ವಾಷಿಂಗ್ಟನ್(ಅಮೆರಿಕಾ): ಡೆಮಾಕ್ರಿಟಿಕ್ ಪಕ್ಷದಿಂದ ಅಮೆರಿಕಾ ಅಧ್ಯಕ್ಷೀಯ ಚುನಾವಣೆ ಅಭ್ಯರ್ಥಿಯಾಗಿ ಜೋ ಬಿಡೆನ್ ಅವರು ಸ್ಪರ್ಧಿಸಿ ಫ್ಲೋರಿಡಾ ಮತ್ತು ಇಲಿನಾಯ್ಸ್‌ನಲ್ಲಿ ಗೆಲುವು ಸಾಧಿಸಿದ್ದಾರೆ.
ಕಳೆದ ಕೆಲವು ವಾರಗಳಿಂದ ಅಮೆರಿಕಾದ ಜನರಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದ ಕೊರೊನಾ ವೈರಸ್ ಭೀತಿಯ ನಡುವೆಯೂ ಅಮೆರಿಕದ ಮಾಜಿ ಉಪಾಧ್ಯಕ್ಷರ ಚುನಾವಣೆ ಪ್ರಚಾರಕ್ಕೆ ಜನ ಬೆಂಬಲ ವ್ಯಕ್ತವಾಗುತ್ತಿದೆ. ಅತೀ ಕಡಿಮೆ ಅಂತರದಲ್ಲಿ ಬಿಡೆನ್ ಅವರು ತಮ್ಮ ಪ್ರತಿಸ್ಫರ್ಧಿ ಬರ್ನಿ ಸ್ಯಾಂಡರ್ಸ್ ವಿರುದ್ಧ ಗೆಲುವು ಸಾಧಿಸಿದ್ದಾರೆ.
ಇನ್ನು ಫ್ಲೋರಿಡಾ, ಇಲಿನಾಯ್ಸ್ ಮತ್ತು ಅರಿಜೋನಾದಲ್ಲಿ ಮಂಗಳವಾರ ಮತದಾನ ನಡೆಯಬೇಕಿದೆ. ಕೊರೊನಾ ವೈರಸ್ ಭೀತಿಯಿಂದ ಮತಗಟ್ಟೆಗಳ ಕುರಿತು ಆತಂಕ ವ್ಯಕ್ತವಾಗಿದ್ದು, ಓಹಿಯೋದಲ್ಲಿ ಮತದಾನವನ್ನು ಸ್ಥಗಿತಗೊಳಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ತಮ್ಮ ಪಕ್ಷದ ನಾಮನಿರ್ದೇಶನಕ್ಕಾಗಿ ಬಿಡೆನ್ ಅವರ ಹೆಸರು ಹೆಚ್ಚು ಕೇಳಿ ಬರುತ್ತಿದ್ದು, ನಾಮಿನಿಯಾಗಲು ಉಳಿದ ಅರ್ಧದಷ್ಟು ಪ್ರತಿನಿಧಿಗಳ ಅಗತ್ಯವಿದೆ. ನಮ್ಮ ಅಭಿಯಾನವು ಬಹಳ ಒಳ್ಳೆಯ ರೀತಿಯಲ್ಲಿ ನಡೆಯುತ್ತಿದ್ದು, ಡೆಮಾಕ್ರಟಿಕ್ ನಾಮನಿರ್ದೇಶನವನ್ನು ಪಡೆದುಕೊಳ್ಳಲು ಸ್ವಲ್ಪ ಹತ್ತಿರದಲ್ಲಿದೆ ಎಂದು ಬಿಡೆನ್ ಹೇಳಿದ್ದಾರೆ.