ್ಕಿಜ್ವರ ಲೇಟೆಸ್ಟ್ ನ್ಯೂಸ್

ಹಕ್ಕಿಜ್ವರದ ಹಿನ್ನೆಲೆಯಲ್ಲಿ ದೆಹಲಿಯ ಮೃಗಾಲಯದಿಂದ ಮಾದರಿಗಳನ್ನು ಪರೀಕ್ಷೆಗೆ ಒಳಪಡೆಇಸಲಾಗಿತ್ತು. ಎಲ್ಲ ವರದಿಗಳು ನೆಗೆಟಿವ್ ಬಂದಿದೆ ಎಂದು ಮೃಗಾಲಯದ ನಿರ್ದೇಶಕ ರಮೇಶ್ ಕುಮಾರ್ ಪಾಂಡೆ ಹೇಳಿದ್ದಾರೆ.

ದೆಹಲಿ ಮೃಗಾಲಯ
Delhi Zoo
author img

By

Published : Feb 3, 2021, 12:43 PM IST

ನವದೆಹಲಿ: ಹಕ್ಕಿಜ್ವರ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ದೆಹಲಿ ಮೃಗಾಲಯದಿಂದ ಮತ್ತೊಮ್ಮೆ ಹಕ್ಕಿಜ್ವರದ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.

ದೆಹಲಿ ಮೃಗಾಲಯದಿಂದ ಹಕ್ಕಿಜ್ವರ ಮಾದರಿಗಳ ಸಂಗ್ರಹ

ಮಾಹಿತಿಯ ಪ್ರಕಾರ, ಮೃಗಾಲಯದಿಂದ ಏಳು ಮಾದರಿಗಳನ್ನು ಪಡೆದು ಭೋಪಾಲ್‌ನ ರಾಷ್ಟ್ರೀಯ ಭದ್ರತಾ ಪ್ರಾಣಿಗಳ ರೋಗ ಸಂಸ್ಥೆಗೆ ಕಳುಹಿಸಲಾಗಿತ್ತು. ಜನವರಿ ಮಧ್ಯದಲ್ಲಿ ಗೂಬೆಯೊಂದು ಸತ್ತಿತ್ತು. ಈ ಹಿನ್ನೆಲೆಯಲ್ಲಿ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದೀಗ ಎಲ್ಲ ಮಾದರಿಗಳು ನೆಗೆಟಿವ್​ ಬಂದಿದೆ.

ಓದಿ: ಎಸಿಬಿ ದಾಳಿ ಅಂತ್ಯ.. ಏಕಕಾಲಕ್ಕೆ ಇಷ್ಟು ಕಡೆ ದಾಳಿ ನಡೆದಿರೋದು ಇತಿಹಾಸದಲ್ಲೇ ಮೊದಲು

ಮೃಗಾಲಯದಲ್ಲಿ ಸರ್ಕಾರ ಹೊರಡಿಸಿರುವ ಕೊರೊನಾದ ಎಲ್ಲ ಮಾರ್ಗ ಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ಪಕ್ಷಿಗಳ ನಡವಳಿಕೆ ಮತ್ತು ಆರೋಗ್ಯದ ಬಗ್ಗೆಯೂ ನಿರಂತರವಾಗಿ ನಿಗಾ ಇಡಲಾಗುತ್ತಿದೆ. ಮೃಗಾಲಯದಲ್ಲಿ ಕೀಟನಾಶಕಗಳನ್ನು ನಿರಂತರವಾಗಿ ಸಿಂಪಡಣೆ ಮಾಡಲಾಗುತ್ತಿದೆ ಎಂದು ದೆಹಲಿ ಮೃಗಾಲಯದ ನಿರ್ದೇಶಕ ರಮೇಶ್ ಕುಮಾರ್ ಪಾಂಡೆ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.