ETV Bharat / bharat

ತಪ್ಪಿದ ಮತ್ತೊಂದು ಪುಲ್ವಾಮಾ ಮಾದರಿಯ ದಾಳಿ... ನೆಲದಲ್ಲಿ ಹುದುಗಿಸಿಟ್ಟಿದ್ದ ಸಿಂಟೆಕ್ಸ್​ಗಟ್ಟಲೇ ಸ್ಫೋಟಕಗಳು ಲಭ್ಯ! - ತಪ್ಪಿದ ಪುಲ್ವಾಮಾ ಮಾದರಿ ದಾಳಿ

ಪುಲ್ವಾಮಾ ಘಟನೆ ಸಂಭವಿಸಿದ ಪ್ರದೇಶದಲ್ಲಿ ಜಂಟಿ ಕಾರ್ಯಾಚರಣೆ ನಡೆಸಿದ ಸೇನಾ ಸಿಬ್ಬಂದಿಗೆ ಸಿಂಟೆಕ್ಸ್ ಗಟ್ಟಲೇ ಸ್ಫೋಟಕಗಳು ಲಭ್ಯವಾಗಿದ್ದು, ಭಾರಿ ದಾಳಿ ತಪ್ಪಿದಂತಾಗಿದೆ.

Another Pulwama type attack averted
ತಪ್ಪಿದ ಮತ್ತೊಂದು ಪುಲ್ವಾಮಾ ಮಾದರಿಯ ದಾಳಿ
author img

By

Published : Sep 17, 2020, 10:15 PM IST

Updated : Sep 17, 2020, 10:58 PM IST

ಜಮ್ಮು-ಕಾಶ್ಮೀರ: ಪುಲ್ವಾಮಾ ಸ್ಫೋಟ ಸಂಭವಿಸಿದ ಪ್ರದೇಶದಲ್ಲಿ ಜಂಟಿ ಕಾರ್ಯಾಚರಣೆ ನಡೆಸಿದ ಸೇನಾ ಸಿಬ್ಬಂದಿಗೆ ಸಿಂಟೆಕ್ಸ್ ಗಟ್ಟಲೇ ಸ್ಫೋಟಕಗಳು ಲಭ್ಯವಾಗಿದೆ. ಈ ಮೂಲಕ ಪುಲ್ವಾಮಾ ಮಾದರಿಯ ಮತ್ತೊಂದು ದಾಳಿಯನ್ನು ಸೇನಾ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ತಪ್ಪಿಸಿದೆ.

Another Pulwama type attack averted
ತಪ್ಪಿದ ಮತ್ತೊಂದು ಪುಲ್ವಾಮಾ ಮಾದರಿಯ ದಾಳಿ

ಗಡಿಕಲ್​​ನ ಕರೇವಾ ಪ್ರದೇಶದಲ್ಲಿ ಇಂದು ಬೆಳಿಗ್ಗೆ 8 ಗಂಟೆ ಸುಮಾರಿಗೆ ಪ್ರಾರಂಭಿಸಲಾದ ಜಂಟಿ ಕಾರ್ಯಾಚರಣೆ ವೇಳೆ ನೆಲದಲ್ಲಿ ಹುದುಗಿಸಿಟ್ಟಿದ್ದ ಸಿಂಟೆಕ್ಸ್​ ಟ್ಯಾಂಕ್‌ ದೊರೆತಿದೆ. ಈ ವೇಳೆ ಇನ್ನೂ ಆಳವಾಗಿ ಶೋಧ ನಡೆಸಿದಾಗ 125 ಗ್ರಾಂನ 416 ಪ್ಯಾಕೆಟ್​ ಸ್ಫೋಟಕಗಳು ದೊರೆತಿವೆ. ಅಂದರೆ ಒಟ್ಟು 52 ಕೆಜಿ ಸ್ಫೋಟಕ ದೊರೆತಿದ್ದು, ಅವನ್ನು ವಶಪಡಿಸಿಕೊಳ್ಳಲಾಗಿದೆ.

ಅದೇ ರೀತಿಯಾದ ಇನ್ನೊಂದು ಸಿಂಟೆಕ್ಸ್​ನಲ್ಲಿ 50 ಡಿಟೋನೇಟರ್ಸ್ ದೊರೆತಿವೆ. ಕರೇವಾದಲ್ಲಿನ ಈ ಸ್ಥಳವು ರಾಷ್ಟ್ರೀಯ ಹೆದ್ದಾರಿ ಮತ್ತು ಲೆಟಾಪೋರಾದ 9 ಕೆಎಂಎಸ್ಇಗೆ ಬಹಳ ಹತ್ತಿರದಲ್ಲಿದೆ ಮತ್ತು ಪುಲ್ವಾಮಾ ಘಟನೆ ಸಂಭವಿಸಿದ ಪ್ರದೇಶದಲ್ಲಿದೆ.

Last Updated : Sep 17, 2020, 10:58 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.