ETV Bharat / bharat

ಅಪಾಯಕಾರಿ ನದಿ ದಾಟಿ ಕೆಲಸಕ್ಕೆ ಹಾಜರಿ: ಅಂಗನವಾಡಿ ಕಾರ್ಮಿಕರ ಸಹಾಯಕ್ಕೆ ಮುಂದಾದ ಆನಂದ್​ ಮಹೀಂದ್ರಾ!

author img

By

Published : Oct 22, 2020, 4:13 PM IST

ಪ್ರಾಣ ಪಣಕ್ಕಿಟ್ಟು ಅಪಾಯಕಾರಿ ನದಿ ದಾಟಿ ಕೆಲಸಕ್ಕೆ ಹಾಜರಾಗುತ್ತಿದ್ದ ಇಬ್ಬರು ಅಂಗನವಾಡಿ ಕಾರ್ಯಕರ್ತರಿಗೆ ಇದೀಗ ಆನಂದ್​ ಮಹೀಂದ್ರಾ ಸಹಾಯಹಸ್ತ ಚಾಚಿದ್ದಾರೆ.

Anganwadi workers in Odisha
Anganwadi workers in Odisha

ಮಲ್ಕಂಗಿರಿ(ಒಡಿಶಾ): ಬಡವರು, ಕಷ್ಟಪಟ್ಟು ದುಡಿಯುವವರು ಸೇರಿ ವಿವಿಧ ವರ್ಗದವರಿಗೆ ಈಗಾಗಲೇ ಸಹಾಯ ಮಾಡಿರುವ ಉದ್ಯಮಿ ಆನಂದ್​ ಮಹೀಂದ್ರಾ ಇದೀಗ ಅಂಗನವಾಡಿ ಕಾರ್ಯಕರ್ತರ ಸಹಾಯಕ್ಕೆ ಮುಂದಾಗಿದ್ದಾರೆ.

Anand Mahindra
ಆನಂದ್ ಮಹೀಂದ್ರಾ ಟ್ವೀಟ್​

ಒಡಿಶಾದ ಇಬ್ಬರು ಅಂಗನವಾಡಿ ಕಾರ್ಮಿಕರಿಗೆ ಸಹಾಯ ಮಾಡಲು ಅವರು ಮುಂದಾಗಿದ್ದಾರೆ. ನಿತ್ಯ ಅಪಾಯಕಾರಿ ನದಿ ದಾಟಿ ಇವರು ಕೆಲಸಕ್ಕೆ ಹೋಗುತ್ತಿದ್ದರು. ಮಲ್ಕಂಗಿರಿ ಜಿಲ್ಲೆಯ ಸ್ವಾಭಿಮಾನ್​​ ಪ್ರದೇಶದ ರಾಲೆಗಡ ಗ್ರಾಮ ಪಂಚಾಯ್ತಿ ಅಡಿ ವಿವಿಧ ಅಂಗನವಾಡಿ ಕೇಂದ್ರಗಳಲ್ಲಿ ಇಬ್ಬರು ಕಾರ್ಮಿಕರು ಪ್ರಾಣ ಪಣಕ್ಕಿಟ್ಟು ಕೆಲಸ ಮಾಡ್ತಿದ್ದರು.

ಇವರ ಅವ್ಯವಸ್ಥೆ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಕಟಗೊಂಡಿತ್ತು. ಇದರ ಮಾಹಿತಿ ತಿಳಿದುಕೊಂಡ ಆನಂದ್​ ಮಹೀಂದ್ರಾ ತನ್ನ ಸಿಎಸ್​ಆರ್​ ನಿಧಿಯಿಂದ ಅವರಿಗೆ ಗಾಳಿ ತುಂಬಿದ ಎರಡು ದೋಣಿ ಒದಗಿಸಲು ನಿರ್ಧರಿಸಿದ್ದಾರೆ.

ಅಂಗನವಾಡಿ ಕಾರ್ಮಿಕರ ಸಹಾಯಕ್ಕೆ ಮುಂದಾದ ಆನಂದ್​ ಮಹೀಂದ್ರಾ

ಮಳೆಗಾಲದ ಸಮಯದಲ್ಲಿ ಕರ್ತವ್ಯ ನಿರ್ವಹಿಸಲು ಇವರು ಅಪಾಯಕಾರಿ ನಾಲೆಯಲ್ಲಿ ದಾಟಿ ಕೆಲಸಕ್ಕೆ ಹಾಜರಾಗುತ್ತಿದ್ದರು. ಇದರ ಬಗ್ಗೆ ಈಟಿವಿ ಭಾರತ್​ ಕೂಡ ವರದಿ ಮಾಡಿತ್ತು. ಖಾಲಿ ಮಡಿಕೆಗಳನ್ನ ಸೋಂಟಕ್ಕೆ ಕಟ್ಟಿ ನಾಲೆ ದಾಟುತ್ತಿದ್ದರು. ಗೋದಾವರಿಯ ಉಪನದಿಯಾಗಿರುವ ನುಲ್ಲಾ ಮಾಲಿಗಡು ನದಿ ಅತ್ಯಂತ ವಿಶ್ವಾಸಘಾತುಕ ಎಂದು ಪರಿಗಣಿಸಲಾಗಿದೆ.

ಅಂಗನವಾಡಿ ಕಾರ್ಮಿಕರಾಗಿರುವ ಹೇಮಲತಾ ಹಾಗೂ ಆಕೆಯ ಸಹೋದ್ಯೋಗಿ ಪ್ರೀಮಿಳಾ ಕಿಲೋ ಮೀಟರ್​ ದೂರ ನಡೆದು, ತದನಂತರ ನದಿ ದಾಟುತ್ತಿದ್ದರು. ಈಗಾಗಲೇ ನದಿಗೆ 80 ಮೀಟರ್​ ಉದ್ದದ ಸೇತುವೆ ನಿರ್ಮಾಣ ಮಾಡಲು ಜಿಲ್ಲಾಡಳಿತ ಚಿಂತನೆ ನಡೆಸಿದೆ. ಆದರೆ ಇಲ್ಲಿಯವರೆಗೆ ಅದಕ್ಕೆ ಕಾಲ ಕೂಡಿ ಬಂದಿಲ್ಲ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.