ETV Bharat / bharat

ಅಸ್ಸೋಂನಲ್ಲಿ ಭುಗಿಲೆದ್ದ CAB ವಿರೋಧಿ ಪ್ರತಿಭಟನೆ: ಭಾರತ-ಜಪಾನ್ ಮಾತುಕತೆ ಮೇಲೆ ಕರಿನೆರಳು

ಪೌರತ್ವ ತಿದ್ದುಪಡಿ ಮಸೂದೆ (CAB) ಮತ್ತು ಎನ್‍ಆರ್​ಸಿ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ಹಿಂಸಾತ್ಮಕ ಪ್ರತಿಭಟನೆಗಳು ಅಸ್ಸೋಂ ರಾಜ್ಯದಲ್ಲಿ ಆವರಿಸಿಕೊಂಡು ಈಶಾನ್ಯ ಭಾರತಾದ್ಯಂತ ಭುಗಿಲೆದ್ದಿದೆ.

Anti-CAB protest
CAB ವಿರೋಧಿ ಪ್ರತಿಭಟನೆ
author img

By

Published : Dec 12, 2019, 9:38 PM IST

ಪೌರತ್ವ ತಿದ್ದುಪಡಿ ಮಸೂದೆ (CAB) ಮತ್ತು ಎನ್‍ಆರ್​ಸಿ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ಹಿಂಸಾತ್ಮಕ ಪ್ರತಿಭಟನೆಗಳು ಅಸ್ಸೋಂ ರಾಜ್ಯವನ್ನು ಆವರಿಸಿಕೊಂಡು ಈಶಾನ್ಯ ಭಾರತಾದ್ಯಂತ ಹಬ್ಬತೊಡಗಿವೆ. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಜಪಾನ್ ದೇಶದ ಪ್ರಧಾನ ಮಂತ್ರಿ ಶಿಂಜೊ ಅಬೆಯವರ ಭಾರತ ಭೇಟಿಯ ನಿಗದಿತ ಸ್ಥಳದಲ್ಲಿ ಬದಲಾವಣೆಯಾಗಬಹುದು ಎಂಬ ಮಾತುಗಳೂ ಕೇಳಿಬರುತ್ತಿವೆ.

ಇದೇ ಡಿಸೆಂಬರ್ 15 ಮತ್ತು 16ರಂದು ಅಸ್ಸೋಂ ರಾಜ್ಯದ ರಾಜಧಾನಿ ಗುವಾಹತಿಯಲ್ಲಿ ಭಾರತ-ಜಪಾನ್ ನಡುವೆ ವ್ಯಾವಹಾರ ತಾಂತ್ರಿಕ ಶೃಂಗಸಭೆಯ ಮಾತುಕತೆಗಳು ಏರ್ಪಾಡಾಗಿದ್ದವು. ಇದರಲ್ಲಿ ಅಬೆಯವರು ಪಾಲ್ಗೊಳ್ಳುವ ನೀಕ್ಷೆಯಿತ್ತು. ಇದೇ ಸಂದರ್ಭದಲ್ಲಿ ಡಿಸೆಂಬರ್ 17ರಂದು ಇಂಫಾಲ್ ಯುದ್ಧ ಸ್ಮಾರಕಕ್ಕೆ ವಿಶೇಷ ಭೇಟಿ ನೀಡುವ ಕಾರ್ಯಕ್ರಮವೂ ಏರ್ಪಾಡಾಗಿತ್ತು. ಕಳೆದ ವಾರ ಈ ಕುರಿತು ಸುದ್ದಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದ ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಶೃಂಗಸಭೆಯ ದಿನಾಂಕಗಳನ್ನು ಖಚಿತಪಡಿಸಿದ್ದರೂ ಇದಕ್ಕೆ ಅಧಿಕೃತ ಸ್ಥಳ ಗುವಾಹತಿಯೇ ಎಂಬ ಬಗ್ಗೆ ಖಚಿತಪಡಿಸಲು ನಿರಾಕರಿಸಿದ್ದರು.

