ETV Bharat / bharat

ಕೋವಿಶೀಲ್ಡ್​ ಬೆನ್ನಲ್ಲೇ ಭಾರತ್​ ಬಯೋಟೆಕ್​​ನ 'ಕೋವ್ಯಾಕ್ಸಿನ್'​ ಸಾಗಾಣೆಗೆ ಸಿದ್ಧ! - ಹೈದರಾಬಾದ್​ ವಿಮಾನ ನಿಲ್ದಾಣಕ್ಕೆ ಲಸಿಕೆ ರವಾನೆ

ಭಾರತ್​ ಬಯೋಟೆಕ್​ನಿಂದ ಅಭಿವೃದ್ಧಿಗೊಂಡಿರುವ ಕೋವ್ಯಾಕ್ಸಿನ್​ ಲಸಿಕೆ ಇದೀಗ ಎಲ್ಲೆಡೆ ಸಾಗಾಣೆಯಾಗಲು ಸಿದ್ಧಗೊಂಡಿದ್ದು, ಇದಕ್ಕೆ ಸಂಬಂಧಿಸಿದಂತೆ ಹೈದರಾಬಾದ್​ ವಿಮಾನ ನಿಲ್ದಾಣಕ್ಕೆ ವ್ಯಾಕ್ಸಿನ್​ ರವಾನೆ ಮಾಡುವುದಾಗಿ ಇ-ಮೇಲ್​ ಕಳುಹಿಸಲಾಗಿದೆ.

Covaxin
Covaxin
author img

By

Published : Jan 12, 2021, 4:10 PM IST

ಹೈದರಾಬಾದ್​: ಸೆರಂ ಇನ್ಸ್​ಟಿಟ್ಯೂಟ್​ ಆಫ್​ ಇಂಡಿಯಾದಿಂದ ಅಭಿವೃದ್ಧಿಗೊಂಡಿರುವ ಕೋವಿಶೀಲ್ಡ್ ಲಸಿಕೆ ಈಗಾಗಲೇ ಎಲ್ಲಾ ರಾಜ್ಯಗಳಲ್ಲೂ ಹಂಚಿಕೆಯಾಗಿದ್ದು, ಇದರ ಬೆನ್ನಲ್ಲೇ ಇದೀಗ ಭಾರತ್​ ಬಯೋಟೆಕ್​ನ ಕೋವ್ಯಾಕ್ಸಿನ್​ ಲಸಿಕೆ ಕೂಡ ಸಾಗಾಣೆಯಾಗಲು ಸಿದ್ಧಗೊಂಡಿದೆ.

ಓದಿ: ದೇಶದ ಎಲ್ಲರಿಗೂ ಲಸಿಕೆ ನೀಡುವುದು ನಮ್ಮ ಮುಂದಿರುವ ಸವಾಲು​: ಭಾರತದ ಸೆರಂ ಇನ್ಸ್​ಟಿಟ್ಯೂಟ್​

ತುರ್ತು ಸಂದರ್ಭಗಳಲ್ಲಿ ಬಳಕೆ ಮಾಡಲು ಕೋವಿಶೀಲ್ಡ್​ ಈಗಾಗಲೇ ಅನುಮತಿ ಪಡೆದುಕೊಂಡಿದ್ದು, ಇದರ ಬೆನ್ನಲ್ಲೇ ಹೈದರಾಬಾದ್​ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇಂದು ಸಂಜೆ ರವಾನೆಗೊಳ್ಳಲಿದೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇಂದು ಬೆಳ್ಳಗ್ಗೆ ಸೆರಂ ಇನ್ಸ್​ಟಿಟ್ಯೂಟ್​ನಿಂದ 970 ಕೆಜಿ ಕೋವಿಶೀಲ್ಡ್​ ಲಸಿಕೆ ನಮ್ಮ ವಿಮಾನ ನಿಲ್ದಾಣಕ್ಕೆ ಬಂದಿದೆ. ಇದೀಗ ಭಾರತ್​ ಬಯೋಟೆಕ್​ನ ಲಸಿಕೆ ಕೂಡ ಸಂಜೆ ಆಗಮಿಸಲಿದೆ ಎಂದು ತಿಳಿಸಿದೆ. ಇದಕ್ಕೆ ಸಂಬಂಧಿಸಿದಂತೆ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಭಾರತ್ ಬಯೋಟೆಕ್​ನಿಂದ ಇ-ಮೇಲ್​ ಸಂದೇಶ ಬಂದಿದೆ ಎಂದ ಅವರು ಮಾಹಿತಿ ನೀಡಿದ್ದಾರೆ.

ಭಾರತ್​ ಬಯೋಟೆಕ್​ನ ಕೋವ್ಯಾಕ್ಸಿನ್​ 3ನೇ ಹಂತದ ಕ್ಲಿನಿಕಲ್​ ಪ್ರಯೋಗಕ್ಕಾಗಿ ಭಾರತ್ ಬಯೋಟೆಕ್​ 25,800 ಅಧಿಕ ಸ್ವಯಂ ಸೇವಕರ ನೇಮಕ ಮಾಡಿಕೊಂಡಿದೆ. ಜನವರಿ 16ರಿಂದ ದೇಶಾದ್ಯಂತ ಕೋವಿಡ್ ಲಸಿಕೆ ಹಂಚಿಕೆ ಮಾಡಲು ನಿರ್ಧರಿಸಲಾಗಿದ್ದು, ಇಂದು ಬೆಳಗ್ಗೆಯಿಂದಲೇ ವಿವಿಧ ರಾಜ್ಯಗಳಿಗೆ ಸೆರಂ ಇನ್ಸ್​ಟಿ​ಟ್ಯೂಟ್​ನಿಂದ ಲಸಿಕೆ ರವಾನೆಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.