ETV Bharat / bharat

ವಿಶೇಷ ಅಂಕಣ: ಹೊಸ ಹಾಂಕಾಂಗ್‌ ಅಗಲಿವೆಯೇ ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಗುಚ್ಛಗಳು..?

ಹಾಂಕಾಂಗ್‌ನ ಮುಕ್ತ ಆರ್ಥಿಕ ನೀತಿ, ಸ್ವಾತಂತ್ರ್ಯದ ಬಗ್ಗೆ ಈಗಾಗಲೇ ಹಲವು ಸಂಸ್ಥೆಗಳಲ್ಲಿ ಕಳವಳ ಆರಂಭಗೊಂಡಿದೆ. ಕಠಿಣ ರಾಷ್ಟ್ರೀಯ ಭದ್ರತಾ ಕಾನೂನನ್ನು ಜಾರಿಗೊಳಿದ ಬಳಿಕ, ಈ ಸಂಸ್ಥೆಗಳು, ಹಾಂಕಾಂಗ್​‌ಗೆ ಪರ್ಯಾಯ ದ್ವೀಪ, ಮುಕ್ತ ಬಂದರಿನ ಅನ್ವೇಷಣೆಯಲ್ಲಿ ತೊಡಗಿವೆ. ಇದು, ಭಾರತದ ಅಂಡಮಾನ್ ನಿಕೋಬಾರ್​ ಇನ್ನೊಂದು ಹಾಕಾಂಗ್​ ಆಗುವ ಸೂಚನೆಗಳನ್ನು ನೀಡುತ್ತಿದೆ.

author img

By

Published : Oct 4, 2020, 10:31 PM IST

Andaman & Nicobar Islands to develop as a new Hong Kong
ಹಾಂಕಾಂಗ್ ಅಗಲಿದೆಯೆ ಅಂಡಮಾನ್​ ನಿಕೋಬಾರ್

ಕೋವಿಡ್ -19 ಸಾಂಕ್ರಾಮಿಕ ರೋಗದ ಕಾರಣಕ್ಕಾಗಿ, ವಿಶ್ವಾದ್ಯಂತ ಇಂದು ಚೀನಾ ವಿರೋಧಿ ಭಾವನೆಗಳು ವೇಗವಾಗಿ ಹರಡುತ್ತಿದೆ. ಈ ನಡುವೆ, ಚೀನಾ ಮೇ ತಿಂಗಳಲ್ಲಿ ಹಾಂಕಾಂಗ್​​ ನ ಕಾನೂನುಗಳಲ್ಲಿ ಭಾರೀ ಬದಲಾವಣೆ ತಂದಿದೆ. ಈ ಪುಟ್ಟ ರಾಜ್ಯದಲ್ಲಿ ಅತಿ ಕಠಿಣ ಭದ್ರತಾ ಕಾನೂನನ್ನು ಜಾರಿಗೊಳಿಸಿದೆ. 2019 ರ ಮಧ್ಯ ಭಾಗದಿಂದೀಚೆಗೆ ಹಾಂಕಾಂಗ್‌ನಲ್ಲಿ ಪ್ರಜಾಪ್ರಭುತ್ವ ಪರ ಪ್ರತಿಭಟನೆಗಳು ಸಾಗಿವೆ. ಇದು ದಿಡೀರ್ ಆಗಿ ಹಿಂಸಾತ್ಮಕ ರೂಪ ಪಡೆಯಿತು. ವಿದೇಶಿ ಶಕ್ತಿಗಳ ಜೊತೆಗೆ ಕೈಜೋಡಿಸಿ, ಸಂಚು ರೂಪಿಸಿದ ಆರೋಪ ಹೊರಿಸಿ, ಚೀನಾ ನೂರಾರು ಪ್ರತಿಭಟನಾಕಾರರನ್ನು ಬಂಧಿಸಿದೆ. ಈ ಪ್ರತಿಭಟನಾಕಾರ ಮೇಲೆ ದೌರ್ಜನ್ಯ ಕೂಡ ಎಸಗಲಾಗಿದೆ.

ಹಾಂಕಾಂಗ್​‌ನ ಪ್ರತಿಭಟನಾಕಾರರು ಚೀನಾದ ಕಮ್ಯುನಿಸ್ಟ್ ಸರಕಾರ, ಎರಡನೇ ಮಹಾಯುದ್ಧದ ನಂತರ ಚೀನಾ ಹಾಗು ಬ್ರಿಟನ್ ನಡುವೆ ನಡೆದ ಒಪ್ಪಂದವನ್ನು ಚೀನಾ ಗೌರವಿಸಬೇಕೆಂದು ಒತ್ತಾಯಿಸುತ್ತಿದ್ದಾರೆ. ಈ ಒಪ್ಪಂದದ ಪ್ರಕಾರ, ಬ್ರಿಟನ್ ಶಾಂತಿಯುತವಾಗಿ 1 ಜುಲೈ 1997 ರಂದು ಹಾಂಕಾಂಗ್‌ ಅನ್ನು ಚೀನಾಕ್ಕೆ ಹಸ್ತಾಂತರಿಸಿತು. ಇದಕ್ಕೆ ಪ್ರತಿಯಾಗಿ, 2047 ರವರಗೆ ಹಾಂಕಾಂಗ್​‌ನಲ್ಲಿ ಮುಕ್ತ ಮಾರುಕಟ್ಟೆ ವ್ಯವಸ್ಥೆ ಹಾಗು ಬ್ರಿಟಿಷ್ ಕಾನೂನು ಪದ್ಧತಿ ಪಾಲಿಸುವುದಾಗಿ ಚೀನಾ ಭರವಸೆ ನೀಡಿತ್ತು.

