ETV Bharat / bharat

ಮಹಿಳೆಯ ರಕ್ಷಿಸಲು ಹೋದ ಪತ್ರಕರ್ತನ ಮೇಲೆ ಹಲ್ಲೆ - attack on Guwahati based journalist

ಮಹಿಳೆ ಮೇಲೆ ನಡೆಯುತ್ತಿದ್ದ ಹಲ್ಲೆ ತಪ್ಪಿಸಲೆತ್ನಿಸಿದ ಪತ್ರಕರ್ತನ ಮೇಲೆಯೇ ಹಲ್ಲೆ ನಡೆಸಿದ ಆರೋಪಿಯನ್ನು ಬಂಧಿಸಲಾಗಿದೆ.

Assam based journalist attacked while saving a helpless woman
ಹಲ್ಲೆಗೊಳಗಾದ ಪತ್ರಕರ್ತ ಅಫ್ನೂರ್ ಅಲಿ
author img

By

Published : Dec 15, 2020, 1:08 PM IST

ಗುವಾಹಟಿ (ಅಸ್ಸೋಂ): ತೊಂದರೆಗೊಳಗಾಗಿದ್ದ ಅಪರಿಚಿತ ಮಹಿಳೆಯನ್ನು ರಕ್ಷಿಸಲು ಹೋದ ಪತ್ರಕರ್ತನೋರ್ವನ ಮೇಲೆ ಹಲ್ಲೆ ನಡೆದಿರುವ ಘಟನೆ ಅಸ್ಸೋಂನ ಗುವಾಹಟಿಯಲ್ಲಿ ನಡೆದಿದೆ.

Assam based journalist attacked while saving a helpless woman
ಹಲ್ಲೆಗೊಳಗಾದ ಪತ್ರಕರ್ತ ಅಫ್ನೂರ್ ಅಲಿ

ನವವಿವಾಹಿತನಾಗಿರುವ ಅಫ್ನೂರ್ ಅಲಿ ಎಂಬ ಪತ್ರಕರ್ತ ನಿನ್ನೆ ಸಂಜೆ ಗುವಾಹಟಿಯ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ (ಜಿಎಂಸಿಎಚ್)ಯಲ್ಲಿ ಕೆಲಸ ಮಾಡುತ್ತಿರುವ ತನ್ನ ಪತ್ನಿಯನ್ನು ಕರೆದುಕೊಂಡು ಹೋಗಲು ಬಂದಿದ್ದಾರೆ. ಈ ವೇಳೆ ಆಸ್ಪತ್ರೆಯ ಹೊರಗೆ ವ್ಯಕ್ತಿಯೊಬ್ಬ ಹರಿತವಾದ ಆಯುಧದಿಂದ ಮಹಿಳೆ ಮೇಲೆ ಹಲ್ಲೆ ಮಾಡಲು ಯತ್ನಿಸುತ್ತಿರುವುದನ್ನು ಗಮನಿಸಿದ ಅಲಿ ಆಕೆಗೆ ಸಹಾಯ ಮಾಡಲು ಮುಂದಾಗಿದ್ದಾರೆ. ಆದರೆ ಆ ವ್ಯಕ್ತಿ ಅಲಿ ಮೇಲೆ ಹಲ್ಲೆ ನಡೆಸಿದ್ದಾನೆ.

ಆರೋಪಿ ಪಂಕಜ್ ಬೈಶ್ಯನನ್ನು ಬಂಧಿಸಿದ ಪೊಲೀಸರು

ಓದಿ: ಪತ್ರಕರ್ತನ ಮನೆಗೆ ಬೆಂಕಿ: ಸ್ಥಳೀಯ ರಿಪೋರ್ಟರ್​ ಸಾವು

ಗಂಭೀರವಾಗಿ ಗಾಯಗೊಂಡ ಅಲಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಪಂಕಜ್ ಬೈಶ್ಯನನ್ನು ಬಂಧಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.