ETV Bharat / bharat

24 ಗಂಟೆಗಳಲ್ಲಿ 4,987 ಪ್ರಕರಣಗಳು ಪತ್ತೆ,  90 ಸಾವಿರದ ಗಡಿ ದಾಟಿದ ಸೋಂಕಿತರ ಸಂಖ್ಯೆ!

ಕಳೆದ 24 ಗಂಟೆಗಳಲ್ಲಿ ಮಹಾರಾಷ್ಟ್ರ ಹಾಗೂ ಗುಜರಾತ್​ನಲ್ಲಿ ಸಾವಿರಕ್ಕೂ ಅಧಿಕ ಕೋವಿಡ್​-19 ಕೇಸ್​ಗಳು ಪತ್ತೆಯಾಗಿವೆ. ಈ ಮೂಲಕ ಭಾರತದಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿದೆ.

biggest jump India's Covid Count
biggest jump India's Covid Count
author img

By

Published : May 17, 2020, 8:31 AM IST

Updated : May 17, 2020, 9:59 AM IST

ನವದೆಹಲಿ: ಕಳೆದ 24 ಗಂಟೆಗಳಲ್ಲಿ 4,987 ಹೊಸ ಕೊರೊನಾ ಪ್ರಕರಣಗಳು ದಾಖಲಾಗುವ ಮೂಲಕ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 90,927ಕ್ಕೆ ಏರಿಕೆಯಾಗಿದೆ. ಇನ್ನು 120 ಮೃತಪಟ್ಟಿದ್ದು, ಸಾವಿನ ಸಂಖ್ಯೆ 2872ಕ್ಕೆ ಏರಿಕೆಯಾಗಿದೆ.

ಸೋಂಕಿತರ ಪೈಕಿ 34,109 ಮಂದಿ ಗುಣಮುಖರಾಗಿದ್ದು, 53,946 ಕೇಸ್​ಗಳು ಸಕ್ರಿಯವಾಗಿವೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಮಹಾರಾಷ್ಟ್ರವೊಂದರಲ್ಲೇ ನಿನ್ನೆ 1606 ಪ್ರಕರಣಗಳು ಪತ್ತೆಯಾಗಿ ಮೊದಲ ಸ್ಥಾನದಲ್ಲಿದ್ದರೆ, ಎರಡನೇ ಸ್ಥಾನದಲ್ಲಿರುವ ಗುಜರಾತ್​ನಲ್ಲಿ ಸಾವಿರಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ಅಹಮದಾಬಾದ್​ ನಗರದಲ್ಲಿ ಒಟ್ಟು 709 ವ್ಯಾಪಾರಿಗಳಲ್ಲಿ ಸೋಂಕು ಕಾಣಿಸಿಕೊಂಡಿದೆ.

ಈ ಹಿಂದೆ ಪತ್ತೆಯಾದ ಪ್ರಕಣಗಳ ಸಂಖ್ಯೆಗೆ ಹೋಲಿಸಿದರೆ ಶನಿವಾರ ಒಂದೇ ದಿನ ಗುಜರಾತ್​ನಲ್ಲಿ 1,100 ಪ್ರಕರಣಗಳು ದಾಖಲಾಗಿದೆ.

Last Updated : May 17, 2020, 9:59 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.