ಪಣಜಿ : ಗಡಿ ಮತ್ತು ಗಡಿಯೊಳಗೂ ಶೌರ್ಯದಿಂದ ಹೋರಾಡಿದ ವೀರಯೋಧರನ್ನು ಗೌರವಿಸಲು ಪ್ರತಿ ವರ್ಷ ಡಿಸೆಂಬರ್ 7ರಂದು 'ಸಶಸ್ತ್ರ ಪಡೆಗಳ ಧ್ವಜ ದಿನ'ವನ್ನಾಗಿ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಕೇಂದ್ರ ರಕ್ಷಣಾ ಖಾತೆ ರಾಜ್ಯ ಸಚಿವ ಶ್ರೀಪಾದ್ ನಾಯಕ್ರವರು ದೇಶಕ್ಕಾಗಿ ಯೋಧರ ತ್ಯಾಗ ಮತ್ತು ಸೇವೆಯನ್ನ ಸ್ಮರಿಸಿದರು.
ದೇಶದ ಗೌರವವನ್ನು ಕಾಪಾಡಲು ಗಡಿಗಳಲ್ಲಿ ಧೈರ್ಯದಿಂದ ಹೋರಾಡುವ ಸೈನಿಕರನ್ನು ಗೌರವಿಸಲು ಭಾರತವು 1949ರಿಂದ ಡಿಸೆಂಬರ್ 7ಕ್ಕೆ ಸಶಸ್ತ್ರ ಪಡೆಗಳ ಧ್ವಜ ದಿನವನ್ನಾಗಿ ಆಚರಿಸುತ್ತಿದೆ.
-
On this #ArmedForceFlagDay
— Shripad Y. Naik (@shripadynaik) December 7, 2020 " class="align-text-top noRightClick twitterSection" data="
Let us celebrate courage , valour and sacrifice of our Armed Force. pic.twitter.com/LwXHdZEOYz
">On this #ArmedForceFlagDay
— Shripad Y. Naik (@shripadynaik) December 7, 2020
Let us celebrate courage , valour and sacrifice of our Armed Force. pic.twitter.com/LwXHdZEOYzOn this #ArmedForceFlagDay
— Shripad Y. Naik (@shripadynaik) December 7, 2020
Let us celebrate courage , valour and sacrifice of our Armed Force. pic.twitter.com/LwXHdZEOYz
ಇನ್ನು ಸಶಸ್ತ್ರ ಪಡೆಗಳಿಗೆ ಶುಭಾಶಯ ತಿಳಿಸಿದ ನಾಯಕ್, ವಿಡಿಯೋವೊಂದನ್ನು ಶೇರ್ ಮಾಡಿದ್ದು "ನಮ್ಮ ಮಹಾನ್ ರಾಷ್ಟ್ರದ ಭವಿಷ್ಯದ ಪ್ರಗತಿಗೆ ರಾಷ್ಟ್ರೀಯ ಭದ್ರತೆ ಅತ್ಯಂತ ಮಹತ್ವದ್ದಾಗಿದೆ" ಎಂದು ಹೇಳಿದ್ದಾರೆ.
ಓದಿ: 'ಸಶಸ್ತ್ರ ಪಡೆಗಳ ಧ್ವಜ ದಿನ'.. ಯೋಧರು ನಮ್ಮ ದೇಶದ ಮಹತ್ವದ ಆಸ್ತಿ
"ರಾಷ್ಟ್ರದ ಏಕತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ರಕ್ಷಿಸುವ ಗೌರವಯುತ ಕರ್ತವ್ಯವನ್ನು ಭಾರತೀಯ ಸಶಸ್ತ್ರ ಪಡೆಗಳಿಗೆ ವಹಿಸಲಾಗಿದೆ. ನಮ್ಮ ಧೈರ್ಯಶಾಲಿ ಮತ್ತು ದೇಶಭಕ್ತ ಸೈನಿಕರ ಅದ್ಭುತ ಪ್ರಯತ್ನಗಳನ್ನು ನಾವು ಶ್ಲಾಘಿಸಬೇಕು ಮತ್ತು ಪ್ರಶಂಸಿಸಬೇಕಾಗಿದೆ. ಅವರ ಸಾಧನೆಗಳಿಂದ ನಾವು ಭಾರತೀಯರು ಎಂದು ಹೆಮ್ಮೆಯಿಂದ ಹೇಳಲು ಸಾಧ್ಯವಾಗಿದೆ" ಎಂದು ಹೇಳಿದ್ದಾರೆ.
-
On the occasion of #ArmedForcesFlagDay let us contribute generously to the #ArmedForcesFlagDay Fund#AFFD2020 https://t.co/s2MwEC5XgK
— Shripad Y. Naik (@shripadynaik) December 7, 2020 " class="align-text-top noRightClick twitterSection" data="
">On the occasion of #ArmedForcesFlagDay let us contribute generously to the #ArmedForcesFlagDay Fund#AFFD2020 https://t.co/s2MwEC5XgK
— Shripad Y. Naik (@shripadynaik) December 7, 2020On the occasion of #ArmedForcesFlagDay let us contribute generously to the #ArmedForcesFlagDay Fund#AFFD2020 https://t.co/s2MwEC5XgK
— Shripad Y. Naik (@shripadynaik) December 7, 2020
ಇದೇ ವೇಳೆ ದೇಶದ ನಾಗರಿಕರು ಸಶಸ್ತ್ರ ಪಡೆಗಳ ಧ್ವಜ ದಿನ ನಿಧಿಗೆ ಕೊಡುಗೆ ನೀಡುವಂತೆ ನಾಯಕ್ ಮನವಿ ಮಾಡಿದ್ದಾರೆ. "ಇಂತಹ ಸಹಾಯವು ನಮ್ಮ ದೇಶಕ್ಕೆ ಸೇವೆ ಸಲ್ಲಿಸುವ ಸೈನಿಕರಿಗೆ ಧೈರ್ಯ ಮತ್ತು ಮನೋಸ್ಥೈರ್ಯ ತುಂಬಲು ಸಹಕಾರಿಯಾಗುತ್ತದೆ" ಎಂದಿದ್ದಾರೆ.