ಆದರೆ ಇದೀಗ, ಚೀನಾ, ಬ್ರಿಟನ್ ಜೊತೆಗಿನ ಈ ಒಪ್ಪಂದವನ್ನು ಗೌರವಿಸಲು ಸಿದ್ಧವಿಲ್ಲ ಎಂಬ ಸ್ಪಷ್ಟ ಸಂಜ್ಞೆ, ಚಿನ್ಹೆ ಹಾಗು ಸಂದೇಶಗಳು ಬರಲಾರಂಭಿಸಿವೆ. ಇದು, ವಿಶ್ವದ ಹಣಕಾಸು ರಾಜಧಾನಿ ಹಾಗು ಮುಕ್ತ ಬಂದರು ಎಂಬ ಹಾಂಕಾಂಗ್​‌ನ ಹೆಗ್ಗಳಿಕೆಗೆ ಧಕ್ಕೆ ಉಂಟು ಮಾಡಬಹುದು ಎಂಬ ಭೀತಿ ತಲೆದೋರಿದೆ.

ಈ ಭೀತಿಯ ಪರಿಣಾಮವಾಗಿ ಇದೀಗ, ಇಲ್ಲಿನ ಔದ್ಯಮಿಕ ಕುಟುಂಬಗಳು, ಮನೆತನಗಳು, ಸಂಸ್ಥೆಗಳು ವಿಶೇಷವಾಗಿ ಅಲ್ಲಿ ನೆಲೆಸಿರುವ, 8% ಚೀನೀಯೇತರ ಜನಾಂಗದವರು ಹಾಂಕಾಂಗ್‌ ತೊರೆಯುವತ್ತ ಯೋಚಿಸುತ್ತಿದ್ದಾರೆ. ಈ 8% ಜನಸಂಖ್ಯೆಯಲ್ಲಿ ಯುರೋಪ್, ಏಷ್ಯಾ ಮತ್ತು ಭಾರತೀಯ ಉಪಖಂಡದ ಗುಂಪುಗಳು ಸೇರಿವೆ. ಈ ಗುಂಪುಗಳು ದಶಕಗಳಿಂದ ಇಲ್ಲಿ ನೆಲೆ ನಿಂತಿವೆ.

ಹಾಂಕಾಂಗ್​‌ನ ನೈರುತ್ಯ ದಿಕ್ಕಿನಲ್ಲಿ ವಿಶ್ವದ ಇನ್ನೊಂದು ಪ್ರಮುಖ ಹಣಕಾಸು ಶಕ್ತಿ ಕೇಂದ್ರ ಸಿಂಗಾಪುರವಿದೆ. ಇದು ಮಲಾಕ್ಕಾ ಜಲಸಂಧಿಯ ಪೂರ್ವ ಭಾಗದಲ್ಲಿದೆ. ಈ ಜಲ ಸಂಧಿಯ ಪಶ್ಚಿಮ ಭಾಗದಲ್ಲಿ ಭಾರತದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಗುಚ್ಛವಿದೆ. ಇದು ಹಿಂದೂ ಮಹಾಸಾಗರದ ಆರಂಭಿಕ ಸ್ಥಳ. ಈ ದ್ವೀಪ ಗುಚ್ಛ, ಒಟ್ಟು 572 ದ್ವೀಪಗಳನ್ನು ಹೊಂದಿದೆ. ಒಟ್ಟಾರೆಯಾಗಿ, ಈ ದ್ವೀಪ ಸಮೂಹ 8,259 ಚದರ ಕಿ.ಮೀ. ವ್ಯಾಪಿಸಿದೆ.

ಈ ದ್ವೀಪ ಗುಚ್ಛದ ದ್ವೀಪಗಳ ಪೈಕಿ, ನಿಕೋಬಾರ್ ದ್ವೀಪವು ಮಲಕ್ಕಾ ಜಲಸಂಧಿಯ ಪಶ್ಚಿಮ ಭಾಗಕ್ಕೆ ಅತಿ ಸಮೀಪದಲ್ಲಿದೆ. ಈ ದ್ವೀಪದಲ್ಲಿ 5 ನದಿಗಳು ಹರಿಯುತ್ತಿವೆ. ಇದರ ಭೂ ಪ್ರದೇಶ ಬಹುತೇಕ, ಪರ್ವತ ಪ್ರದೇಶವಾಗಿದೆ. ಸಾಕಷ್ಟು ಪ್ರಮಾಣದಲ್ಲಿ ಶುದ್ಧ ಕುಡಿಯುವ ನೀರನ್ನು ಈ ದ್ವೀಪ ಹೊಂದಿದೆ. ಒಟ್ಟಾರೆ 1,044 ಚದರ ಕಿ.ಮೀ ವ್ಯಾಪಿಸಿರುವ ಈ ದ್ವೀಪ, ಸಿಂಗಾಪುರಕ್ಕಿಂತ ದೊಡ್ಡದಾಗಿದೆ ( 720 ಚದರ ಕಿ.ಮೀ) ಆದರೆ ಹಾಂಕಾಂಗ್‌ (1,106 ಚದರ ಕಿ.ಮೀ) ಗಿಂತ ಸ್ವಲ್ಪ ಚಿಕ್ಕದಾಗಿದೆ.