ಸುದ್ದಿ ಮಾಧ್ಯಮಗಳ ವರದಿಯ ಪ್ರಕಾರ ಎರಡೂ ದೇಶಗಳ ಮುಖ್ಯಸ್ಥರು ಅಸ್ಸೋಂ ನಲ್ಲಿ ಭೇಟಿಯಾಗಿ ಮಾತುಕತೆ ನಡೆಸುವ ತಯಾರಿಗಳು ಸದ್ದಿಲ್ಲದೆ ನಡೆಯುತ್ತಿವೆ. ಭಾರತವು ತನ್ನ ‘ಆ್ಯಕ್ಟ್ ಈಸ್ಟ್’ ನೀತಿಗೆ ಗಮನ ಕೊಡುತ್ತಿರುವುದಲ್ಲದೇ ಈಶಾನ್ಯ ಭಾರತದಲ್ಲಿ ಜಪಾನ್ ದೇಶದ ಬಂಡವಾಳ ಹೂಡಿಕೆಯನ್ನು ಹೆಚ್ಚಿಸಲು ಪ್ರಯತ್ನ ನಡೆಸುತ್ತಿರುವುದನ್ನು ಈ ಶೃಂಗಸಭೆಯ ತಯಾರಿಗಳು ಸೂಚಿಸುತ್ತಿವೆ. ಮೂಲಗಳು ತಿಳಿಸಿರುವ ಪ್ರಕಾರ ಈ ಸಭೆ ನಡೆಯುತ್ತಿರುವ ಸಂದರ್ಭದಲ್ಲಿಯೇ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಜಪಾನ್ ಪ್ರಧಾನಿ ಶಿಂಜೊ ಅಬೆ ಇಬ್ಬರೂ ಜೊತೆಗೂಡಿ ಪ್ರಸಿದ್ಧ ಕಾಜಿರಂಗ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡುವ ಕಾರ್ಯಕ್ರಮವೂ ನಿಗದಿಯಾಗಿದೆ. ಆದ್ರೆ ಈಗ ಈ ಭಾಗದಲ್ಲಿ ತೀವ್ರಗೊಂಡಿರುವ CAB ವಿರೋಧಿ ಪ್ರತಿಭಟನೆಗಳ ಕಾರಣದಿಂದ ಅಸ್ಸೋಂ ರಾಜ್ಯದಲ್ಲಿ ಕರ್ಫ್ಯೂ ಹೇರಲಾಗಿದೆಯಲ್ಲದೇ ಸೇನಾ ತುಕಡಿಗಳನ್ನು ಸಹ ನಿಯೋಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ನವದೆಹಲಿ ಈಗ ತನ್ನ ಯೋಜನೆಗಳನ್ನು ತುರ್ತಾಗಿ ಬದಲಿಸಿಕೊಳ್ಳಬೇಕಾಗಿ ಬರಬಹುದು.

ಜಪಾನ್ ಪ್ರಧಾನಿಯ ಭೇಟಿ ಮತ್ತು ಸ್ಥಳಗಳಲ್ಲಿ ಏನಾದರೂ ಬದಲಾವಣೆ ಇದೆಯೇ ಎಂದು ಮಾಧ್ಯಮಗಳು ಪದೇಪದೇ ನಡೆಸಿದ ವಿಚಾರಣೆಗೆ ಇದುವರೆಗೂ ವಿದೇಶಾಂಗ ಸಚಿವಾಲಯವು ಮೌನದ ಉತ್ತರವನ್ನೇ ನೀಡಿದೆ. ನವದೆಹಲಿಯಲ್ಲಿರುವ ಜಪಾನಿ ರಾಯಭಾರ ಕಚೇರಿಯು ಈ ಎಲ್ಲಾ ಬೆಳವಣಿಗೆಗಳನ್ನು ಹತ್ತಿರದಿಂದ ಗಮನಿಸುತ್ತಿದೆ. “ಅತಿಥೇಯರು ನಡೆಸುವ ತಯಾರಿಯಲ್ಲಿ ನಮಗೆ ನಂಬಿಕೆ ಇದೆ” ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಹಿರಿಯ ಜಪಾನಿ ರಾಯಭಾರಿಯೊಬ್ಬರು.

