ETV Bharat / bharat

ಬಗೆಹರಿಯುವತ್ತ ಏಳು ದಶಕಗಳ ಕಗ್ಗಂಟು! ಭಾರತೀಯರು ಮಾಡಬೇಕಾಗಿರೋದೇನು..? - Ayodhya has turned into a fortress ahead

ಸುಮಾರು ಏಳು ದಶಕದಿಂದ ಭಾರತದಲ್ಲಿ ಕಗ್ಗಂಟಾಗಿದ್ದ ಅಯೋಧ್ಯೆ ವಿವಾದಕ್ಕೆ ಅಂತ್ಯ ಹಾಡುವ ದಿನಗಳು ತುಂಬಾ ಹತ್ತಿರವಿದ್ದಾವೆ. ಯಾರ ಪರ ತೀರ್ಪು ಬರುತ್ತದೆ ಎಂಬ ಕುತೂಹಲದ ನಡುವೆ ಹಲವು ಊಹೆಗಳು ಹಾಗೂ ಆತಂಕಗಳೂ ಭಾರತೀಯರಲ್ಲಿ ಮನೆ ಮಾಡಿವೆ.

Ayodhya verdict announce tomorrow
author img

By

Published : Nov 8, 2019, 10:36 PM IST

ಸುಮಾರು ಏಳು ದಶಕದಿಂದ ಭಾರತದಲ್ಲಿ ಕಗ್ಗಂಟಾಗಿದ್ದ ಅಯೋಧ್ಯ ವಿವಾದಕ್ಕೆ ಅಂತ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಯಾರ ಪರವಾಗಿ ತೀರ್ಪು ಬರುತ್ತದೆ ಎಂಬುವ ಕುತೂಹಲದ ನಡುವೆ ಹಲವು ಊಹೆಗಳು ಹಾಗೂ ಆತಂಕಗಳೂ ಭಾರತೀಯರಲ್ಲಿ ಮನೆ ಮಾಡಿವೆ. ತೀರ್ಪು ಯಾರ ಪರವಾಗಿ ಬಂದರೂ ಮುಂದಿನ ಪೀಳಿಗೆಯ ಜನರ ಮೇಲೆ ಹಾಗೂ ರಾಜಕೀಯದ ಮೇಲೆ ದೊಡ್ಡಮಟ್ಟದ ಪರಿಣಾಮಗಳನ್ನು ಬೀರಲಿದೆ ಎಂಬುದು ಅಯೋಧ್ಯ ಪ್ರಕರಣದಲ್ಲಿ ಮುಸ್ಲಿಂ ಸಮುದಾಯದ ಪರ ವಾದ ಮಂಡಿಸಿದ ಹಿರಿಯ ವಕೀಲ ರಾಜೀವ್ ಧವನ್​ ಹೇಳುವ ಮಾತು. ಈ ಕುರಿತು ಸುಪ್ರೀಂಕೋರ್ಟ್​ಗೆ ಲಿಖಿತ ಟಿಪ್ಪಣಿಯನ್ನು ಕೂಡ ಕೊಟ್ಟಿದ್ದಾರೆ.

ಸಾಮಾಜಿಕ ಹಾಗೂ ರಾಜಕೀಯದಲ್ಲಿ ಕೋಲಾಹಲ ಉಂಟುಮಾಡುವ ತಾಕತ್ತಿರೋ ಈ ತೀರ್ಪಿನ ವಿಚಾರಣೆಗೆ ಸುಪ್ರೀಂಕೋರ್ಟ್​ ತೆಗೆದುಕೊಂಡಿದ್ದ ಕಾಲ ಬರೋಬ್ಬರಿ 40 ದಿನಗಳು. ಈ ಸುದೀರ್ಘ ವಿಚಾರಣೆ ನಂತರ ಎಲ್ಲಾ ಸಮುದಾಯಗಳ ವಾದ-ವಿವಾದಗಳನ್ನು ಆಲಿಸಿ ಸುಪ್ರೀಂಕೋರ್ಟ್​ ಪ್ರಕಟಿಸಲಿದೆ. ಇನ್ನೊಂದು ವಿಶೇಷತೆ ಅಂದ್ರೆ ಸುಪ್ರೀಂಕೋರ್ಟ್​​ನ ಮುಖ್ಯನ್ಯಾಯಮೂರ್ತಿ ರಂಜನ್ ಗೊಗಾಯ್ ಅವರು ನವೆಂಬರ್ 17ರಂದು ನಿವೃತ್ತರಾಗಲಿದ್ದು, ಆದ್ದರಿಂದ ನಾಳೆ(ಶನಿವಾರ) ಪ್ರಕಟಗೊಳ್ಳಲಿರುವ ಈ ತೀರ್ಪು ತೀವ್ರ ಕುತೂಹಲ ಮೂಡಿಸಿದೆ.

