ನವದೆಹಲಿಯಲ್ಲಿ ಸುದ್ದಿಸಂಸ್ಥೆಗೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಗಡಿಭದ್ರತಾ ರೇಖೆಗುಂಟ ವಾಯುಸೇನೆ ಏರ್‌ಸ್ಟ್ರೈಕ್ ಮೂಲಕ ಉಗ್ರರ ಅಡಗುತಾಣಗಳನ್ನ ಧ್ವಂಸಗೊಳಿಸಿರುವುದನ್ನ ಸ್ವಾಗತಿಸಿದ್ದಾರೆ. ಅಷ್ಟೇ ಅಲ್ಲ, ನಾವು ಈಗ ಕೇಂದ್ರ ಸರ್ಕಾರಕ್ಕೆ ಬೆಂಬಲವಾಗಿ ನಿಂತುಕೊಳ್ಳಬೇಕು ಅಂತ ಹೇಳಿದ್ದಾರೆ.
ಉಗ್ರರ ಅಡಗುತಾಣಗಳ ಮೇಲಿನ ಈ ದಾಳಿ ನಾನ್ ಮಿಲ್ಟ್ರಿ ಸ್ಕ್ರೈಕ್ ಅಂತ ವಿದೇಶಾಂಗ ಇಲಾಖೆ ಕಾರ್ಯದರ್ಶಿ ಹೇಳಿದ್ದಾರೆ. ಇಂಥ ಒಂದು ಎದೆಗಾರಿಕೆಯ ನಡೆಯನ್ನ ಕೇಂದ್ರ ಸರ್ಕಾರ ಸಾಕಷ್ಟು ಮೊದಲೇ ತೆಗೆದುಕೊಳ್ಳಬೇಕೆಂದು ನಾನು ಬಯಸಿದ್ದೆ. ಆದ್ರೇ, ಕೊನೆಗೂ ದೇಶದ ಒಳಿಗಾಗಿ ತೆಗೆದುಕೊಂಡ ಈ ನಿರ್ಧಾರಕ್ಕೆ ಮೆಚ್ಚಬೇಕು. ಇದಾದ ಬಳಿಕ ಮೌಲಾನಾ ಮಸೂದ್ ಅಜರ್ ಮತ್ತು ಹಫೀಸ್ ಸಯೀದ್‌ನ ಕೂಡ ಇದೇ ರೀತಿ ಕೇಂದ್ರ ಸರ್ಕಾರ ಮಟ್ಟ ಹಾಕುತ್ತೆ ಅನ್ನೋ ವಿಶ್ವಾಸ ನನ್ನದಾಗಿದೆ ಅಂತ ಒವೈಸಿ ಹೇಳಿದ್ದಾರೆ.