ETV Bharat / bharat

ಮದ್ಯದ ಮೇಲೆ ಶೇ.50ರಷ್ಟು ಬೆಲೆ ಏರಿಕೆ: ಆಂಧ್ರ ಸರ್ಕಾರದ ಆದೇಶ - ಆಂಧ್ರಪ್ರದೇಶ ಸರ್ಕಾರ

ಮದ್ಯ ಮಾರಾಟ ಮಾಡಲು ಈಗಾಗಲೇ ಕೇಂದ್ರ ಸರ್ಕಾರ ಅನುಮತಿ ನೀಡಿದ್ದು, ಇದರ ಬೆನ್ನಲ್ಲೇ ಆಂಧ್ರಪ್ರದೇಶದಲ್ಲಿ ಎಣ್ಣೆ ಪ್ರೀಯರಿಗೆ ಬಿಗ್​ ಶಾಕ್​ ನೀಡಲಾಗಿದೆ.

AP govt hikes liquor prices
AP govt hikes liquor prices
author img

By

Published : May 5, 2020, 11:51 AM IST

ಅಮರಾವತಿ(ಆಂಧ್ರಪ್ರದೇಶ): ದೇಶಾದ್ಯಂತ ನಿನ್ನೆಯಿಂದ ಮದ್ಯ ಮಾರಾಟ ಮಾಡಲು ಅವಕಾಶ ನೀಡಲಾಗಿದ್ದು, ಸರತಿ-ಸಾಲಿನಲ್ಲಿ ನಿಂತು ಜನರು ಎಣ್ಣೆ ಖರೀದಿ ಮಾಡಲು ಮುಂದಾಗುತ್ತಿದ್ದಾರೆ. ಇದರ ಮಧ್ಯೆ ಆಂಧ್ರಪ್ರದೇಶ ಸರ್ಕಾರ ಎಣ್ಣೆಪ್ರೀಯರಿಗ ದಿಢೀರ್​ ಶಾಕ್​ ನೀಡಿದೆ.

ನಿನ್ನೆ ನಡೆದ ಸಚಿವ ಸಂಪುಟದಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು, ಶೇ.25ರಷ್ಟು ಹೆಚ್ಚಳ ಮಾಡಿ ಮದ್ಯ ಮಾರಾಟ ಮಾಡಲಾಗಿದ್ದು, ಇದೀಗ ಅದು ಶೇ.50ರಷ್ಟು ಏರಿಕೆ ಮಾಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ರಾಜ್ಯ ಕಂದಾಯ ಇಲಾಖೆ ಕಾರ್ಯದರ್ಶಿ ರಜತ್​ ಭಾರ್ಗವ್​ ಈ ನಿಯಮ ಸದ್ಯದಿಂದಲೇ ಜಾರಿಗೊಳ್ಳಲಿದೆ ಎಂದಿದ್ದಾರೆ.

ರಾಜ್ಯದಲ್ಲಿ ಬೆಳಗ್ಗೆ 11ರಿಂದ ರಾತ್ರಿ 7ರವರೆಗೆ ಮಧ್ಯದಂಗಡಿ ಓಪನ್​ ಆಗ್ತಿದ್ದು, ಇದೀಗ ಮಧ್ಯಾಹ್ನ 12ರಿಂದ ಅಂಗಡಿ ಓಪನ್​ ಆಗಲಿವೆ ಎಂದಿದ್ದಾರೆ. ಇದರಿಂದ ರಾಜ್ಯದಲ್ಲಿ 9,000 ಸಾವಿರ ಕೋಟಿ ಹೆಚ್ಚುವರಿ ಆದಾಯ ರಾಜ್ಯದ ಬೊಕ್ಕಸಕ್ಕೆ ಬರಲಿದೆ ಎಂದು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.