ಗಮನಾರ್ಹ ಸಂಗತಿಯೆಂದರೆ, 1962 ರ ಯುದ್ಧದಲ್ಲಿ ಚೀನಾ ಸೋತ ಬಳಿಕ, ಭಾರತ ಸರಕಾರ 330 ಮಾಜಿ ಸೈನಿಕರ ಕುಟುಂಬಕ್ಕೆ ಇಲ್ಲೇ ಪುನರ್ವಸತಿ ಕಲ್ಪಿಸಿತು. ಗಡಿ ರಸ್ತೆಗಳ ಸಂಸ್ಥೆ (ಬಾರ್ಡರ್ ರೋಡ್ಸ್ ಆರ್ಗನೈಸೇಷನ್ ) ಮೂಲಕ ಈ ಕುಟುಂಬಗಳಿಗೆ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗಿದೆ.

ಸೈನಿಕ ಕಾರ್ಯ ತಂತ್ರದ ಭಾಗವಾಗಿ, ಈ ದ್ವೀಪ ಭಾರತದ ಮಟ್ಟಿಗೆ ಅತಿ ಪ್ರಾಮುಖ್ಯ ಸ್ಥಳ. ಇದರ ಜೊತೆಗೆ ಬಹಳ ಹಿಂದೆಯೇ ಈ ದ್ವೀಪದ ವಾಣಿಜ್ಯಾತ್ಮಕ ಪ್ರಾಮುಖ್ಯತೆಯನ್ನು ಗುರುತಿಸಲಾಗಿತ್ತು. 1970 ರಲ್ಲಿ ಈ ಬಗ್ಗೆ ಭಾರತೀಯ ವ್ಯಾಪಾರ ಅಭಿವೃದ್ಧಿ ಸಂಸ್ಥೆ (ಟಿಪಿಒ) ತನ್ನ ವರದಿಯಲ್ಲಿ ಪ್ರಸ್ತಾಪಿಸಿದೆ. ಈ ವರದಿಯಲ್ಲಿ, 1997 ರಲ್ಲಿ ಬ್ರಿಟಿಷರು ಹಾಂಕಾಂಗ್‌ ತೊರೆಯುವಾಗ, ಆ ದೇಶ ಚೀನಾದ ಮುಖ್ಯ ಭೂಭಾಗದೊಂದಿಗೆ ವಿಲೀನಗೊಳ್ಳುತ್ತದೆ. ಈ ಸಂದರ್ಭದಲ್ಲಿ, ಹಾಂಕಾಂಗ್​‌ನ ವಾಣಿಜ್ಯ ಗುಂಪುಗಳು, ಸಂಸ್ಥೆಗಳು, ಕಂಪನಿಗಳು, ಮುಕ್ತ ಮಾರುಕಟ್ಟೆ ಪ್ರದೇಶಕ್ಕೆ ಸ್ಥಳಾಂತರಗೊಳ್ಳಲು ಇದೇ ರೀತಿಯ ಸ್ಥಳವನ್ನು ಹುಡುಕುತ್ತವೆ. ಈ ಹಿನ್ನಲೆಯಲ್ಲಿ, ನಿಕೋಬಾರ್ ದ್ವೀಪ ಅಭಿವೃದ್ಧಿಪಡಿಸಿದರೆ, ಜೊತೆಗೆ ಒಂದು ಮುಕ್ತ ಬಂದರು ನಿರ್ಮಿಸಿದರೆ ಎಲ್ಲರೂ ಇಲ್ಲಿಗೆ ಸ್ಥಳಾಂತರಗೊಳ್ಳಬಹುದು ಎಂದು ಅಂದಾಜಿಸಲಾಗಿತ್ತು.

