ETV Bharat / bharat

ಕೊರೊನಾ ಜೊತೆಗೆ ಮಾನಸಿಕ ಆರೋಗ್ಯದ ಕಾಳಜಿಯೂ ಇಂದಿನ ಅಗತ್ಯ - ಆತ್ಮಹತ್ಯೆ ತಡೆ

ಭಾರತದಲ್ಲಿ ಪ್ರತಿ 1 ಲಕ್ಷ ಜನರಿಗೆ ಕೇವಲ ಒಬ್ಬ ಮಾನಸಿಕ ಆರೋಗ್ಯ ವೈದ್ಯರಿದ್ದಾರೆ. ವಿಶ್ವಸಂಸ್ಥೆಯ ಮಾನದಂಡಗಳ ಪ್ರಕಾರ ಪ್ರತಿ ಲಕ್ಷ ಜನರಿಗೆ 3 ಜನ ಮಾನಸಿಕ ತಜ್ಞರು ಇರಬೇಕೆಂದು ಹೇಳಲಾಗಿದೆ.

mental health also important
mental health also important
author img

By

Published : Jun 19, 2020, 1:06 PM IST

ಯುವ ಪ್ರತಿಭಾವಂತ ಬಾಲಿವುಡ್ ನಟ ಸುಶಾಂತ್ ಸಿಂಗ್ ರಾಜಪೂತ್ ಅವರ ಸಾವಿನ ನಂತರ ಮಾನಸಿಕ ಖಿನ್ನತೆ ಹಾಗೂ ಮಾನಸಿಕ ಕಾಯಿಲೆಯ ವಿಷಯದ ಚರ್ಚೆ ದೇಶದಲ್ಲಿ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಹೊರಗಿನ ಜಗತ್ತಿಗೆ ಗೊತ್ತಾಗದೇ ವ್ಯಕ್ತಿಯನ್ನು ಮೌನವಾಗಿ ಒಳಗಿಂದೊಳಗೇ ಕೊಲ್ಲುವ ಈ ಸಮಸ್ಯೆಯನ್ನು ಪರಿಹರಿಸುವ ಅಗತ್ಯ ಈಗ ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಮಾನಸಿಕ ಖಿನ್ನತೆಯನ್ನು ಹೋಗಲಾಡಿಸಲು ಸೂಕ್ತ ಚಿಕಿತ್ಸಾ ಪದ್ಧತಿ, ಆರೋಗ್ಯಕರ ಜೀವನ ಶೈಲಿಗಳನ್ನು ಅಳವಡಿಸಿಕೊಳ್ಳುವುದು ಅಗತ್ಯ.

ಮಾನಸಿಕ ಆರೋಗ್ಯ - ಭಾರತದ ಅಂಕಿ ಸಂಖ್ಯೆಗಳು ಏನು ಹೇಳುತ್ತವೆ?

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, 90 ಮಿಲಿಯನ್ ಅಂದರೆ ಶೇ 7.5 ರಷ್ಟು ಭಾರತೀಯರು ಒಂದಿಲ್ಲೊಂದು ರೀತಿಯ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಮಾರಣಾಂತಿಕ ಕಾಯಿಲೆಗಳನ್ನು ಹೊರತುಪಡಿಸಿದರೆ ಮಾನಸಿಕ ಕಾಯಿಲೆಗಳ ಅಪಾಯವೇ ಭಾರತದಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. 2017 ರಲ್ಲಿದ್ದಂತೆ ಪ್ರತಿ 7 ಭಾರತೀಯರಲ್ಲಿ ಓರ್ವ ವ್ಯಕ್ತಿ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದಾನೆ. 1990 ರಿಂದೀಚಿಗೆ ಮಾನಸಿಕ ಕಾಯಿಲೆಯ ಪ್ರಮಾಣ ಬಹುತೇಕ ದುಪ್ಪಟ್ಟಾಗಿದೆ. 2016 ರ ಅಂಕಿ ಅಂಶಗಳ ಪ್ರಕಾರ, ಆತ್ಮಹತ್ಯೆ ಮಾಡಿಕೊಂಡ 15 ರಿಂದ 39 ವಯೋಮಾನದ ವ್ಯಕ್ತಿಗಳ ಸಾವಿಗೆ ಮಾನಸಿಕ ಕಾಯಿಲೆಯೇ ಪ್ರಮುಖ ಕಾರಣವಾಗಿತ್ತು.

1990 ರಿಂದ 2017 ರ ಅವಧಿಯಲ್ಲಿ ಪ್ರತಿ 7 ರಲ್ಲಿ ಓರ್ವ ಭಾರತೀಯ ಖಿನ್ನತೆ, ಉದ್ವೇಗ, ಸ್ಕಿಜೋಫ್ರೇನಿಯಾದಿಂದ ಬಳಲುತ್ತಿದ್ದರು ಎಂದು ಅಧ್ಯಯನವೊಂದರಲ್ಲಿ ತಿಳಿದು ಬಂದಿದೆ. ಮಾನಸಿಕ ಅನಾರೋಗ್ಯದ ಸಾಂಕ್ರಾಮಿಕತೆಯಿಂದ ಭಾರತ ಬಳಲುತ್ತಿದೆ ಎಂಬುದು ಇದರಿಂದ ಸಾಬೀತಾಗಿದೆ.

