ಪಾಟ್ನಾ: ಗಡಿ ವಿಚಾರವಾಗಿ ಇದೇ ಮೊದಲ ಬಾರಿಗೆ ಭಾರತ ಮತ್ತು ನೇಪಾಳ ನಡುವೆ ವೈಮನಸ್ಯ ಶುರುವಾಗಿದೆ. ಇದಕ್ಕೆ ಸಂಬಂಧಿಸಿದ ಬೆಳವಣಿಗೆಗಳ ಮಧ್ಯೆ, ಭಾರತದ ಗಡಿಯಲ್ಲಿನ ಪಂಥೋಕಾ ಗ್ರಾಮದಲ್ಲಿ ನೇಪಾಳ ಗಸ್ತು ಟವರ್ ನಿರ್ಮಿಸಿದೆ. ಇದು ಉಭಯ ದೇಶಗಳ ಮಧ್ಯೆ ಹೊಸ ವಿವಾದ ಹುಟ್ಟು ಹಾಕುವ ಸಾಧ್ಯತೆಯನ್ನು ಸೃಷ್ಟಿಸಿದೆ.
ಗಡಿಯಲ್ಲಿನ ಪಿಲ್ಲರ್ ಸಂಖ್ಯೆ 392/13 ರಿಂದ 392/18ರ ನಡುವೆ ಈ ವಾಚ್ ಟವರ್ ನಿರ್ಮಿಸಲಾಗಿದೆ. ಚೀನಾ ಇತ್ತೀಚೆಗೆ ನೇಪಾಳದ ಹಳ್ಳಿಯನ್ನು ಆಕ್ರಮಿಸಿಕೊಂಡು, ಅದರ ಗಡಿ ಸ್ತಂಭಗಳನ್ನು ಕಿತ್ತು ಹಾಕಿದೆ. ಬಳಿಕ ಹಲವಾರು ನೇಪಾಳಿ ಪ್ರದೇಶಗಳನ್ನು ಅತಿಕ್ರಮಣ ಮಾಡಿತ್ತು. ಇದರ ಬೆನ್ನಲ್ಲೇ ಈ ವಾಚ್ ಟವರ್ ತಲೆ ಎತ್ತಿದೆ.
ಆದರೆ, ಗಡಿಯಲ್ಲಿ ನಿಯೋಜಿಸಲಾದ ಸಶಸ್ತ್ರ ಸೀಮಾ ಬಾಲ (ಎಸ್‌ಎಸ್‌ಬಿ) ಅಧಿಕಾರಿಗಳು ಗಡಿರೇಖೆಯಲ್ಲಿ ಮುಖ್ಯ ಮತ್ತು ಪೋಷಕ ಕಂಬಗಳ ನಡುವೆ ನಿರ್ಮಿಸಲಾಗಿದ್ದ ಸಣ್ಣ ಸ್ತಂಭವೊಂದು ಕಾಣೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.