ಅಮರಾವತಿ (ಆಂಧ್ರಪ್ರದೇಶ): ಅನಂತಪುರಂ ಜಿಲ್ಲೆಯಲ್ಲಿ ಕೊರೊನಾ ವೈರಸ್ ಸೋಂಕಿನಿಂದ ಪೊಲೀಸ್ ಅಧಿಕಾರಿ ಮೃತಪಟ್ಟಿದ್ದಾರೆ ಎಂದು ಆಂಧ್ರಪ್ರದೇಶದ ಡಿಜಿಪಿ ಭಾನುವಾರ ತಿಳಿಸಿದ್ದಾರೆ.
ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ 19 ಗೆ ಚಿಕಿತ್ಸೆ ಪಡೆಯುತ್ತಿದ್ದ 51 ವರ್ಷದ ಹಬೀಬುಲ್ಲಾ ಅವರು ಪರಿಗಿ ಪೊಲೀಸ್ ಠಾಣೆಯಲ್ಲಿ ಎಎಸ್ಐ ಆಗಿ ಸೇವೆ ಸಲ್ಲಿಸುತ್ತಿದ್ದರು.
20 ದಿನಗಳ ಹಿಂದೆ ಅವರು ಅನಾರೋಗ್ಯಕ್ಕೆ ತುತ್ತಾಗಿದ್ದ ಅವರ ಸ್ಥಿತಿಯನ್ನು ಗಮನಿಸಿ ಪರಿಗಿ ಎಸ್‌ಐ ಅವರನ್ನು ರಜೆ ಮೇಲೆ ಕಳುಹಿಸಿದ್ದರು. ಆನಂತರ ಕೊರೊನಾ ಪರೀಕ್ಷೆಗೆ ಒಳಗಾಗಿದ್ದ ಅವರಿಗೆ ಕೋವಿಡ್ 19 ಇಲ್ಲ ಎಂದು ವರದಿ ಬಂದಿತ್ತು. ಆದರೆ ಅನಾರೋಗ್ಯ ಹಿನ್ನೆಲೆ ಕೊನೆಯುಸಿರೆಳೆದರು.
ಇದೀಗ ಅವರಿಗೆ ಸೋಂಕು ತಗುಲಿತ್ತು ಎಂದು ಪೊಲೀಸ್ ಇಲಾಖೆ ದೃಢಪಡಿಸಿ ಸೂಕ್ತ ಪರಿಹಾರ ನೀಡಿದೆ.