ಮಾನಸಿಕ ಆರೋಗ್ಯದ ಚಿಕಿತ್ಸೆಗಾಗಿ ಭಾರತ ತೀರಾ ಕಡಿಮೆ ಹಣ ಖರ್ಚು ಮಾಡುತ್ತಿದೆ. 2018 ರ ಹಣಕಾಸು ವರ್ಷದಲ್ಲಿ ರಾಷ್ಟ್ರೀಯ ಮಾನಸಿಕ ಆರೋಗ್ಯ ಕಾರ್ಯಕ್ರಮ ಯೋಜನೆಗೆ 50 ಕೋಟಿ ರೂ. ಮೀಸಲಿಡಲಾಗಿತ್ತು. 2019 ರಲ್ಲಿ ಇದನ್ನು 40 ಕೋಟಿ ರೂ. ಗಳಿಗೆ ಇಳಿಸಲಾಯಿತು.

ಭಾರತದಲ್ಲಿ ಪ್ರತಿ 1 ಲಕ್ಷ ಜನರಿಗೆ ಕೇವಲ ಒಬ್ಬ ಮಾನಸಿಕ ಆರೋಗ್ಯ ವೈದ್ಯರಿದ್ದಾರೆ. ವಿಶ್ವಸಂಸ್ಥೆಯ ಮಾನದಂಡಗಳ ಪ್ರಕಾರ ಪ್ರತಿ ಲಕ್ಷ ಜನರಿಗೆ 3 ಜನ ಮಾನಸಿಕ ತಜ್ಞರು ಇರಬೇಕೆಂದು ಹೇಳಲಾಗಿದೆ.

ಕೊರೊನಾ ಜೊತೆಗೆ ಮಾನಸಿಕ ಆರೋಗ್ಯಕ್ಕಾಗಿಯೂ ಹೋರಾಟ ಅಗತ್ಯ

ಸುಶಾಂತ್ ಸಿಂಗ್ ರಾಜಪೂತ್ ಅವರ ಸಾವು ಇಡೀ ದೇಶಕ್ಕೇ ಆಘಾತಕಾರಿಯಾಗಿತ್ತು. ಇಷ್ಟಕ್ಕೂ ಸುಶಾಂತ್ ಯಾಕೆ ಆತ್ಮಹತ್ಯೆ ಮಾಡಿಕೊಂಡರು ಎಂಬ ಪ್ರಶ್ನೆ ಬಾಲಿವುಡ್​ ಸೆಲೆಬ್ರಿಟಿಗಳಿಂದ ಹಿಡಿದು ಅವರ ಅಭಿಮಾನಿಗಳವರೆಗೆ ಎಲ್ಲರಿಗೂ ಕಾಡಿತು. ಅವರ ಸಾವಿನ ನಂತರ ದೇಶದ ಜನತೆ ಹಾಗೂ ವಿಶೇಷವಾಗಿ ಯುವಜನತೆ ಮಾನಸಿಕ ಆರೋಗ್ಯದ ಬಗ್ಗೆ ಹೆಚ್ಚಾಗಿ ಕಾಳಜಿ ವ್ಯಕ್ತಪಡಿಸತೊಡಗಿದರು. ಕೆಟ್ಟ ಪರಿಸ್ಥಿತಿಯಲ್ಲಿರುವಾಗ ತಮ್ಮ ಮನಸ್ಸಿನಲ್ಲಿನ ವಿಚಾರಗಳನ್ನು ಆಪ್ತರೊಂದಿಗೆ ಹಂಚಿಕೊಳ್ಳುವ ಬಗ್ಗೆ ಎಲ್ಲೆಡೆಯಿಂದ ಸಲಹೆಗಳು ಕೇಳಿಬರತೊಡಗಿದವು. ಈಗ ಇಡೀ ದೇಶ ಕೊರೊನಾ ವೈರಸ್​ ವಿರುದ್ಧ ದೊಡ್ಡ ಮಟ್ಟದ ಹೋರಾಟದಲ್ಲಿ ತೊಡಗಿಕೊಂಡಿದೆ. ಆದರೆ ಮಾನಸಿಕ ಆರೋಗ್ಯದ ಬಗ್ಗೆಯೂ ದೇಶ ಬಹಳಷ್ಟು ಕಾಳಜಿ ವಹಿಸುವ ಮೂಲಕ ನೊಂದವರ ಜೀವಗಳನ್ನು ಉಳಿಸಲು ಮುಂದಾಗಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.