ETV Bharat / bharat

ಬಾರ್​ ಏನೋ ಓಪನ್​ ಆಗಿವೆ...ಆದರೆ, ಕುಡುಕರು ಮದ್ಯ ನಿಷೇಧ ತೆರಿಗೆಯನ್ನೂ ನೀಡಬೇಕು! - ವಿಜಯವಾಡ

ಜನರು ಮದ್ಯ ಸೇವಿಸುವುದನ್ನು ಮಿತಗೊಳಿಸುವ ಸಲುವಾಗಿ ಆಂಧ್ರಪ್ರದೇಶ ಸರ್ಕಾರವು ಮದ್ಯದ ಮೇಲೆ ನಿಷೇಧ ತೆರಿಗೆ ವಿಧಿಸಲು ಮುಂದಾಗಿದೆ.

Andhra to allow liquor sale from today but with 'prohibition tax'
ಮದ್ಯನಿಷೇಧ ತೆರಿಗೆ
author img

By

Published : May 4, 2020, 10:45 AM IST

ವಿಜಯವಾಡ: ಮದ್ಯಪ್ರಿಯರಿಗೇನೋ ಸರ್ಕಾರ ಶುಭಸುದ್ದಿ ನೀಡಿದೆ. ಆದರೆ, ಜನರ ಆರೋಗ್ಯ ದೃಷ್ಟಿಯಿಂದ ಕೆಲವು ಷರತ್ತು ಹಾಕಲು ಆಂಧ್ರಪ್ರದೇಶ ಸರ್ಕಾರ ನಿರ್ಣಯವೊಂದನ್ನು ಕೈಗೊಂಡಿದೆ.

ಇಂದಿನಿಂದ ಆಂಧ್ರಪ್ರದೇಶದಲ್ಲಿ ಮದ್ಯದಂಗಡಿಗಳನ್ನು ತೆರೆಯಲಾಗಿದೆ. ಆದರೆ, ಈ ಮದ್ಯಕ್ಕೆ ನಿಷೇಧ ತೆರಿಗೆ ಹೇರಲು ಸರ್ಕಾರ ಮುಂದಾಗಿದೆ ಎಂದು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ವಿಶೇಷ ಮುಖ್ಯ ಕಾರ್ಯದರ್ಶಿ ರಜತ್ ಭಾರ್ಗವ ತಿಳಿಸಿದ್ದಾರೆ.

ನಾವು ರಾಜ್ಯದ ಆದಾಯಕ್ಕೆ ಸಂಬಂಧಿಸಿಂತೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಆದರೆ, ಮದ್ಯ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಸರ್ಕಾರ ಕಾಳಜಿ ವಹಿಸಿ ನಿಷೇಧ ತೆರಿಗೆ ವಿಧಿಸುತ್ತಿದ್ದೇವೆ. ಈ ತೆರಿಗೆ ಮೊತ್ತವನ್ನು ಶೀಘ್ರದಲ್ಲೇ ನಿರ್ಧರಿಸಲಾಗುವುದು ಎಂದು ಭಾರ್ಗವ ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿ 3,500 ಮದ್ಯದ ಅಂಗಡಿಗಳನ್ನು ತೆರೆಯಲಾಗುತ್ತದೆ. ಇನ್ನು ಮಾಲ್​ಗಳಲ್ಲಿನ ಮದ್ಯದ ಅಂಗಡಿ ತೆರೆಯಲು ಅವಕಾಶ ಇರುವುದಿಲ್ಲ. ರೆಡ್​ಝೋನ್​ ಹೊತರುಪಡಿಸಿ ಉಳಿದೆಲ್ಲಾ ವಲಯಗಳಲ್ಲಿ ಮದ್ಯದ ಅಂಗಡಿ ತೆರೆಯಲು ಸೂಚಿಸಲಾಗಿದೆ ಎಂದು ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.