ಮುಂಬೈ: ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಟ್ರೋಲ್ಗೆ ಒಳಗಾಗಿದ್ದಾರೆ. 9 ಗಂಟೆ 9 ನಿಮಿಷಕ್ಕೆ ದೀಪ ಹಚ್ಚುವಂತೆ ಮೋದಿ ಕರೆ ನೀಡಿದ್ದಕ್ಕೆ ಸಂಬಂಧಿಸಿದ್ದಕ್ಕೆ ರಿತಿಕಾ ಜೈನ್ ಎಂಬುವವರು ಟ್ವಿಟರ್ನಲ್ಲಿ ಫೋಟೋವೊಂದನ್ನು ಹಂಚಿಕೊಂಡಿದ್ದರು. ಹಿಂದೂಸ್ತಾನ ಜಗಮಗಿಸುತ್ತಿದೆ ಎಂದು ಬರಹದೊಂದಿಗೆ ವಿಶ್ವದ ಭೂಪಟದಲ್ಲಿ ಭಾರತದ ನಕ್ಷೆ ಹೊಳೆಯುತ್ತಿರುವ ಫೋಟೋವೊಂದನ್ನು ಹಂಚಿಕೊಂಡಿದ್ದರು.
-
The World sees us .. we are ONE .. https://t.co/68k9NagfkI
— Amitabh Bachchan (@SrBachchan) April 5, 2020 " class="align-text-top noRightClick twitterSection" data="
">The World sees us .. we are ONE .. https://t.co/68k9NagfkI
— Amitabh Bachchan (@SrBachchan) April 5, 2020The World sees us .. we are ONE .. https://t.co/68k9NagfkI
— Amitabh Bachchan (@SrBachchan) April 5, 2020
ಇದಕ್ಕೆ ರೀಟ್ವೀಟ್ ಮಾಡಿದ್ದ ಬಿಗ್ ಬಿ ಅಮಿತಾಬ್ ಬಚ್ಚನ್ ''ಜಗತ್ತು ನಮ್ಮನ್ನು ನೋಡುತ್ತಿದೆ. ನಾವೆಲ್ಲಾ ಒಂದು'' ಎಂದು ಬರೆದು ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದರು. ಕೆಲವೇ ನಿಮಿಷಗಳಲ್ಲಿ ಆ ಟ್ವೀಟ್ ವೈರಲ್ ಆಯ್ತು. ನಿಜವಾದ ಸ್ಯಾಟಲೈಟ್ ಇಮೇಜ್ ಎಂದು ಭಾವಿಸಿ ಬಿಗ್ ಬಿ ರೀಟ್ವೀಟ್ ಮಾಡಿದ್ದರೆಂದು ಹೇಳಲಾಗಿದೆ. ತುಂಬಾ ಮಂದಿ ಟ್ರೋಲ್ ಮಾಡಿದ್ದಾರೆ. ಅದ್ರಲ್ಲೊಬ್ಬ ನೆಟ್ಟಿಗ '' ಸರ್ ಕೈಯಿಂದ ಯಾರಾದರೂ ಫೋನ್ ತೆಗೆದುಕೊಳ್ಳಿ'' ಎಂದು ಬಿಗ್ ಬಿ ಕಾಲೆಳೆದಿದ್ದ. ಇದರ ಜೊತೆಗೆ ಇನ್ನೂ ಹಲವಾರು ಬಿಗ್ ಬಿಯನ್ನು ಟ್ರೋಲ್ ಮಾಡಿದ್ದಾರೆ.