ಹಾಂಕಾಂಗ್‌ನ ಒಟ್ಟು ಜನಸಂಖ್ಯೆ ಸುಮಾರು 75 ಲಕ್ಷ. ಈ ಪೈಕಿ ಬಹುಪಾಲು ಜನರು ಚೀನಾ ಜನಾಂಗೀಯ ಮೂಲದವರೇ. ಆದರೆ, ಹಾಂಕಾಂಗ್ ಸುಮಾರು 8% ಚೀನೀ ಅಲ್ಲದ ಜನಾಂಗೀಯ ಜನಸಂಖ್ಯೆಯನ್ನು ಸಹ ಹೊಂದಿದೆ. ಈ ಗುಂಪಿನಲ್ಲಿ, ಮೂಲತಃ ಯುರೋಪ್, ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಫಿಲಿಪೈನ್ಸ್‌ನವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಪೈಕಿ, ಸುಮಾರು 22 ಸಾವಿರ ಮಂದಿ ಭಾರತೀಯರು. ಅವರಲ್ಲಿ ಹೆಚ್ಚಿನವರು ಅಂತಾರಾಷ್ಟ್ರೀಯ ವ್ಯಾಪಾರದಲ್ಲಿ ಯಶಸ್ವಿಯಾಗಿ ನೆಲೆ ಕಂಡುಕೊಂಡಿದ್ದಾರೆ.

1970 ರಲ್ಲಿಯೇ ಟಿಪಿಒ ವರದಿ ಸಲ್ಲಿಕೆಯಾಗಿದ್ದರು, ಅದು ಈ ತನಕ ಜಾರಿಗೆ ಬಂದಿಲ್ಲ. ಆದರೆ ಅದೀಗ ಬಹಳ ಪ್ರಾಮುಖ್ಯತೆಯ ವರದಿ ಎನ್ನುವುದು "ಗೋಡೆಯ ಮೇಲಿನ ಬರಹದಷ್ಟೇ" ಶ್ರುತ ಪಟ್ಟಿದೆ. ಹಾಂಕಾಂಗ್‌ನ ಮುಕ್ತ ಆರ್ಥಿಕ ನೀತಿ, ಸ್ವಾತಂತ್ರ್ಯದ ಬಗ್ಗೆ ಈಗಾಗಲೇ ಹಲವು ಸಂಸ್ಥೆಗಳಲ್ಲಿ ಕಳವಳ ಆರಂಭಗೊಂಡಿದೆ. ಕಠಿಣ ರಾಷ್ಟ್ರೀಯ ಭದ್ರತಾ ಕಾನೂನನ್ನು ಜಾರಿಗೊಳಿದ ಬಳಿಕ, ಈ ಸಂಸ್ಥೆಗಳು, ಹಾಂಕಾಂಗ್​‌ಗೆ ಪರ್ಯಾಯ ದ್ವೀಪ, ಮುಕ್ತ ಬಂದರಿನ ಅನ್ವೇಷಣೆಯಲ್ಲಿ ತೊಡಗಿವೆ. ಮುಕ್ತ ಕಡಲು ಮಾರ್ಗದ ಹುಡುಕಾಟದಲ್ಲಿ ಅವು ತೊಡಗಿವೆ.

ಈ ಎಲ್ಲಾ ಬೆಳವಣಿಗೆಗಳ ಹಿನ್ನಲೆ ಗಮನಿಸಿದರೆ, ಆಗಸ್ಟ್ 10 ರಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ ಚೆನ್ನೈನಿಂದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ಅಳವಡಿಸಲಾಗಿರುವ, ಸಮುದ್ರದೊಳಗಿನ ಆಪ್ಟಿಕಲ್ ಫೈಬರ್ ಯೋಜನೆ ಮಹತ್ವ ಪಡೆದುಕೊಂಡಿದೆ. ರೂಪಾಯಿ 1,224 ಕೋಟಿ ವೆಚ್ಚದಲ್ಲಿ, ಅನುಷ್ಠಾನಗೊಳಿಸಲಾಗಿರುವ ಈ ಯೋಜನೆಯು 2,312 ಕಿ.ಮೀ ಉದ್ದದ ಜಾಲವಾಗಿದೆ. ಸಮುದ್ರದೊಳಗಿಂದ, ಈ ಫೈಬರ್ ಜಾಲ ಅಳವಡಿಸಲಾಗಿದೆ.

ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ಮೋದಿ ಮಾಡಿದ ಭಾಷಣ, ಅವರು ಪ್ರಸ್ತಾಪಿಸಿದ ಅಂಶಗಳು ಅಪಾರ ಮಹತ್ವವನ್ನು ಪಡೆದಿದೆ. ಅವರ ಪ್ರಕಾರ, ಈ ಹೊಸ ಆಪ್ಟಿಕಲ್ ಫೈಬರ್ ಜಾಲ ಈ ಭಾಗದ ಅಭಿವೃದ್ಧಿಗೆ ಹೊಸ ಆಯಾಮ ನೀಡಲಿದೆ. ಜೊತೆಗೆ, ಇದು, ಪೂರ್ವದತ್ತ ಹೆಚ್ಚಿನ ಗಮನ ನೀಡುವ ಭಾರತದ ವಿದೇಶಾಂಗ ನೀತಿಗೆ ಪೂರಕವಾಗಿದ್ದು, ಈ ಭಾಗದ ಅಭಿವೃದ್ಧಿ ಹಿನ್ನಲೆಯಲ್ಲಿ ಹೊಸ ಶಕೆಯಾಗಲಿದೆ. ಈ ಭಾಗದಲ್ಲಿ ಸುಸಜ್ಜಿತ ವಿಮಾನ ನಿಲ್ದಾಣ ನಿರ್ಮಿಸಿ, ಆ ಮೂಲಕ, ಇಲ್ಲಿಗೆ ವಿಮಾನ ಸಂಪರ್ಕ ಕಲ್ಪಿಸಲಾಗುವುದು. ಜೊತೆಗೆ, ಇಲ್ಲಿ ಸುಸಜ್ಜಿತ ಹಡಗು ರಿಪೇರಿ ಕಟ್ಟೆಗಳನ್ನು ನಿರ್ಮಿಸಿ, ಈ ಕಡಲು ಮಾರ್ಗದಲ್ಲಿ ಸಂಚರಿಸುವ, ಹಡಗುಗಳಿಗೆ ನೆರವು ನೀಡಲಾಗುವುದು ಎಂದು ಘೋಷಿಸಿದ್ದಾರೆ.