ಧಾರ್ಮಿಕವಾಗಿ ಸಾಕಷ್ಟು ಚರ್ಚೆಗಳಿಗೆ ಹಾಗೂ ವಿವಾದಗಳಿಗೆ ಈ ತೀರ್ಪು ಕಾರಣವಾಗುವ ಅನುಮಾನಗಳೂ ಇದಾವೆ. ಇದೇ ಕಾರಣದಿಂದ ಕೇಂದ್ರ ಸರ್ಕಾರ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಅಯೋಧ್ಯೆ ಇರುವ ಉತ್ತರ ಪ್ರದೇಶದಲ್ಲಿ ಭದ್ರತೆಗಾಗಿ 4000 ಸೈನಿಕರನ್ನು ರವಾನಿಸಿದೆ. ಅಲ್ಲಿನ ಸರ್ಕಾರವೂ ಸುಮ್ಮನೆ ಕುಳಿತಿಲ್ಲ. ಸೂಕ್ಷ್ಮ ಹಾಗೂ ಪ್ರಚೋದನಕಾರಿ ಸ್ಥಳಗಳನ್ನು ಪರಿಶೀಲಿಸಿ ಶಾಂತಿ ಕಾಪಾಡುವ ಸಲುವಾಗಿ 16 ಸಾವಿರ ಸ್ವಯಂ ಸೇವಕರನ್ನು ನೇಮಿಸಿದೆ. ಅಷ್ಟೇ ಅಲ್ಲದೆ ಫೈಜಾಬಾದ್ ಪೊಲೀಸರು ತಮ್ಮ ಜಿಲ್ಲೆಯಲ್ಲಿ ಸ್ವಯಂ ಸೇವಕರನ್ನು ನಿಯೋಜಿಸಿ ಮುನ್ನೆಚ್ಚರಿಕೆ ಕೈಗೊಂಡಿದೆ.

ಈಗಾಗಲೇ ಮಾಧ್ಯಮಗಳಲ್ಲಿ ಈ ಕುರಿತ ಸುದ್ದಿಗಳು ಬರಬಾರದು ಎಂಬ ಕಾರಣಕ್ಕೆ ನ್ಯೂಸ್​ ಬ್ರಾಡ್​ಕಾಸ್ಟಿಂಗ್​​​ ಸ್ಟ್ಯಾಂಡರ್ಡ್ಸ್​​ ಅಥಾರಿಟಿಯು ಮಾಧ್ಯಮಗಳಿಗೆ ನಿರ್ದೇಶನ ನೀಡಿದೆ. ಮೂರು ವಾರಗಳ ಹಿಂದೆಯೇ ಮಸೀದಿ ಉರುಳಿಸುವ ದೃಶ್ಯಗಳನ್ನು ಪ್ರಸಾರ ಮಾಡಬಾರದೆಂದು ಸೂಚಿಸಿದೆ. ಆರ್‌ಎಸ್‌ಎಸ್, ಬಿಜೆಪಿ ಮುಖಂಡರು, ಜಮೈತ್​ ಉಲಾಮಾ-ಐ-ಹಿಂದ್ ಮತ್ತು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಸದಸ್ಯರು ಭಾಗವಹಿಸಿ ನ್ಯಾಯಾಲಯದ ತೀರ್ಪು ಏನೇ ಬಂದರೂ ಅದನ್ನು ಸ್ವೀಕರಿಸುವುದಾಗಿ ಘೋಷಿಸಿದ್ದಾರೆ. ತೀರ್ಪಿನ ನಂತರ ಅಹಿಂಸಾತ್ಮಕ ಕೃತ್ಯಗಳಲ್ಲಿ ತೊಡಗದಂತೆ ತಮ್ಮ ಸಮುದಾಯದವರಿಗೆ ಮನವಿ ಮಾಡುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

