ETV Bharat / bharat

ಬಿಹಾರ ಚುನಾವಣೆ ಹೊಸ್ತಿಲಲ್ಲಿ ಬಿಜೆಪಿಗೆ ಹೊಡೆತ: ಪಾಸ್ವಾನ್ ಪಕ್ಷ ಸೇರಿದ ಉಷಾ ವಿದ್ಯಾರ್ಥಿ - ಬಿಹಾರ ವಿಧಾನಸಭಾ ಚುನಾವಣೆ 2020

ವಿಧಾನಸಭಾ ಚುನಾವಣಾ ಹೊಸ್ತಿಲಲ್ಲಿದ್ದಾಗಲೇ ಬಿಹಾರದಲ್ಲಿ ಬಿಜೆಪಿಗೆ ಭಾರಿ ಹಿನ್ನಡೆಯಾಗಿದೆ. ಪಕ್ಷ ಸಂಘಟನೆಯಲ್ಲಿ ಸಕ್ರಿಯರಾಗಿದ್ದ ಇಬ್ಬರು ಹಿರಿಯ ನಾಯಕರು ಎಲ್​ಜೆಪಿಗೆ ಸೇರ್ಪಡೆಗೊಂಡಿದ್ದಾರೆ.

BJP leader joins LJP
ವಿದ್ಯಾರ್ಥಿ ಎಲ್​ಜೆಪಿಗೆ ಸೇರ್ಪಡೆ
author img

By

Published : Oct 7, 2020, 3:45 PM IST

Updated : Oct 7, 2020, 4:24 PM IST

ಪಾಟ್ನಾ (ಬಿಹಾರ): ಬಿಹಾರ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದೆ. ನಿತೇಶ್‌ ಕುಮಾರ್‌ ನೇತೃತ್ವದಲ್ಲಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುವ ವಿಶ್ವಾಸದಲ್ಲಿದೆ ಬಿಜೆಪಿ. ನಿನ್ನೆಯಷ್ಟೇ ಬಿಜೆಪಿ ಹಾಗು ಜೆಡಿಯು ನಡುವೆ ಸೀಟು ಹಂಚಿಕೆ ಕಾರ್ಯ ಯಾವುದೇ ತಕರಾರಿಲ್ಲದೆ ಪೂರ್ಣಗೊಂಡಿದೆ. ಇದರ ಬೆನ್ನಲ್ಲೇ ರಾಜ್ಯದಲ್ಲೀಗ ಪಕ್ಷಾಂತರ ಪರ್ವವೂ ಶುರುವಾಗಿದೆ. ರಾಜ್ಯದ ಪ್ರಸಕ್ತ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟದಿಂದ ಹೊರಬಂದಿರುವ ಎಲ್‌ಜೆಪಿ ಸ್ವತಂತ್ರವಾಗಿ ಕಣಕ್ಕಿಳಿದು ಸ್ಪರ್ಧಿಸಲು ತೀರ್ಮಾನಿಸಿದೆ. ಇವತ್ತು ಬಿಜೆಪಿಯ ಮಾಜಿ ಶಾಸಕಿ ಉಷಾ ವಿದ್ಯಾರ್ಥಿ ಲೋಕ​ಜನಶಕ್ತಿ (ಎಲ್​ಜೆಪಿ) ಪಕ್ಷ ಸೇರ್ಪಡೆಗೊಂಡಿದ್ದಾರೆ.

ಆರ್​​ಎಸ್​ಎಸ್‌ನಲ್ಲಿ ಗುರುತಿಸಿಕೊಂಡಿದ್ದ, ಬಿಜೆಪಿಯ ಹಿರಿಯ ನಾಯಕ ರಾಜೇಂದ್ರ ಸಿಂಗ್​​ ನಿನ್ನೆಯಷ್ಟೇ ಎಲ್​ಜೆಪಿಗೆ ಸೇರಿದ್ದರು. ಇಂದು ವಿದ್ಯಾರ್ಥಿ ಕೂಡ ಪಾಸ್ವಾನ್ ಪಕ್ಷ ಸೇರಿರೋದು ಬಿಜೆಪಿಗೆ ಹಿನ್ನಡೆಯಾಗಿದೆ. ಉಷಾ ವಿದ್ಯಾರ್ಥಿ ಪಾಲಿಗಂಜ್ ಕ್ಷೇತ್ರದಿಂದ ಜೆಡಿಯು ವಿರುದ್ಧ ಸ್ಪರ್ಧಿಸುತ್ತಾರೆ ಎನ್ನಲಾಗಿದೆ.

ಜೆಡಿಯು ಸ್ಪರ್ಧಿಸುವ ಕ್ಷೇತ್ರಗಳಲ್ಲಿ ಎಲ್​ಜೆಪಿ ಅಭ್ಯರ್ಥಿಗಳು ಕೂಡ ಸ್ಪರ್ಧಿಸುತ್ತಾರೆ ಮತ್ತು ಬಿಜೆಪಿ ವಿರುದ್ಧ ನಾವು ಸ್ಪರ್ಧಿಸುವುದಿಲ್ಲ. ಮುಂದಿನ ದಿನಗಳಲ್ಲಿ ಎಲ್​ಜೆಪಿ ಬೆಂಬಲದೊಂದಿಗೆ ಬಿಜೆಪಿ ಸರ್ಕಾರ ರಚಿಸುತ್ತದೆ ಎಂದು ಪರೋಕ್ಷವಾಗಿ ಸಿಎಂ ನಿತೀಶ್ ಕುಮಾರ್​ಗೆ ಪಾಸ್ವಾನ್ ಟಾಂಗ್ ನೀಡಿದ್ದಾರೆ.

ಅಕ್ಟೋಬರ್ 28 ರಿಂದ ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಬಿಜೆಪಿ-ಜೆಡಿಯು ಸೀಟು ಹಂಚಿಕೆಯ ಪ್ರಕಾರ, ಜೆಡಿಯುಗೆ 122 ಸ್ಥಾನ, ಬಿಜೆಪಿಗೆ 121 ಸ್ಥಾನಗಳ ಹೊಂದಾಣಿಕೆಯಾಗಿದೆ. ಎಲ್​ಜೆಪಿ ಯಾರಿಗೂ ಬೆಂಬಲಿಸದೆ, ಜೆಡಿಯು ಸ್ಪರ್ಧಿಸುವ ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧಿಸುವ ನಿರ್ಧಾರ ಕೈಗೊಂಡಿದೆ.

Last Updated : Oct 7, 2020, 4:24 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.