ಇನ್ನು ಮಲಕ್ಕಾ ಜಲಸಂಧಿಯು ವಿಶ್ವದ ಅತ್ಯಂತ ನಿಬಿಡ ಕಾರ್ಯನಿರತ ಸಮುದ್ರ ಮಾರ್ಗಗಳಲ್ಲಿ ಒಂದಾಗಿದೆ. ಜಾಗತಿಕ ವ್ಯಾಪಾರದ ಭಾಗವಾಗಿ ವಾರ್ಷಿಕವಾಗಿ ಸುಮಾರು 70 ಸಾವಿರ ಹಡಗುಗಳು ಈ ಸಮುದ್ರ ಮಾರ್ಗದ ಮೂಲಕ ಹಾದು ಹೋಗುತ್ತವೆ. ದಕ್ಷಿಣ ಚೀನಾ ಸಮುದ್ರದ ಮೂಲಕ ಎರಡು ದಿಕ್ಕುಗಳಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ವ್ಯಾಪಾರ ವಹಿವಾಟು ನಡೆಯುತ್ತದೆ. ವಿಶ್ವದ ತೈಲ ಸಾಗಾಟದ 25% ಈ ಸಮುದ್ರ ಮಾರ್ಗದಲ್ಲೇ ನಡೆಯುತ್ತದೆ. 150 ಲಕ್ಷ ಬ್ಯಾರೆಲ್‌ಗಳಷ್ಟು ದಿನನಿತ್ಯ ಈ ಮಾರ್ಗದಲ್ಲಿ ಸಾಗಿಸಲಾಗುತ್ತದೆ. ಇದಲ್ಲದೆ, ನೂರಾರು ಅಗತ್ಯ ಸರಕು ಹಡಗುಗಳು, ಭಾರತ, ಆಸ್ಟ್ರೇಲಿಯಾ, ಆಫ್ರಿಕಾ, ಯುರೋಪ್ ಮತ್ತು ಅನೇಕ ಏಷ್ಯಾ ದೇಶಗಳ ಸರಕು ಹಡಗುಗಳು, ಮಲಾಕ್ಕಾ ಜಲಸಂಧಿಯ ಮೂಲಕ ಹಾದುಹೋಗುತ್ತವೆ. ಇದು, ಈ ಸಮುದ್ರ ಮಾರ್ಗದ ಮಹತ್ವವನ್ನು ಸೂಚಿಸುತ್ತದೆ.

ಈ ಹಿನ್ನೆಲೆಯಲ್ಲಿಯೇ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳನ್ನು ಹಡಗು ದುರಸ್ತಿಯ ಕೇಂದ್ರಗಳಾಗಿ ಅಭಿವೃದ್ಧಿಪಡಿಸುವ ಯೋಜನೆಯ ಬಗ್ಗೆ ಪ್ರಧಾನಿ ಮೋದಿ ಪ್ರಸ್ತಾಪಿಸಿರುವುದು ಮಹತ್ವ ಪಡೆದಿದೆ. ಇದು, ಈ ಭಾಗದಲ್ಲಿ ಭಾರತದ ಹೊಸ ಯೋಜನೆಗಳ ಬಗ್ಗೆ ಒಂದು ನೋಟ ನೀಡುತ್ತದೆ. ಭಾರತ-ಚೀನಾ ನಡುವಣ ಸಂಬಂಧ ತೀರಾ ಹಳಸಿದ್ದು, ಈ ಹಿನ್ನಲೆಯಲ್ಲೇ, ಭಾರತ- ಚೀನಾಕ್ಕೆ ಪರ್ಯಾಯವಾಗಿ ನಾನಾ ವಾಣಿಜ್ಯ ಉಪಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿದೆ.
1970 ರ ಟಿಪಿಒ ವರದಿಯನ್ನು ಭಾರತ ಸರಕಾರ ಒಪ್ಪಿಕೊಂಡಿದ್ದು, ಹೊಸ ಯೋಜನೆಗಳನ್ನು ಈ ದ್ವೀಪ ಪ್ರದೇಶಗಳಲ್ಲಿ ಜಾರಿಗೊಳಿಸಲು ಮುಂದಾಗಿದೆ.