ಅಯೋಧ್ಯೆಯ ತೀರ್ಪು ದಶಕಗಳ ಸುದೀರ್ಘ ಭಿನ್ನಾಭಿಪ್ರಾಯಕ್ಕೆ ಅಂತ್ಯ ಹಾಡುತ್ತದೆ ಎಂದು ಹಿಂದೂ ಹಾಗೂ ಮುಸ್ಲಿಂ ಮುಖಂಡರ ಆಶಾವಾದ. ಕರಸೇವಕರು ಬಾಬ್ರಿ ಮಸೀದಿಯನ್ನು ಉರುಳಿಸಿದ ನಂತರ ಆಗಿನ ಪ್ರಧಾನಿಯಾಗಿದ್ದ ಪಿ.ವಿ.ನರಸಿಂಹರಾಯರು ರಾಷ್ಟ್ರಪತಿ ಸಲಹೆ ಮೇರೆಗೆ ಸುಪ್ರೀಂಕೋರ್ಟ್​​ಗೆ ಈ ವಿವಾದವನ್ನು ಬಗೆಹರಿಸುವ ಜವಾಬ್ದಾರಿ ವಹಿಸಿದ್ದರು. ಆಗ ಸರ್ಕಾರಕ್ಕೆ ಬೇಕಾಗಿದ್ದು ಬಾಬ್ರಿ ಮಸೀದಿಯನ್ನು 1992ರ ಡಿಸೆಂಬರ್​ 6ರಂದು ಕರಸೇವಕರು ಕೆಡವೋದಕ್ಕೆ ಮೊದಲು ಅಲ್ಲಿ ಹಿಂದೂ ದೇವಾಲಯವಿತ್ತೆ ಎಂಬುವ ಪ್ರಶ್ನೆಗೆ ಉತ್ತರ ಮಾತ್ರ. ಆದ್ರೆ ರಾಷ್ಟ್ರೀಯ ಸಮಗ್ರತೆಗೆ ಧಕ್ಕೆ ತರುತ್ತದೆ ಎಂಬ ಕಾರಣಕ್ಕೆ ಸುಪ್ರೀಂಕೋರ್ಟ್​ ಈ ಪ್ರಕರಣವನ್ನು ತೆಗದುಕೊಳ್ಳಲು ಹಿಂದೇಟು ಹಾಕಿತು.

ಈಗ ಸುಮಾರು 25 ವರ್ಷಗಳ ನಂತರ ಅಯೋಧ್ಯೆ ತೀರ್ಪು ಕೊನೆಯ ಘಟ್ಟ ತಲುಪಿದೆ. ಎಲ್ಲಾ ವಾದಿ ಮತ್ತು ಪ್ರತಿವಾದಿಗಳ ವಿಚಾರಣೆ 180 ಗಂಟೆಗಳ ಕಾಲ ನಡೆದಿದೆ. 40 ದಿನಗಳಲ್ಲಿ ಮೊದಲ 15 ದಿನಗಳನ್ನು ಹಿಂದೂ ಸಮುದಾಯಕ್ಕೆ, ನಂತರದ 20 ದಿನಗಳನ್ನು ಮುಸ್ಲಿಂ ಸಮುದಾಯಕ್ಕೆ ವಿಚಾರಣೆಗೆ ಮೀಸಲಿಟ್ಟಿತ್ತು. ಉಳಿದ 5 ದಿನಗಳನ್ನು ಪ್ರತಿವಾದಗಳನ್ನು ಕೇಳುವ ಸಲುವಾಗಿ ನಿಗದಿ ಮಾಡಲಾಗಿತ್ತು.

