ETV Bharat / bharat

ಡೀಸೆಲ್​​ ಟ್ಯಾಂಕ್​​ನಲ್ಲಿ ಅಕ್ರಮ ಮದ್ಯ ಸಾಗಣೆ: 1,052 ಬಾಟಲಿ ವಶ

author img

By

Published : Aug 26, 2020, 7:31 AM IST

ಆಂಧ್ರ ಪ್ರದೇಶದ ಮೈಲವರಂ ಪುಲ್ಲುರು ಕ್ರಾಸ್ ರಸ್ತೆಯಲ್ಲಿ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಎರಡು ಪ್ರತ್ಯೇಕ ಘಟನೆಗಳಲ್ಲಿ ಏಳು ಜನರನ್ನು ಬಂಧಿಸಲಾಗಿದ್ದು, 1052 ಮದ್ಯದ ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗಿದೆ.

Andhra Pradesh police seize liquor transported illegally in diesel tank of lorry
ಲಾರಿಯ ಡೀಸೆಲ್ ಟ್ಯಾಂಕ್ ನಲ್ಲಿ ಅಕ್ರಮ ಮದ್ಯ ಸಾಗಣೆ: 1052 ಮದ್ಯದ ಬಾಟಲಿಗಳ ವಶ

ಕೃಷ್ಣ(ಆಂಧ್ರ ಪ್ರದೇಶ): ರಾಜ್ಯದ ಮೈಲವರಂ ಪುಲ್ಲುರು ಕ್ರಾಸ್ ರಸ್ತೆಯಲ್ಲಿ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಲಾರಿಯನ್ನು ಆಂಧ್ರ ಪ್ರದೇಶ ಪೊಲೀಸರು ಮಂಗಳವಾರ ವಶಪಡಿಸಿಕೊಂಡಿದ್ದಾರೆ.

ಲಾರಿಯ ಡೀಸೆಲ್ ಟ್ಯಾಂಕ್​​ಅನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದ್ದು, ಅದರಲ್ಲಿ ಒಂದು ಭಾಗದಲ್ಲಿ ಮದ್ಯದ ಬಾಟಲಿಗಳನ್ನು ಸಂಗ್ರಹಿಸಲಾಗಿತ್ತು.

ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಎರಡು ಪ್ರತ್ಯೇಕ ಘಟನೆಗಳಲ್ಲಿ ಏಳು ಜನರನ್ನು ಬಂಧಿಸಲಾಗಿದ್ದು, 1052 ಮದ್ಯದ ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಜೊತೆಗೆ ಲಾರಿ, ಟ್ರಕ್, ಆಟೋ ಮತ್ತು ಪೈಲಟ್ ವಾಹನಗಳಾಗಿ ಬಳಸಲಾಗಿದ್ದ ಕಾರು ಮತ್ತು ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅನುಮಾನ ಬಂದ ಹಿನ್ನೆಲೆ ಲಾರಿ ಮೇಲೆ ಮೈಲವರಂ ಪೊಲೀಸರು ದಾಳಿ ನಡೆಸಿದ್ದಾರೆ. ವಾಹನದ ಸಂಪೂರ್ಣ ಶೋಧದ ನಂತರ ಡೀಸೆಲ್ ಟ್ಯಾಂಕ್‌ನಲ್ಲಿ ಅಕ್ರಮವಾಗಿ ಮದ್ಯ ಸಾಗಿಸಲಾಗುತ್ತಿದೆ ಎಂಬುದು ತಿಳಿದು ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.