ಇನ್ನು, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿನ ಅಭಿವೃದ್ಧಿ ಬೆಳವಣಿಗೆಗಳು, ಒಂದು ರೀತಿಯ ಮಾದರಿಯನ್ನು ಸೂಚಿಸುತ್ತವೆ. ಈ ಪ್ರದೇಶದಲ್ಲಿ ಭಾರತ ಸರಕಾರ ಹೊಸ ಹೊಸ ಯೋಜನೆಗಳ ಮೂಲಕ, ವಾಣಿಜ್ಯ ಚಟುವಟಿಕೆಗಳಿಗೆ ಇಂಬು ನೀಡುತ್ತಿದೆ. ಅಂಡಮಾನ್ ಮತ್ತು ನಿಕೋಬಾರ್ ಒಂದು ಕೇಂದ್ರಾಡಳಿತ ಪ್ರದೇಶ. ಕಳೆದ ವರ್ಷದ ಕೊನೆಯಲ್ಲಿ ನಿಕೋಬಾರ್ ದ್ವೀಪದಲ್ಲಿ ಅಂತಾರಾಷ್ಟ್ರೀಯ ದರ್ಜೆಯ ಕಂಟೈನರ್ ಟ್ರಾನ್ಸ್-ಶಿಪ್ಮೆಂಟ್ ಟರ್ಮಿನಲ್ (ಸಿಟಿಟಿ) ಯೋಜನೆಯನ್ನು ಸರಕಾರ ಕೈಗೆತ್ತಿಕೊಂಡಿದೆ. 10 ಸಾವಿರ ಕೋಟಿ ರೂಪಾಯಿ ಯೋಜನೆಯಿದು. ಈ ಯೋಜನೆಯ ಮೊದಲ ಹಂತದ ಕೆಲಸಗಳು 2025 ರ ವೇಳೆಗೆ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಆದರೆ, ಕೇಂದ್ರ ಸರಕಾರ ಈ ಕುರಿತ ಜಾಗತಿಕ ಟೆಂಡರ್​​ನಲ್ಲಿ ಚೀನಾ ಕಂಪನಿಗಳು ಪಾಲ್ಗೊಳ್ಳದಂತೆ ತಡೆಯಿತು. ಇದೊಂದು ಅನಧಿಕೃತ ನಿರ್ಧಾರವಾಗಿತ್ತು.

ಹೊಸ ಸಿಟಿಸಿ ನಿರ್ಮಾಣ, ನಿಕೋಬಾರ್​ನಲ್ಲಿ ಮುಕ್ತ ಬಂದರು ನಿರ್ಮಾಣ ನಿಟ್ಟಿನಲ್ಲಿ ಮೊದಲನೇ ಹೆಜ್ಜೆ. ಆದರೆ, ಈ ಮುಕ್ತ ಬಂದರು ನಿರ್ಮಾಣ ಒಂದು ಸಂಕೀರ್ಣ ಪ್ರಕ್ರಿಯೆಯಾಗಿದೆ. ಒಂದು ಸ್ವಾಯತ್ತ ತೆರಿಗೆ ವ್ಯವಸ್ಥೆಯನ್ನು ಜಾರಿಗೆ ತಂದರೆ ಮಾತ್ರ, ಪೂರ್ಣ ಪ್ರಮಾಣದಲ್ಲಿ ಈ ಕಲ್ಪನೆ ಸಾಕಾರಗೊಳ್ಳುತ್ತದೆ. ಇದು ಸಾಧ್ಯವಾಗಬೇಕಿದ್ದರೆ ನಿಕೋಬಾರ್ ದ್ವೀಪವನ್ನು ಭಾರತದ ಈಗಿನ ತೆರಿಗೆ ವ್ಯವಸ್ಥೆಯಿಂದ ಹೊರಗೆ ತರಬೇಕು. ಬಳಿಕ, ಈ ದ್ವೀಪ ಪ್ರದೇಶಕ್ಕೆ ಸೀಮಿತವಾದ ಹೊಸ ತೆರಿಗೆ ನಿಯಮವನ್ನು ರೂಪಿಸಬೇಕು. ಈ ದ್ವಿಪದ ಆಡಳಿತ ವ್ಯವಸ್ಥೆಯಲ್ಲಿ ಕೂಡ ಬದಲಾವಣೆ ಮಾಡಬೇಕಿದೆ. ಈಗಿನ, ಕೇಂದ್ರ ಗೃಹ ಸಚಿವಾಲಯದ ಆಡಳಿತಾತ್ಮಕ ನಿಯಂತ್ರಣದಿಂದ ದ್ವೀಪವನ್ನು ಹೊರಗೆ ತಂದು, ಅದನ್ನು ಕೇಂದ್ರ ವಾಣಿಜ್ಯ ಸಚಿವಾಲಯ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಜಂಟಿ ನಿಯಂತ್ರಣಕ್ಕೆ ನೀಡಬೇಕಿದೆ.

