ETV Bharat / bharat

ಕೊರೊನಾದಿಂದ ಪಾರಾಗಲು ಬಾಂಗ್ಲಾದಿಂದ 65 ಸಾವಿರ ಕೋಟಿ ರೂಪಾಯಿಗಳ ಆರ್ಥಿಕ ಪ್ಯಾಕೇಜ್​ - covid-19

ಬಾಂಗ್ಲಾದೇಶದಲ್ಲಿ ಕೊರೊನಾ ಕಾಣಿಸಿಕೊಂಡಿದ್ದು ಸೋಂಕಿತ ಸಂಖ್ಯೆ ಶತಕ ಮುಟ್ಟುತ್ತಿದೆ. ಈಗಾಗಲೇ ಎಚ್ಚೆತ್ತುಕೊಂಡಿರುವ ಬಾಂಗ್ಲಾ ಸರ್ಕಾರ ಅನೇಕ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಈಗ ಸುಮಾರು 65,516 ಕೋಟಿ ರೂಪಾಯಿಯ ಆರ್ಥಿಕ ಪ್ಯಾಕೇಜ್​ ಅನ್ನು ಘೋಷಣೆ ಮಾಡಲಾಗಿದೆ.

Bangladesh Prime Minister Sheikh Hasina
ಬಾಂಗ್ಲಾ ಪ್ರಧಾನಿ ಶೇಖ್​ ಹಸೀನಾ
author img

By

Published : Apr 5, 2020, 7:17 PM IST

ಢಾಕಾ( ಬಾಂಗ್ಲಾದೇಶ): ಕೊರೊನಾ ಹಾವಳಿಯಿಂದ ದೇಶವನ್ನು ಪಾರು ಮಾಡಲು ಬಾಂಗ್ಲಾ ಪ್ರಧಾನಿ ಶೇಖ್​ ಹಸೀನಾ 72,750 ಕೋಟಿ ಟಕಾ ಅಂದರೆ 65,516 ಕೋಟಿ ರೂಪಾಯಿಯ ಆರ್ಥಿಕ ಪ್ಯಾಕೇಜ್​ ಅನ್ನು ಘೋಷಣೆ ಮಾಡಿದ್ದಾರೆ.

ಮೊದಲಿಗೆ 4,502 ಕೋಟಿ ರೂಪಾಯಿಯ ತುರ್ತು ಹಣಕಾಸನ್ನು ಘೋಷಣೆ ಮಾಡಲಾಗಿತ್ತು. ಈ ಹಣದಲ್ಲಿ ರಫ್ತು ಆಧಾರಿತ ಉದ್ಯಮಗಳ ನೌಕರರಿಗೆ ವೇತನವನ್ನು ನೀಡಲಾಗಿತ್ತು. ಇಂದು 61,013 ಕೋಟಿಯನ್ನು ಘೋಷಣೆ ಮಾಡಲಾಗಿದೆ. ಇದು ಒಟ್ಟು 72,750 ಕೋಟಿ ರೂಪಾಯಿಗಳ ಆರ್ಥಿಕ ಪ್ಯಾಕೇಜ್​ ಆಗಿದೆ.

ತಮ್ಮ ಗೃಹಕಚೇರಿ ಗನೋಬಾಭನ್​ ಈ ಘೋಷಣೆ ಮಾಡಿದ್ದು, ಇದು ಬಾಂಗ್ಲಾದೇಶದ ಜಿಡಿಪಿಯ ಶೇಕಡಾ 2.52ರಷ್ಟಿದೆ. ನಮ್ಮ ಆರ್ಥಿಕತೆ ಮತ್ತೆ ಚೇತರಿಕೆಗೊಳ್ಳುತ್ತದೆ ಎಂಬ ಭರವಸೆಯಿದೆ ಎಂದು ಶೇಖ್​ ಹಸೀನಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಜೊತೆಗೆ ಕೊರೊನಾ ಮಹಾಮಾರಿಯಿಂದ ವಿಶ್ವವನ್ನು ದೇವರು ಕಾಪಾಡಲಿ ಎಂದು ಪ್ರಾರ್ಥಿಸಿದ್ದಾರೆ.

ಬಾಂಗ್ಲಾದೇಶದಲ್ಲಿ ಈವರೆಗೂ 99 ಕೊರೊನಾ ಸೋಂಕಿತರು ಪತ್ತೆಯಾಗಿದ್ದು, 9 ಮಂದಿ ಸಾವನ್ನಪ್ಪಿದ್ದಾರೆ. 30 ಮಂದಿಗೆ ಚಿಕಿತ್ಸೆ ನೀಡಲಾಗಿದ್ದು, ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಚ್​ ಆಗಿದ್ದಾರೆ. ಈಗಾಗಲೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು ರಾಷ್ಟ್ರಾದ್ಯಂತ ಸಾರಿಗೆ ವ್ಯವಸ್ಥೆಯನ್ನು ಏಪ್ರಿಲ್​ 11ರವರೆಗೆ ಬಂದ್ ಮಾಡಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.