ಮೋದಿ ಮತ್ತು ಅಬೆ ಕಳೆದ ನವೆಂಬರ್ ತಿಂಗಳ ಮೊದಲ ಭಾಗದಲ್ಲಿ ಬ್ಯಾಂಕಾಕ್‍ನಲ್ಲಿ ನಡೆದಿದ್ದ ಆಸಿಯಾನ್‍ ಶೃಂಗಸಭೆಯಲ್ಲಿ ಭೇಟಿಯಾಗಿ ಪರಸ್ಪರ ಮಾತುಕತೆ ನಡೆಸಿದ್ದರು. ACSA (ಅಕ್ವಿಸಿಶನ್ ಅಂಡ್ ಕ್ರಾಸ್ –ಸರ್ವಿಸಿಂಗ್ ಅಗ್ರಿಮೆಂಟ್) ಕುರಿತ ಮಾತುಕತೆಯಲ್ಲಿ ವರದಿಯಾದಂತೆ ಎರಡು ದೇಶಗಳ ನಡುವೆ ಮೊತ್ತ ಮೊದಲ ಬಾರಿಗೆ ವಿದೇಶಾಂಗ ಮತ್ತು ರಕ್ಷಣಾ ಸಚಿವರುಗಳ ಸಭೆಯು 2+2 ಕ್ರಮ ವ್ಯವಸ್ಥೆಯಲ್ಲಿ ಕಳೆದ ವಾರವಷ್ಟೇ “ಗಣನೀಯ ಪ್ರಗತಿ”ಯೊಂದಿಗೆ ಮುಕ್ತಾಯಗೊಂಡಿದೆ. ಭಾರತದ ಸೇನೆ ಮತ್ತು ಜಪಾನ್ ಸ್ವರಕ್ಷಣಾ ಪಡೆಗಳು (JSDF) ಪರಸ್ಪರರ ಸೇನಾ ನೆಲೆಗಳನ್ನು ಸೇನಾಪೂರಕ ಬೆಂಬಲಕ್ಕೆ ಬಳಸಿಕೊಳ್ಳಲು ಅನುವು ಮಾಡಿಕೊಡುವ ನಿಟ್ಟಿನಲ್ಲಿ ACSA ಒಪ್ಪಂದ ಮಾಡಿಕೊಳ್ಳುವ ಕುರಿತು ಎರಡೂ ದೇಶಗಳು ಅಧಿಕೃತ ಮಾತುಕತೆ ನಡೆಸಲು 2018ರಲ್ಲೇ ತೀರ್ಮಾನಕ್ಕೆ ಬಂದಿವೆ. ಭಾರತವು ಅಮೆರಿಕ ಮತ್ತು ಫ್ರಾನ್ಸ್​ಗಳೊಂದಿಗೆ ಮಾಡಿಕೊಂಡಿರುವ ಒಪ್ಪಂದದ ಬಗೆಯಲ್ಲೇ ಜಪಾನ್‍ನೊಂದಿಗೂ ಒಪ್ಪಂದ ಮಾಡಿಕೊಳ್ಳುವುದು ಈ ಮಾತುಕತೆಯ ಉದ್ದೇಶವಾಗಿದೆ.

ಭಾರತದ ಮಾಜಿ ಉನ್ನತ ರಾಯಭಾರಿ ರಾಕೇಶ್ ಸೂದ್ ಅವರೊಂದಿಗೆ ಭಾರತ-ಜಪಾನ್‍ ಮಾತುಕತೆಗಳ ಪ್ರಾಮುಖ್ಯತೆ, ACSA ಒಪ್ಪಂದ ಮತ್ತು ಈ ಭಾಗದಲ್ಲಿ ಚೀನಾ ಫ್ಯಾಕ್ಟರ್ ಇತ್ಯಾದಿಗಳ ಕುರಿತು ಹಿರಿಯ ಪತ್ರಕರ್ತರಾದ ಸ್ಮಿತಾ ಶರ್ಮಾ ಅವರು ನಡೆಸಿರುವ ಮಾತುಕತೆಯ ಆಯ್ದ ಭಾಗಗಳು ಇಲ್ಲಿವೆ.