ಹಿಂದೂ ಸಮುದಾಯ ಸುಪ್ರೀಂಕೋರ್ಟ್​ನಲ್ಲಿ ಮಂಡಿಸಿದ ವಾದದ ಪ್ರಕಾರ ರಾಜಾ ವಿಕ್ರಮಾದಿತ್ಯನು ಶತಮಾನಗಳ ಹಿಂದೆ ದೇವಾಲಯವೊಂದನ್ನು ನಿರ್ಮಿಸಿದ್ದ. ಅದೇ ದೇವಾಲಯವನ್ನು 11ನೇ ಶತಮಾನದಲ್ಲಿ ಪುನರ್​​ ನಿರ್ಮಿಸಲಾಗಿತ್ತು. ಭಾರತದ ಮೇಲೆ ಬಾಬರ್​ ದಾಳಿ ಮಾಡಿದಾಗ 1526ರಲ್ಲಿ ಆ ದೇವಾಲಯವನ್ನು ಒಡೆದು ಮಸೀದಿಯನ್ನು ನಿರ್ಮಿಸಿದ್ದಾನೆ ಎಂದು ವಾದಿಸಿವೆ. 1993ರಲ್ಲಿ ಭಾರತೀಯ ಪುರಾತತ್ವ ಇಲಾಖೆ ಕೂಡಾ ಇಲ್ಲೊಂದು ದೇವಾಲಯ ಇತ್ತು ಎಂಬುದಾಗಿ ಹೇಳಿತ್ತು. ಆದರೆ, ಮುಸ್ಲಿಂ ಸಮುದಾಯ ಎಲ್ಲಾ ಸರ್ಕಾರಿ ಗೆಜೆಟ್​ಗಳಲ್ಲಿ ಮಸೀದಿಯ ಬಗ್ಗೆ ಪ್ರಸ್ತಾಪವಿದೆ, ಹಿಂದೂ ದೇವಾಲಯ ಇರುವುದಕ್ಕೆ ಯಾವುದೇ ದಾಖಲಾತಿ ಇಲ್ಲ ಎಂದು ಹೇಳುವುದು ಮಾತ್ರವಲ್ಲದೆ ಪುರಾತತ್ವ ಇಲಾಖೆಯ ವರದಿಯನ್ನೂ ಅಲ್ಲೆಗಳೆದಿತ್ತು.

''4500 ಚದರ ಅಡಿ ಇರುವ ಈ ತುಂಡು ಭೂಮಿಯಲ್ಲಿ ನಡೆದಾಡುವುದಕ್ಕೆ ದೇವತೆಗಳೂ ಕೂಡ ಭಯ ಪಡುತ್ತಾರೆ" ಇದು ಅಲಹಾಬಾದ್​ನ ನ್ಯಾಯಾಲಯ ಸುಪ್ರೀಂಕೋರ್ಟ್​ ಅಯೋಧ್ಯೆ ತೀರ್ಪು ಕೊಡುವುದಕ್ಕೆ ಮುನ್ನ ಕೊಟ್ಟ ಮುನ್ನುಡಿ. ಈ ಮುನ್ನುಡಿ ಅಯೋಧ್ಯೆ ಪ್ರಕರಣದ ತೀವ್ರತೆಗೆ ಸಾಕ್ಷಿಯಂತಿದೆ. ಹಿಂದೆ ಈ ಭೂಮಿಯನ್ನು ಮೂರು ಭಾಗಗಳಾಗಿ ವಿಂಗಡಿಸಲು ಇದೇ ಹೈಕೋರ್ಟ್​ ಆದೇಶ ನೀಡಿತ್ತು. ಈಗ ಅಯೋಧ್ಯ ಜಮೀನು ನಮಗೆ ಸೇರಿದ್ದು ಅಂತ ಹೇಳಿಕೊಂಡೇ ಸುಮಾರು 14 ಅರ್ಜಿಗಳನ್ನು ಸುಪ್ರೀಂಕೋರ್ಟ್​​ನಲ್ಲಿ ಸಲ್ಲಿಸಲಾಗಿದೆ ಎಂದು ವಿವಾದ ಬೆಳೆದ ಪರಿಯನ್ನು ಊಹಿಸಬಹುದಾಗಿದೆ.

