ETV Bharat / bharat

ಹಣ ದುರುಪಯೋಗ ಆರೋಪ:  ಯುಟೂಬರ್ ವಾಸನ್ ವಿರುದ್ಧ ಕಾಂತಾ ದೂರು - ಬಾಬಾ ಕಾ ಧಾಬಾ ಮಾಲೀಕ ಕಾಂತಾ ಪ್ರಸಾದ್​ರಿಂದ ಯುಟೂಬರ್ ವಾಸನ್ ವಿರುದ್ದ ದೂರು

ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸದ್ದು ಮಾಡಿದ್ದ ದೆಹಲಿಯ ಬಾಬಾ ಕಾ ಢಾಬಾ ಹೋಟೆಲ್ ಮಾಲೀಕ ಕಾಂತಾ ಪ್ರಸಾದ್, ಇನ್​ಸ್ಟಾಗ್ರಾಮ್​ನಲ್ಲಿ ತಮ್ಮ ವಿಡಿಯೋ ಹರಿಬಿಟ್ಟಿದ್ದ ಗೌರವ್ ವಾಸನ್ ವಿರುದ್ಧ ಹಣ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿ, ಮಾಲ್ವಿಯಾ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಬಾಬಾ ಕಾ ಧಾಬಾ ಮಾಲೀಕ ಕಾಂತಾ ಪ್ರಸಾದ್​ರಿಂದ ಯುಟೂಬರ್ ವಾಸನ್ ವಿರುದ್ಧ ದೂರು

author img

By

Published : Nov 2, 2020, 10:06 AM IST

ನವದೆಹಲಿ: ದಕ್ಷಿಣ ದೆಹಲಿಯ ಮಾಲ್ವಿಯಾ ನಗರದ ಜನಪ್ರಿಯ ಉಪಹಾರ ಗೃಹ ಬಾಬಾ ಕಾ ಢಾಬಾ ಮಾಲೀಕ ಕಾಂತಾ ಪ್ರಸಾದ್ ಅವರು ಇನ್​ಸ್ಟಾಗ್ರಾಮ್​ನಲ್ಲಿ ವಿಡಿಯೋ ಹರಿಬಿಟ್ಟಿದ್ದ ಗೌರವ್ ವಾಸನ್ ವಿರುದ್ಧ ಹಣ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ್ದಾರೆ.

ಪೊಲೀಸರಿಗೆ ನೀಡಿದ ದೂರಿನಲ್ಲಿ, ಪ್ರಸಾದ್ ಅವರು ವಾಸನ್ ತಮ್ಮ ವಿಡಿಯೋ ಚಿತ್ರೀಕರಿಸಿ ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ್ದಾರೆ ಮತ್ತು ಉಪಹಾರ ಗೃಹ ಮಾಲೀಕರಿಗೆ ಹಣವನ್ನು ದೇಣಿಗೆ ನೀಡುವಂತೆ ಸಾಮಾಜಿಕ ಮಾಧ್ಯಮದಲ್ಲಿ ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಆದರೆ ವಾಸನ್ ತನ್ನ ಮತ್ತು ಅವನ ಕುಟುಂಬ/ಸ್ನೇಹಿತರ ಬ್ಯಾಂಕ್ ವಿವರಗಳು ಮತ್ತು ಮೊಬೈಲ್ ಸಂಖ್ಯೆಗಳನ್ನು ಮಾತ್ರ ದಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ನನಗೆ ಯಾವುದೇ ಮಾಹಿತಿ ನೀಡದೇ ಅಪಾರ ಪ್ರಮಾಣದ ದೇಣಿಗೆ ಸಂಗ್ರಹಿಸಿದ್ದಾರೆ. ಮತ್ತು ಇ ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

ಮಾಲ್ವಿಯಾ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಈ ಪ್ರಕರಣದಲ್ಲಿ ಇನ್ನೂ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ ಎಂದು ಉಪ ಪೊಲೀಸ್ ಆಯುಕ್ತ (ದಕ್ಷಿಣ) ಅತುಲ್ ಕುಮಾರ್ ಠಾಕೂರ್ ತಿಳಿಸಿದ್ದಾರೆ.

ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ದೆಹಲಿಯ ಬಾಬಾ ಕಾ ಢಾಬಾ ಸುದ್ದಿಯಾಗಿತ್ತು. ಲಾಕ್​ಡೌನ್​ ಸಮಯದಲ್ಲಿ ಬಾಬಾ ಕಾ ಢಾಬಾ ಎಂಬ ಪುಟ್ಟ ಬೀದಿ ಬದಿಯ ಹೋಟೆಲ್​ ಮಾಲೀಕ ಕಾಂತಾ ಪ್ರಸಾದ್ ಅನುಭವಿಸಿದ ಕಷ್ಟಗಳ ಬಗ್ಗೆ ಅಳಲು ತೋಡಿಕೊಂಡಿದ್ದ ವಿಡಿಯೋ ನೆಟ್ಟಿಗರ ಮನ ಗೆದ್ದಿತ್ತು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.