ಭಾರತ-ಜಪಾನ್ ನಡುವಿನ ಸಹಕಾರ ಹೆಚ್ಚುತ್ತಿದೆ – ಮಾಜಿ ಉನ್ನತ ರಾಯಭಾರಿ ರಾಕೇಶ್ ಸೂದ್

ಮೋದಿ ಹಾಗೂ ಅಬೆ ನಡುವಿನ ಮಾತುಕತೆಗೆ ಗುವಾಹತಿಯನ್ನು ಮಾತುಕತೆಯ ಸ್ಥಳವನ್ನಾಗಿ ಆಯ್ದುಕೊಂಡಿರುವುದು ಎಷ್ಟು ಪ್ರಾಮುಖ್ಯತೆ ಹೊಂದಿದೆ?
ರಾಕೇಶ್ ಸೂದ್- ಭಾಗಶಃ ಮಟ್ಟಿಗೆ ಇದು ಪ್ರಧಾನಿ ಮೋದಿ ಅಳವಡಿಸಿಕೊಂಡಿರುವ ರಾಯಭಾರತ್ವದ ಶೈಲಿಯಾಗಿದೆ. ಮೊದಲ ಬಾರಿಗೆ ಚೀನಾದ ಅಧ್ಯಕ್ಷರು ಭಾರತಕ್ಕೆ ಬಂದಾಗ ಅವರು ಗುಜರಾತಿನಲ್ಲಿ ಸಾಬರಮತಿ ಆಶ್ರಮಕ್ಕೆ ಭೇಟಿ ನೀಡುವ ಮೂಲಕ ತಮ್ಮ ಭಾರತ ಭೇಟಿಯನ್ನು ಆರಂಭಿಸಿದ್ದರು. ಎರಡನೇ ಸಲದ ಅನೌಪಚಾರಿಕ ಶೃಂಗಸಭೆಯನ್ನು ಅವರು ತಮಿಳುನಾಡಿನಲ್ಲಿ ನಡೆಸಿದರು. ಪ್ರಧಾನಿ ಮೋದಿ ಅಬೆಯವರನ್ನು ಈ ಹಿಂದೆ ವಾರಣಾಸಿಯಲ್ಲಿ ಬರಮಾಡಿಕೊಂಡಿದ್ದರು. ಅಂದರೆ ಅವರು ದೆಹಲಿಯಿಂದ ಹೊರಕ್ಕೆ ಈ ಭೇಟಿಗಳನ್ನು ನಡೆಸಲು ಇಚ್ಛಿಸುತ್ತಾರೆ. ದೆಹಲಿ ದೇಶದ ರಾಜಧಾನಿಯಾಗಿರುವುದರಿಂದ ಅಲ್ಲಿ ಸ್ವಲ್ಪ ನಿರ್ಬಂಧದ ವಾತಾವರಣವಿರುತ್ತದೆ. ಈಶಾನ್ಯ ಭಾರತದಲ್ಲಿ ಜಪಾನ್ ದೇಶ ನಡೆಸುವ ಬಂಡವಾಳ ಹೂಡಿಕೆ ನಡೆಸುವ ವಿಷಯದೊಂದಿಗೆ ರಾಯಭಾರತ್ವವನ್ನು ಮೋದಿಯವರು ವೈಯಕ್ತಿಕಗೊಳಿಸಿದ ಶೈಲಿಯಲ್ಲಿ ನಡೆಸುವುದು ಸೇರಿಕೊಂಡ ಕಾರಣದಿಂದ ಈ ಮಾತುಕತೆಗೆ ಗುವಾಹತಿ ಆಯ್ಕೆಯಾಗಿದೆ.

ಭಾರತದ ‘ಆ್ಯಕ್ಟ್ ಈಸ್ಟ್’ ನೀತಿ ಮತ್ತು ಜಪಾನಿನ ಇಂಡೊ-ಪೆಸಿಫಿಕ್ ವ್ಯೂಹತಂತ್ರ ಇವೆರಡರ ಮೇಳೈಸುವಿಕೆಯ ಕುರಿತು ನಿಮ್ಮ ಅಭಿಪ್ರಾಯವೇನು?