ವಾಣಿಜ್ಯ ವಹಿವಾಟು ಜೊತೆಗೆ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ದೊಡ್ಡ ಮಟ್ಟದ ಸೇನಾ ಪ್ರಾಮುಖ್ಯತೆಯನ್ನು ಕೂಡ ಹೊಂದಿವೆ. ಈ ಭೂ ಭಾಗ ದಕ್ಷಿಣ ಚೀನಾ ಸಮುದ್ರಕ್ಕೆ ಹತ್ತಿರದಲ್ಲಿದೆ. ದಕ್ಷಿಣ ಚೀನಾ ಈಗ ದೊಡ್ಡ ವಿವಾದಾತ್ಮಕ ಪ್ರದೇಶವಾಗಿ ಪರಿವರ್ತಿತವಾಗಿದೆ. ಅಮೆರಿಕ ಸಂಯುಕ್ತ ಸಂಸ್ಥಾನದ ಜೊತೆಗೆ, ಜಪಾನ್ ಹಾಗು ಆಸ್ಟ್ರೇಲಿಯಾ, ಆಸಿಯಾನ್ ರಾಷ್ಟ್ರಗಳೂ ಸಹ ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾದ ಪುಂಡಾಟವನ್ನು ಖಂಡಿಸಿವೆ.

ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾದ ಹೆಚ್ಚುತ್ತಿರುವ ಸೇನಾ ಚಟುವಟಿಕೆಗಳು, ಅನೇಕ ಆಸಿಯಾನ್ ರಾಷ್ಟ್ರಗಳಲ್ಲಿ - ವಿಶೇಷವಾಗಿ ಇಂಡೋನೇಷ್ಯಾ, ಲಾವೋಸ್, ಕಾಂಬೋಡಿಯಾ, ಮಲೇಷ್ಯಾ, ಫಿಲಿಪೈನ್ಸ್, ಥೈಲ್ಯಾಂಡ್ ಮತ್ತು ವಿಯೆಟ್ನಾಂಗಳಲ್ಲಿ ಸಂಶಯ ಉಂಟು ಮಾಡಿವೆ. ವಿಶೇಷವೆಂದರೆ, ಭಾರತದ ನೌಕಾಪಡೆ ಈ ದ್ವೀಪದ ಕ್ಯಾಂಪ್‌ಬೆಲ್ ಕೊಲ್ಲಿಯಲ್ಲಿರುವ ಸರಕು ಬಂದರಿನ ಬಳಿ "ಬಾಜ್" ಎಂದು ಕರೆಯಲ್ಪಡುವ ನೌಕಾ ದಳದ ನೆಲೆಯನ್ನು ಹೊಂದಿದೆ.

ಆಂತರಿಕ ಮೂಲಗಳ ಪ್ರಕಾರ, ಭಾರತ ತನ್ನ ಸೇನಾ ನೆಲೆಯನ್ನು ಈ ಭಾಗದಲ್ಲಿ ಬಲಪಡಿಸಲು ಬಹಳ ಉತ್ಸುಕವಾಗಿದೆ. ಈ ದ್ವೀಪ ಸಮೂಹದಲ್ಲಿ ಕ್ವಾಡ್ 3 ದೇಶಗಳಾದ ಭಾರತ, ಜಪಾನ್, ಹಾಗು ಆಸ್ಟ್ರೇಲಿಯಾ ದೇಶಗಳು ಸಾಮಾನ್ಯ ಸೇನಾ ನೆಲೆಯನ್ನು ಹೊಂದಲು ಉತ್ಸುಕವಾಗಿದ್ದು, ಭಾರತ ಈ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ.

ಕ್ವಾಡ್ ( ಕ್ವಾಡ್) ಅಂದರೆ ಚತುರ್ಭುಜ ಭದ್ರತಾ ಶೃಂಗವಾಗಿದ್ದು, ಅಮೇರಿಕ, ಭಾರತ, ಜಪಾನ್ ಹಾಗು ಆಸ್ಟ್ರೇಲಿಯಾಗಳು ಈ ಗುಂಪಿನ ದೇಶಗಳು.
ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾದ ಆಕ್ರಮಣಶೀಲತೆಗೆ ಪ್ರತಿಯಾಗಿ, ಈ ಗುಂಪನ್ನು ರಚಿಸಲಾಗಿದೆ. ಈ ಗುಂಪಿನ ಕಲ್ಪನೆಯನ್ನು ಸಾಕಾರಗೊಳಿಸುವ ಕಾರ್ಯತಂತ್ರದ ಭಾಗವಾಗಿ, ಆಗಸ್ಟ್ ತಿಂಗಳಿನಿಂದ ಈ ನಾಲ್ಕು ದೇಶಗಳ ವಿದೇಶಾಂಗ ಸಚಿವರು ಪ್ರತಿ ವಾರ ವರ್ಚುಯಲ್ ಸಭೆ ನಡೆಸುತ್ತಿದ್ದಾರೆ.

