ETV Bharat / bharat

ಚೌಕೀದಾರ್​ ನರೇಂದ್ರ ಮೋದಿ': ತಮ್ಮ ನಾಯಕನ ಅನುಸರಿಸಿದ ಬಿಜೆಪಿ ಟ್ವಿಟ್ಟಿಗರು - ಟ್ವಿಟ್ಟರ್

ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿ ನಾಯಕರು ತಮ್ಮ ಟ್ವಿಟ್ಟರ್​ ಖಾತೆ ಹೆಸರಿನ ಮುಂದೆ ಚೌಕೀದಾರ್​ ಎಂದು ಬರೆದುಕೊಳ್ಳುತ್ತಿದ್ದಾರೆ

ಟ್ವಿಟ್ಟರ್​ ಖಾತೆ ಹೆಸರಿನ ಮುಂದೆ ಚೌಕೀದಾರ್​ ಎಂದು ಸೇರಿಸಿಕೊಳ್ಳುತ್ತಿರುವ ಬಿಜೆಪಿ ನಾಯಕರು
author img

By

Published : Mar 17, 2019, 1:53 PM IST

ನವದೆಹಲಿ: ನಾನು ದೇಶದ ಚೌಕೀದಾರ ಎಂದು ಹೇಳುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಇದೀಗ ಮೈ ಬೀ ಚೌಕೀದಾರ್​ ಎಂಬ ಅಭಿಯಾನಕ್ಕೆ ನಾಂದಿ ಹಾಡಿದ್ದಾರೆ. ಟ್ವಿಟ್ಟರ್​ನಲ್ಲಿ ಈ ಅಭಿಯಾನ ಸಾಕಷ್ಟು ಮನ್ನಣೆ ಪಡೆಯುತ್ತಿದೆ.

ಇದರ ಬೆನ್ನಲ್ಲೆ, ಪ್ರಧಾನಿ ನರೇಂದ್ರ ಮೋದಿ ಅವರ ತಮ್ಮ ಟ್ವಿಟ್ಟರ್​ ಖಾತೆಯ ಹೆಸರನ್ನು ಚೌಕೀದಾರ್​ ನರೇಂದ್ರ ಮೋದಿ ಎಂದು ಬದಲಿಸಿಕೊಂಡಿದ್ದಾರೆ. ಜತೆಗೆ ಬಿಜೆಪಿಯ ಅಧ್ಯಕ್ಷ ಅಮಿತ್​ ಶಾ ಸಹ ತಮ್ಮ ಖಾತೆಗೆ ಚೌಕೀದಾರ್​ ಅಮಿತ್​ ಶಾ ಎಂದು ಹೆಸರಿಟ್ಟಿದ್ದಾರೆ.

ಟ್ವಿಟ್ಟರ್ ಖಾತೆ ಹೆಸರು ಬದಲಿಸಿದ ಪ್ರಧಾನಿ, ನಿಮ್ಮ ಚೌಕೀದಾರ ದೇಶದ ರಕ್ಷಣೆಗೆ ನಿಂತಿದ್ದಾನೆ. ಆದರೆ ನಾನೊಬ್ಬನೇ ಅಲ್ಲ. ಭ್ರಷ್ಟಾಚಾರ, ಸಾಮಾಜಿಕ ದಾರಿದ್ರ್ಯದ ವಿರುದ್ಧ ಹೋರಾಡುವವರೆಲ್ಲಾ ಚೌಕೀದಾರರೇ. ದೇಶದ ಪ್ರಗತಿಗಾಗಿ ಶ್ರಮ ವಹಿಸುವವರೆಲ್ಲಾ ಚೌಕೀದಾರರೇ. ಇಂದು # Main Bhi Chowkidar ಎಂದು ಭಾರತೀಯರೆಲ್ಲಾ ಹೇಳುತ್ತಿದ್ದಾರೆ ಅಂತ ಮೋದಿ ಬರೆದುಕೊಂಡಿದ್ದಾರೆ.

ಇನ್ನು ತಮ್ಮ ನಾಯಕರ ಹಾದಿಯನ್ನೇ ಅನುಸರಿಸಿರುವ ಬಿಜೆಪಿ ಮುಖಂಡರು, ಕೇಂದ್ರ ಸಚಿವರು ತಮ್ಮ ಟ್ವಿಟ್ಟರ್​ ಖಾತೆ ಹೆಸರುಗಳ ಮುಂದೆ ಚೌಕೀದಾರ್ ಎಂದು ಸೇರಿಸಿದ್ದಾರೆ. ಈ ಮೂಲಕ ಕಾಂಗ್ರೆಸ್​ ಟೀಕೆಗೆ ಭಾರಿ ಟಾಂಗ್ ಕೊಡುತ್ತಿದ್ದಾರೆ.