ರಾಕೇಶ್ ಸೂದ್- ಮೊದಲು ನಾವು 2+2 ಕ್ರಮ ವ್ಯವಸ್ಥೆಯಲ್ಲಿ ಪರಸ್ಪರ ದೇಶಗಳ ವಿದೇಶಾಂಗ ಹಾಗೂ ರಕ್ಷಣಾ ಸಚಿವರುಗಳ ನಡುವೆ ಮಾತುಕತೆ ಹಮ್ಮಿಕೊಂಡಿದ್ದೆವು. ಹಿಂದೆಲ್ಲಾ ವಿದೇಶಾಂಗ ಕಾರ್ಯದರ್ಶಿ ಮತ್ತು ರಕ್ಷಣಾ ಕಾರ್ಯದರ್ಶಿ ಹಾಗೂ ಜಪಾನಿನ ಉಪಸಚಿವರುಗಳ ಮಟ್ಟದಲ್ಲಿ ಈ ಮಾತುಕತೆಗಳು ನಡೆಯುತ್ತಿದ್ದವು. ಈಗ ಈ ಮಾತುಕತೆ ಕ್ಯಾಬಿನೆಟ್ ಸಚಿವರ ಮಟ್ಟಕ್ಕೆ ಮೇಲ್ದರ್ಜೆಗೇರಿದೆ. ಈ ಹಿಂದೆ ನೌಕಾ ಪಡೆಗಳ ನಡುವೆ ಮಾತ್ರ ನಡೆಯುತ್ತಿದ್ದ ಜಂಟಿ ಸಮರಾಭ್ಯಾಸ ಈಗ ಸೇನೆ ಮತ್ತು ವಾಯುಪಡೆಗಳ ನಡುವೆಯೂ ನಡೆಯುವಷ್ಟರ ಮಟ್ಟಿಗೆ ಬಂದಿರುವುದನ್ನು ಗಮನಿಸಬಹುದು. ಜಪಾನ್ ದೇಶವು ರಕ್ಷಣಾ ಕ್ಷೇತ್ರದಲ್ಲಿ ಅನೇಕ ಸೇನಾ ಚಟುವಟಿಕೆಗಳಿಗೆ ನಿರ್ಬಂಧ ಹೇರುವ ಕಾನೂನನ್ನು ಹೊಂದಿದೆ. ಇತ್ತೀಚೆಗೇನೋ ಈ ಕಾನೂನನ್ನು ಒಂದಷ್ಟು ಸಡಿಲಗೊಳಿಸಲಾಗುತ್ತಿದೆ. ಜಪಾನ್ ಮತ್ತು ಭಾರತ ನಡುವೆ ಸಂಶೋಧನೆ ಮತ್ತು ಅಭಿವೃದ್ಧಿ (R&D) ವಿಷಯದಲ್ಲಿ ಕೆಲವು ಜಂಟಿ ಕಾರ್ಯಯೋಜನೆಗಳನ್ನು ನಡೆಸುವ ಸಾಧ್ಯತೆಯನ್ನೂ ಎದುರು ನೋಡಲಾಗುತ್ತಿದೆ. ಇದು ಸಾಧ್ಯವಾದರೆ ರಕ್ಷಣಾ ಕ್ಷೇತ್ರದಲ್ಲಿ ಇದರ ಪರಿಣಾಮವಿರುತ್ತದೆ. ನೀರಿನ ಮೇಲೆಯೇ ಕಾರ್ಯಾಚರಣೆ ನಡೆಸುವ US2 ಯುದ್ಧ ವಿಮಾನವೊಂದನ್ನು ಜಪಾನಿನಿಂದ ಖರೀದಿಸಲು ಮಾತುಕತೆ ನಡೆಯುತ್ತಿದೆ. ಈ ಮಾತುಕತೆ ಸಫಲವಾದರೆ ಜಪಾನ್ ದೇಶದಿಂದ ಯುದ್ಧಕ್ಕೆ ಸಂಬಂಧಿಸಿದ ಸಾಧನವೊಂದನ್ನು ಮೊತ್ತಮೊದಲ ಬಾರಿಗೆ ಖರೀದಿಸಿದಂತಾಗುತ್ತದೆ. ಇದು ಸಾಧ್ಯವಾಗುವ ನಿರೀಕ್ಷೆಯಿದೆ. ಈ ನಿಟ್ಟಿನಲ್ಲಿ ಕ್ರಮೇಣವಾಗಿ ಸಾಗುತ್ತಿದ್ದೇವೆ. ಆ್ಯಕ್ಟ್ ಈಸ್ಟ್ ಮತ್ತು ಜಪಾನಿನ ಇಂಡೋ-ಪೆಸಿಫಿಕ್‍ ನೀತಿಗಳ ನಡುವಿನ ಮೇಳೈಸಿವಿಕೆಯನ್ನು ಸ್ವತಂತ್ರ ಹಾಗೂ ಮುಕ್ತ ನಡೆಯಾಗಿ ನೋಡಬೇಕು.