ಸುಪ್ರೀಂಕೋರ್ಟ್​ ನೇಮಿಸಿದ್ದ ನಿವೃತ್ತ ನ್ಯಾಯಮೂರ್ತಿ ಎಫ್‌ಎಂ ಇಬ್ರಾಹಿಂ ಕಲೀಫುಲ್ಲಾ, ಶ್ರೀ ರವಿಶಂಕರ್ ಮತ್ತು ಹಿರಿಯ ವಕೀಲ ಶ್ರೀರಾಮ್​​​ ಪಂಚು ಒಳಗೊಂಡ ಮೂವರು ಸದಸ್ಯರ ಸಮಿತಿಯು ಈಗಾಗಲೇ ತಮ್ಮ ವರದಿಯನ್ನು ಸಲ್ಲಿಸಿದೆ. ಕೆಲವು ವರದಿಗಳ ಪ್ರಕಾರ ಉತ್ತರ ಪ್ರದೇಶ ಸುನ್ನಿ ವಕ್ಫ್​​ ಬೋರ್ಡ್​ ಹಾಗೂ ನಿರ್ಮೋಹಿ ಅಖಾರಾ ಸಂಸ್ಥೆಗಳು ಹಿಂದೂ ಮಹಾಸಭಾದ ಪ್ರತಿನಿಧಿಗಳೊಂದಿಗೆ ಒಪ್ಪಂದ ಮಾಡಿಕೊಂಡು ಅಯೋಧ್ಯೆ ಮೇಲೆ ತಮ್ಮ ಹಕ್ಕನ್ನು ಹಿಂತೆಗೆದುಕೊಳ್ಳಲು ಸಿದ್ಧವಿದ್ದಾವೆ. ಇದರಿಂದಾಗಿ ಸ್ವಲ್ಪ ಮಟ್ಟಿಗೆ ತಲೆನೋವು ಕಡಿಮೆಯಾಗಿದೆ.

ಈ ವೇಳೆ ನಮಗೆ ಜ್ಞಾಪಕ ಬರುವುದು ರಾಷ್ಟ್ರಪಿತ ಮಹಾತ್ಮ ಗಾಂಧಿ. ಅವರು ಹೇಳಿದಂತೆ ''ಹಿಂದೂ ಧರ್ಮವು ಎಲ್ಲಾ ಧರ್ಮಗಳನ್ನು ಬೋಧಿಸುವುದರ ಜೊತೆಗೆ ರಾಮರಾಜ್ಯದ ಸಾರವನ್ನು ಒಳಗೊಂಡಿದೆ. ಭಾರತದ ಸಮಗ್ರತೆ ಅದರ ಧಾರ್ಮಿಕ ಸಹಿಷ್ಣುತೆಯನ್ನು ಆಧರಿಸಿವೆ'' ಎಂಬ ನುಡಿಮುತ್ತುಗಳು.

ಸುಪ್ರೀಂಕೋರ್ಟ್‌ ತನ್ನ ತೀರ್ಪನ್ನು ನಾಳೆಯೇ (ನವೆಂಬರ್​ 9) ಪ್ರಕಟಿಸಲಿದೆ. ಯಾವುದೇ ತೀರ್ಪು ಬಂದರೂ ಎಲ್ಲಾ ವರ್ಗದ ಜನತೆ ತಾಳ್ಮೆ ಹಾಗೂ ನಮ್ರತೆಯಿಂದ ತೀರ್ಪನ್ನು ಸ್ವೀಕರಿಸಬೇಕು. ಭಾವನಾತ್ಮಕವಾಗಿ ಧಕ್ಕೆ ಉಂಟಾಗುವ ನೆಪದಲ್ಲಿ ಹಿಂಸೆಗೆ ಮತ್ತು ಹಿಂಸಾತ್ಮಕ ಪ್ರಚೋದನೆಗಳಿಗೆ ತಮ್ಮನ್ನು ತಾವು ಬಳಸಿಕೊಳ್ಳಬಾರದು. ಹೀಗಾದಾಗ ಮಾತ್ರ ರಾಷ್ಟ್ರೀಯ ಏಕತೆ ಮೂಡುತ್ತದೆ.

Intro:Body:

ಬೆಂಗಳೂರು: ಸ್ವಾತಂತ್ರ‌ ಹಾಗೂ ಗಣರಾಜ್ಯೊತ್ಸವ ದಿನಾಚರಣೆಗಳಂದು ಕೊಡ ಮಾಡುವ ರಾಷ್ಟ್ರಪತಿಯಿಂದ ನೀಡಲಾಗುವ ವಿಶಿಷ್ಟ ಸೇವೆ ಹಾಗೂ ಶ್ಲಾಘನೀಯ ಸೇವಾ ಪದಕವನ್ನು ಸಾಧನೆಗೈದ ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ಪದಕ ರಾಜ್ಯಪಾಲ ವಜುಭಾಯಿ ವಾಲಾ ಪದಕ ಪ್ರದಾನ ಮಾಡಿದರು

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.