Intro:Body:

ಚೌಕೀದಾರ್​ ನರೇಂದ್ರ ಮೋದಿ': ತಮ್ಮ ನಾಯಕನ ಅನುಸರಿಸಿದ ಬಿಜೆಪಿ ಟ್ವಿಟ್ಟಿಗರು

Bharatiya Janata Party amplifies 'Main Bhi Chowkidar' campaign ahead of Lok Sabha elections

ನವದೆಹಲಿ: ನಾನು ದೇಶದ ಚೌಕೀದಾರ ಎಂದು ಹೇಳುತ್ತಿದ್ದ ಪ್ರಧಾನಿ ನರೇಂದ್ರ  ಮೋದಿ ಇದೀಗ ಮೈ ಬೀ ಚೌಕೀದಾರ್​ ಎಂಬ ಅಭಿಯಾನಕ್ಕೆ ನಾಂದಿ ಹಾಡಿದ್ದಾರೆ. ಟ್ವಿಟ್ಟರ್​ನಲ್ಲಿ ಈ ಅಭಿಯಾನ ಸಾಕಷ್ಟು ಮನ್ನಣೆ ಪಡೆಯುತ್ತಿದೆ. 

ಇದರ ಬೆನ್ನಲ್ಲೆ, ಪ್ರಧಾನಿ ನರೇಂದ್ರ ಮೋದಿ ಅವರ ತಮ್ಮ ಟ್ವಿಟ್ಟರ್​ ಖಾತೆಯ ಹೆಸರನ್ನು ಚೌಕೀದಾರ್​ ನರೇಂದ್ರ ಮೋದಿ ಎಂದು ಬದಲಿಸಿಕೊಂಡಿದ್ದಾರೆ. ಜತೆಗೆ ಬಿಜೆಪಿಯ ಅಧ್ಯಕ್ಷ ಅಮಿತ್​ ಶಾ ಸಹ ತಮ್ಮ ಖಾತೆಗೆ ಚೌಕೀದಾರ್​ ಅಮಿತ್​ ಶಾ ಎಂದು ಹೆಸರಿಟ್ಟಿದ್ದಾರೆ. 

ಟ್ವಿಟ್ಟರ್ ಖಾತೆ ಹೆಸರು ಬದಲಿಸಿದ ಪ್ರಧಾನಿ, ನಿಮ್ಮ ಚೌಕೀದಾರ ದೇಶದ ರಕ್ಷಣೆಗೆ ನಿಂತಿದ್ದಾನೆ. ಆದರೆ ನಾನೊಬ್ಬನೇ ಅಲ್ಲ. ಭ್ರಷ್ಟಾಚಾರ, ಸಾಮಾಜಿಕ ದಾರಿದ್ರ್ಯದ ವಿರುದ್ಧ ಹೋರಾಡುವವರೆಲ್ಲಾ ಚೌಕೀದಾರರೇ. ದೇಶದ ಪ್ರಗತಿಗಾಗಿ ಶ್ರಮ ವಹಿಸುವವರೆಲ್ಲಾ ಚೌಕೀದಾರರೇ. ಇಂದು # Main Bhi Chowkidar ಎಂದು ಭಾರತೀಯರೆಲ್ಲಾ ಹೇಳುತ್ತಿದ್ದಾರೆ ಅಂತ ಮೋದಿ ಬರೆದುಕೊಂಡಿದ್ದಾರೆ. 

ಇನ್ನು ತಮ್ಮ ನಾಯಕರ ಹಾದಿಯನ್ನೇ ಅನುಸರಿಸಿರುವ ಬಿಜೆಪಿ  ಮುಖಂಡರು, ಕೇಂದ್ರ ಸಚಿವರು ತಮ್ಮ ಟ್ವಿಟ್ಟರ್​ ಖಾತೆ ಹೆಸರುಗಳ ಮುಂದೆ ಚೌಕೀದಾರ್ ಎಂದು ಸೇರಿಸಿದ್ದಾರೆ. ಈ ಮೂಲಕ ಕಾಂಗ್ರೆಸ್​ ಟೀಕೆಗೆ ಭಾರಿ ಟಾಂಗ್ ಕೊಡುತ್ತಿದ್ದಾರೆ. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.