ACSA ಒಪ್ಪಂದವು ನಡೆದಲ್ಲಿ ಭಾರತದ ನೌಕಾಬಲವು ಜಪಾನಿನ ಡ್ಜಿಬೌಟಿಯ ನೌಕಾನೆಲೆಗೆ ಪ್ರವೇಶ ಪಡೆಯಬಹುದಾಗಿದೆ. ಹಾಗೆಯೇ ಜಪಾನಿನ ನೌಕಾ ಸ್ವರಕ್ಷಣಾ ಪಡೆಯು (JMSDF) ಹಿಂದೂ ಮಹಾಸಾಗರದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿರುವ ಭಾರತದ ನೌಕಾ ಸ್ಥಾವರಗಳಿಗೆ ಪ್ರವೇಶ ಪಡೆಯಬಹುದಾಗಿದೆ.

ಈ ಒಪ್ಪಂದದ ಪ್ರಾಮುಖ್ಯತೆ ಕುರಿತು ಹೇಳಿ:
ರಾಕೇಶ್ ಸೂದ್- ಪ್ರತಿಯೊಂದು ಸಲವೂ ಸೇನಾಪೂರಕ ಒಪ್ಪಂದ ಮಾಡಿಕೊಳ್ಳುವ ಬದಲು ನಮಗೆ ಒಂದು ಸೂಕ್ತವಾದ ಚೌಕಟ್ಟು ಇದ್ದರೆ ಒಳ್ಳೆಯದು. ಜಪಾನಿನ ಯುದ್ಧ ನೌಕೆಗಳು ಅಥವಾ ಸಮರಾಭ್ಯಾಸದ ದೋಣಿಗಳು ಅಥವಾ ನೌಕಾವಿಮಾನಗಳು ಹಿಂದೂ ಮಹಾಸಾಗರಕ್ಕೆ ಬರುವಂತಾಗಿ ಅದೇ ರೀತಿ ನಮ್ಮ ವಿಮಾನಗಳು ಜಪಾನಿನ ಸಮುದ್ರಕ್ಕೆ, ಜಪಾನಿನ ಪೂರ್ವಭಾಗಕ್ಕೆ ಹೋಗುವಂತಾಗುವುದು ಎಂದರೆ ಅದರ ಅರ್ಥ ನಾವೀಗ ಅಮೆರಿಕ ಮತ್ತು ಫ್ರಾನ್ಸ್ ದೇಶಗಳೊಂದಿಗೆ ಹೇಗೆ ಶಾಶ್ವತ ರೂಪದ ಒಪ್ಪಂದ ಮಾಡಿಕೊಂಡಿದ್ದೇವೆಯೋ ಹಾಗೆಯೇ ಜಪಾನಿನ ಜೊತೆಯಲ್ಲಿಯೂ ಒಂದು ಶಾಶ್ವತ ರೂಪದ ಒಪ್ಪಂದವನ್ನು ಮಾಡಿಕೊಳ್ಳುತ್ತಿದ್ದೇವೆ ಎಂದಾಗುತ್ತದೆ.

ಭಾರತವು ನೀರಿನಲ್ಲಿಯೇ ಕಾರ್ಯಾಚರಣೆ ನಡೆಸುವ ವಿಮಾನಗಳನ್ನು ಜಪಾನಿನಿಂದ ಕೊಂಡುಕೊಳ್ಳುವ ನಿಟ್ಟಿನಲ್ಲಿ ಮಾತುಕತೆ ನಡೆಸುತ್ತಿದೆ. ಎರಡನೇ ಮಹಾಯುದ್ಧದ ನೆರಳು ಜಪಾನ್ ದೇಶದ ಅಣ್ವಸ್ತ್ರ ನೀತಿಯ ಮೇಲಿರುವಾಗ ಈ ಮಾತುಕತೆ ಫಲಪ್ರದವಾಗಲು ಅದರ ಆಂತರಿಕ ನೀತಿಯಲ್ಲಿ ಯಾವ ಬಗೆಯ ಬದಲಾವಣೆಯ ಅಗತ್ಯತೆ ಬೀಳಬಹುದು?