ವಾಸ್ತವವಾಗಿ, ಕ್ವಾಡ್ ಗುಂಪು ಬಹಳ ಹಿಂದಿನಿಂದಲೇ ಈ ಭಾಗದಲ್ಲಿ ಕ್ರಿಯಾಶೀಲವಾಗಿದ್ದು, ನಾನಾ ಪುಟಾಣಿ ಹೆಜ್ಜೆಗಳನ್ನು ತೆಗೆದುಕೊಳ್ಳುತ್ತಾ ಈಗ ದೊಡ್ಡ ಶಕ್ತಿಯಾಗಿ ಬೆಳೆಯುವ ಸಾಧ್ಯತೆ ತೋರಿಸಿದೆ. ಭಾರತ-ಚೀನಾ ನಡುವಣ,2017 ರ ಡೋಕ್ಲಾಮ್ ಬಿಕ್ಕಟ್ಟಿನ ಸಮಯದಲ್ಲಿ ಭಾರತ, ಜಪಾನ್ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನಗಳು ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಪ್ರದೇಶದಲ್ಲಿ ಜಂಟಿ ಸೇನಾ ಸಮರಾಭ್ಯಾಸವನ್ನು ನಡೆಸಿದ್ದವು.

ತೀರಾ ಇತ್ತೀಚಿಗೆ, ಲಡಾಕ್​ನಲ್ಲಿ ಭಾರತ-ಚೀನಾ ಸೇನೆಗಳು ಪರಸ್ಪರ ಮುಖಾಮುಖಿಯಾಗಿ ಉದ್ವಿಗ್ನ ಸ್ಥಿತಿ ನಿರ್ಮಾಣವಾದಾಗ ಅಮೆರಿಕ ಸಂಯುಕ್ತ ಸಂಸ್ಥಾನ ತನ್ನ ಪರಮಾಣು-ಚಾಲಿತ ಯುಎಸ್ಎಸ್ ನಿಮಿಟ್ಜ್ ಯುದ್ಧ ನೌಕೆಯನ್ನು ದಕ್ಷಿಣ ಚೀನಾಗೆ ಕಳುಹಿಸಿತ್ತು. ಜುಲೈ 20 ರಂದು ಭಾರತ-ಅಮೆರಿಕ ನೌಕಾ ಪಡೆಗಳು ಜಂಟಿ ಸಮರಾಭ್ಯಾಸವನ್ನು ಅಂಡಮಾನ್ ದ್ವೀಪದ ಬಳಿ ನಡೆಸಿದ್ದವು.

ಇನ್ನೊಂದು ಮಹತ್ವದ ವಿಷಯವೆಂದರೆ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಎರಡನೇ ಮಹಾಯುದ್ಧದ ಸಮಯದಲ್ಲಿ ಸುಮಾರು ಮೂರುವರೆ ವರ್ಷಗಳ ಕಾಲ ಜಪಾನ್ ವಶದಲ್ಲಿತ್ತು. ಹೀಗೆ, ಜಪಾನ್ ವಶದಲ್ಲಿದ್ದ ಭಾರತದ ಏಕೈಕ ಭಾಗವೆಂದರೆ ಈ ದ್ವೀಪ ಸಮುಚ್ಚಯಗಳು. ಈ ಹಿನ್ನಲೆಯಲ್ಲಿ, ಜಪಾನ್ ಕೂಡ ಈ ದ್ವೀಪಗಳ ಅಭಿವೃದ್ಧಿಯಲ್ಲಿ ಆಸಕ್ತಿ ತೋರಿಸಿದೆ. ಭಾರತದಂತೆಯೇ ಜಪಾನ್ ಕೂಡ, ಚೀನಾ ಜೊತೆಗೆ ಗಡಿ ವಿವಾದದಲ್ಲಿ ಸಿಲುಕಿಕೊಂಡಿದೆ.

ಆದರೆ, ಈ ದ್ವೀಪ ಸಮೂಹವನ್ನು ಅಪೇಕ್ಷಿತ ಮಟ್ಟಕ್ಕೆ ಅಭಿವೃದ್ಧಿಪಡಿಸುವುದು ಸುದೀರ್ಘ ಸಮಯ ತೆಗೆದುಕೊಳ್ಳುತ್ತದೆ. ಇದಕ್ಕೆ 11 ರಿಂದ 16 ವರ್ಷಗಳ ನಿರಂತರ ಶ್ರಮ ಬೇಕಿದೆ. ಒಂದೊಮ್ಮೆ, 2024 ರ ನಂತರ ಕೂಡ ಭಾರತದಲ್ಲಿ ರಾಜಕೀಯ ಸ್ಥಿರತೆ ಸಾಧ್ಯವಾದರೆ ಮತ್ತು ಪ್ರಸ್ತುತ ಸರ್ಕಾರ ಈ ದ್ವೀಪ ಗುಚ್ಛದ ಅಭಿವೃದ್ಧಿಗೆ ನಿರಂತರ ಬೆಂಬಲ ನೀಡಿದರೆ, ಇವುಗಳು, ವಿಶ್ವದ ಪ್ರಮುಖ ಮುಕ್ತ ಬಂದರು ಪ್ರದೇಶ ಹಾಗು ಕ್ವಾಡ್ ರಾಷ್ಟ್ರಗಳ ಪ್ರಮುಖ ಸೇನಾ ನೆಲೆಯಾಗಿ ಬೆಳೆದು ನಿಲ್ಲುವುದು ಖಚಿತ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.