ರಾಕೇಶ್ ಸೂದ್- ಇದು ಜಪಾನ್ ಬಹುಕಾಲದಿಂದಲೂ ಎದುರಿಸುತ್ತಿರುವ ಆಂತರಿಕ ವಿಷಯ. ಜಪಾನಿನಲ್ಲಿ ಯುದ್ಧಗಳಲ್ಲಿ ಪಾಲ್ಗೊಳ್ಳದೇ ಶಾಂತಿಯ ನೀತಿಯನ್ನೇ ಅನುಸರಿಸಬೇಕು ಎಂಬ ಬಲವಾದ ಎಳೆಯಿದೆ. ಆದ್ರೆ 1945ರಿಂದಲೂ ಪಾಲಿಸಿಕೊಂಡು ಬಂದಿರುವ ತನ್ನ ಆ ನೀತಿಯನ್ನು ಜಪಾನ್ ಮರುಪರಿಶೀಲನೆಗೆ ಒಳಪಡಿಸುವ ಅಗತ್ಯತೆ ಜಪಾನಿ ಪ್ರಧಾನಿ ಅಬೆಯವರಿಗೆ ಮನವರಿಕೆಯಾಗಿದೆ ಎಂದು ನನ್ನ ಅನಿಸಿಕೆ. ಆಗ ಜಪಾನನ್ನು ಅಮೆರಿಕ ಸೋಲಿಸಿ ಆಕ್ರಮಿಸಿಕೊಂಡಿತ್ತು. ಆ ನಿರ್ದಿಷ್ಟ ಕಾಲಘಟ್ಟದಲ್ಲಿ ಜಪಾನ್ ಮೇಲೆ ಶಾಂತಿಪಾಲನಾ ಯುದ್ಧನೀತಿಯನ್ನು ಹೇರಲಾಗಿತ್ತು. ಆ ಸಂದರ್ಭದಲ್ಲಿ ಅಮೆರಿಕದ ರಕ್ಷಣಾ ಛಾವಣಿಯ ಕೆಳಗೆ ಅಂತಹ ನೀತಿಯನ್ನು ಅನುಸರಿಸುವುದು ಜಪಾನಿಗೆ ಸುಗಮವಾದ ನಡೆಯೆನಿಸಿತ್ತು. ಇಂದು ಅಮೆರಿಕದ ಅನೇಕ ಮಿತ್ರಪಕ್ಷಗಳೇ ಅಮೆರಿಕದ ಭದ್ರತಾ ಛಾವಣಿಯನ್ನು ಪ್ರಶ‍್ನಿಸುತ್ತಿವೆ. ಹೀಗಾಗಿ ಪ್ರಧಾನಿ ಅಬೆಯವರು ಜಪಾನಿ ಸ್ವರಕ್ಷಣಾ ಪಡೆಗಳಿಗೆ ಇಂದು ಕೊಂಚ ಭಿನ್ನವಾದ ಪಾತ್ರವನ್ನು ರೂಪಿಸಿಕೊಳ್ಳಲು ಬಹಳ ಜಾಗರೂಕತೆಯಿಂದ ಪರಿಸ್ಥಿತಿಯ ಮೌಲ್ಯಂದಾಜು ನಡೆಸುತ್ತಿದ್ದಾರೆ.

ಇಂದು ಚೀನಾಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಜಪಾನ್​ ಪರಸ್ಪರರನ್ನು ಈಡಾಗಿ (counterweight) ಪರಿಗಣಿಸುತ್ತಿವೆಯೇ?

ರಾಕೇಶ್ ಸೂದ್- ಇದು ಬಹಳ ಸಂಕೀರ್ಣವಾದ ವಿಷಯ. ಭಾರತ ಮತ್ತು ಜಪಾನ್ ಎರಡೂ ದೇಶಗಳಿಗೆ ಚೀನಾ ಅತಿದೊಡ್ಡ ವ್ಯಾಪಾರಿ ಸಹಭಾಗಿಯಾಗಿದೆ. ಚೀನಾದಲ್ಲಿರುವ ಜಪಾನ್ ದೇಶದ ವಿದೇಶಿ ನೇರ ಬಂಡವಾಳ ಹೂಡಿಕೆಯು (FDI) ಬೇರೆ ಯಾವುದೇ ದೇಶದಲ್ಲಿರುವ ಅದರ ವಿದೇಶಿ ನೇರ ಬಂಡವಾಳಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿದೆ. 1980ರ ದಶಕದಲ್ಲಿ ಚೀನಾದಲ್ಲಿ ಮೊದಲಿಗೆ ಹೂಡಿಕೆ ನಡೆಸಿದ ದೇಶ ಜಪಾನ್ ದೇಶವೇ ಆಗಿತ್ತು. ಚೀನಾದಲ್ಲಿ ಮೊದಲು ಬಂಡವಾಳ ಹೂಡಿದವರು ಜಪಾನಿಯರು. ಅದರ ನಂತರ ದಕ್ಷಿಣ ಕೋರಿಯನ್ನರು, ನಂತರದಲ್ಲಿ ಅಮೆರಿಕನ್ನರು. ಹೀಗಾಗಿ ಜಪಾನಾಗಲೀ ಭಾರತವಾಗಲೀ ತಾವು ಚೀನಾದೊಂದಿಗೆ ಆರ್ಥಿಕ ಸಂಯೋಗ ಹೊಂದಿರುವ ಬದುಕಿನ ವಾಸ್ತವತೆಯನ್ನು ಕಡೆಗಣಿಸಿ ಯಾವುದನ್ನೂ ನೋಡಲು ಸಾಧ್ಯವಿಲ್ಲ. ಅದೇ ವೇಳೆ ಜಪಾನ್ ದೇಶವು ಅಮೆರಿಕೊಂದಿಗೆ ಬಹುಕಾಲದಿಂದ ಬಗೆಹರಿಯದ ಸಾಗರ ಪ್ರದೇಶ ಗಡಿ ವಿವಾದವನ್ನೂ ಹೊಂದಿದೆ. ಭಾರತವು ಚೀನಾದೊಂದಿಗೆ ಭೂಪ್ರದೇಶ ಗಡಿವಿವಾದ ಹೊಂದಿದೆ. ಚೀನಾವು ಪಾಕಿಸ್ತಾನದೊಂದಿಗೆ ನಿಕಟವಾಗಿ ರಕ್ಷಣಾ ಕ್ಷಿಪಣಿ ಹಾಗೂ ಅಣ್ವಸ್ತ್ರ ಸಹಯೋಗ ಹೊಂದಿರುವುದು ಭಾರತಕ್ಕಿರುವ ಎರಡನೇ ತಕರಾರು. ಚೀನಾದ ಕೆಲವು ನಡೆಗಳು ಭಾರತ ಮತ್ತು ಜಪಾನ್ ಎರಡೂ ದೇಶಗಳ ರಕ್ಷಣೆಯ ವಿಷಯದಲ್ಲಿ ಆತಂಕ ಪಡುವ ನಡೆಗಳಾಗಿವೆ. ನಮ್ಮ ಎರಡೂ ದೇಶಗಳು ಸೇರಿಕೊಂಡು ಹೇಗೆ ಉತ್ತಮ ರೀತಿಯಲ್ಲಿ ಇದನ್ನು ಎದುರಿಸಬಹುದು. ಎರಡರ ನಡುವೆ ರಾಜಕೀಯ ಸಂಯೋಗ ಎಷ್ಟರ ಮಟ್ಟಿಗೆ ಫಲಪ್ರದವಾಗಿರುತ್ತದೆ ಎಂಬುದನ್ನು ಕಾದು ನೋಡಬೇಕು. ಆದರೆ ಇದೊಂದು ಸೇನಾ ಮಿತ್ರಕೂಟವಾಗುವುದಿಲ್ಲ ಯಾಕಂದರೆ ಜಪಾನ್ ಅಮೆರಿಕದ ಮಿತ್ರಪಕ್ಷವಾಗಿಯೇ ಇರಲಿದೆ.

Intro:Body:

vikki

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.